ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಂಕಿತರು ಗುಣಮುಖರಾದಾಗಸಿಗುವ ಆನಂದ ಅನನ್ಯ’

Last Updated 8 ಮೇ 2021, 3:48 IST
ಅಕ್ಷರ ಗಾತ್ರ

ಸುರಪುರ: ನಾನು ಕಳೆದ 11 ವರ್ಷಗಳಿಂದ ಸುರಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿನ ಕೋವಿಡ್ ಆರೈಕೆ ಕೇಂದ್ರದ 50 ಹಾಸಿಗೆಯ ವಿಭಾಗದ ಮೇಲುಸ್ತುವಾರಿ ವಹಿಸಿಕೊಂಡಿದ್ದೇನೆ.

ಕೊರೊನಾ ಸೋಂಕು ಹರಡುವಿಕೆ ಆರಂಭವಾದ ದಿನದಿಂದಲೂ ಆಸ್ಪತ್ರೆಯೆ ಮನೆಯಂತಾಗಿದೆ. ಎರಡು ಶಿಫ್ಟ್ ಇದ್ದರೂ ಅಗತ್ಯ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡುತ್ತಿದ್ದೇನೆ. ಶುಶ್ರೂಷಕರಿಗೆ ಸಲಹೆ ನೀಡುತ್ತೇನೆ.

ಕೋವಿಡ್ ರೋಗಿಗಳು ಆತಂಕಕ್ಕೆ ಒಳಗಾಗುವುದು ಸಹಜ. ಅವರಲ್ಲಿ ಆತ್ಮಸ್ಥೈರ್ಯ ತುಂಬಿ, ಮಾರ್ಗದರ್ಶನ ನೀಡುತ್ತಿದ್ದೇನೆ.

ಕೊರೊನಾ ಎರಡನೇ ಅಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸವಾಲಾಗಿ ಪರಿಣಮಿಸಿದೆ. ಆದರೂ ಎದೆಗುಂದದೆ ವೈದ್ಯರ ಮಾರ್ಗದರ್ಶನದಲ್ಲಿ ಉತ್ಸಮ ಚಿಕಿತ್ಸೆ ನೀಡುತ್ತಿದ್ದೇವೆ. ಸೋಂಕಿತರು ಗುಣಮುಖರಾಗಿ ಮನೆಗೆ ತೆರಳುವಾಗ ನಮಗೆ ಆಗುವ ಆನಂದ ಅನನ್ಯ. ನಮ್ಮ ಕರ್ತವ್ಯ ಸಾರ್ಥಕ ಎಂದೆನಿಸುತ್ತದೆ.

-ಸುಕುಮಾರಿ ಇಮ್ಯಾನ್ಯೂಲ್, ಹಿರಿಯ ಶುಶ್ರೂಷಕಿ, ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT