ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡನ್ ಮೇಲೆ ಕ್ರಮಕ್ಕೆ ಆಗ್ರಹ

Last Updated 24 ಸೆಪ್ಟೆಂಬರ್ 2022, 5:33 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಗಂಜ್ ಮೌನೇಶ್ವರ ದೇವಸ್ತಾನದ ಹತ್ತಿರದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ವಸತಿನಿಲಯದ ವಾರ್ಡನ್‌ ಮೇಲೆ ಶೀಘ್ರ ಕ್ರಮ ಕೈಗೊಳ್ಳಲು ಆಗ್ರಹಿಸಿ ನಮ್ಮ ಕರುನಾಡು ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಪಂಚಾಯಿತಿ ಎದುರುಗಡೆ ಪ್ರತಿಭಟನೆ ನಡೆಸಿದರು.

ವಾರ್ಡನ್ ಮೆನು ಪ್ರಕಾರ ಊಟ ನೀಡುತ್ತಿಲ್ಲ, ಪ್ರಶ್ನಿಸಿದರೆ ಅವಾಚ್ಯವಾಗಿ ಬೈಯುತ್ತಾರೆ, ವಿದ್ಯಾರ್ಥಿಗಳಲ್ಲೆ ಜಗಳಕ್ಕೆ ಉತ್ತೇಜನ ನೀಡುತ್ತಿರುವ ಕುರಿತು ಈ ಮೊದಲು ಪ್ರತಿಭಟನೆ ನಡೆಸಿದಾಗ 3 ದಿನಗಳಲ್ಲಿ ಅವರನ್ನು ಅಮಾನತು ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಈವರೆಗೂ ಕ್ರಮಕೈಗೊಂಡಿಲ್ಲ. ಕೂಡಲೆ ಕ್ರಮ ಕೈಗೊಳ್ಳಬೇಕು, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ರವಿ ಮುದ್ನಾಳ ಆಗ್ರಹಿಸಿದರು.

ಶಂಕರ ಕಾಳಬೆಳಗುಂದಿ, ಗೋವಿಂದ ಚವ್ಹಾಣ, ನಿರಂಜನ ಎಸ್.ಕೆ., ಮಶೆಪ್ಪ ನಾಯಕ, ಕರಣ ಪವಾರ, ರೆಡ್ಡಿ ನಾರಾಯಣ, ವಿಜಯ, ಖುದ್ದೂಸ ಶಾಂತಿನಗರ, ವಿದ್ಯಾರ್ಥಿಗಳಾದ ಪ್ರೇಮಕುಮಾರ, ತೇಜು, ಗೋವಿಂದ, ಆನಂದ, ಅನೀಲ, ಮಲ್ಲೇಶ, ಮಾಳಪ್ಪ, ಕುಮಾರ, ಭೀಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT