ಗುರುವಾರ , ಆಗಸ್ಟ್ 5, 2021
21 °C

ಪಿಯು: ವಿದ್ಯಾರ್ಥಿಗಳ ತೇರ್ಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಾರೆ.

ಸುರಪುರ ಶೆಟ್ಟಿ ವಿಜ್ಞಾನ ಕಾಲೇಜು:

ಯಾದಗಿರಿ: ಸುರಪುರ ನಗರದ ಎನ್‌ಎನ್ ಶೆಟ್ಟಿ ಪದವಿ ಪೂರ್ವ ವಿಜ್ಞಾನ ವಿಭಾಗದಲ್ಲಿ ಶೇ 98ರಷ್ಟು ಫಲಿತಾಂಶ ಬಂದಿದೆ. ಪ್ರತೀಕ್ಷಾ ಹಣಮಂತರಾಯ ಶೇ 93.5 ಸುರಪುರ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮುಸ್ಕಾನಾ ಶೇ 90.1, ರೇಖಾ ಅಲ್ದಾಳ ಶೇ 90, ಶ್ರೀಕಾಂತ ಶೇ 88.3, ಐಶ್ವರ್ಯಾ ಸಿ. ಶೇ 87.8, ಗಾಯತ್ರಿ ಜೋಷಿ ಶೇ 87, ಆಯುಷ್ಯ ಅಮರ ಶೇ 86.3, ಪ್ರಿಯಾಂಕಾ ಗೋಪಣ್ಣ ಶೇ 86, ಮತ್ತು 8 ಡಿಸ್ಟಿಂಕ್ಷನ್, 27 ಪ್ರಥಮ ದರ್ಜೆ ಹಾಗೂ 19 ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶೆಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬೂದೆಪ್ಪ ಎನ್ ಶೆಟ್ಟಿ, ಕಾರ್ಯದರ್ಶಿ ತಿರುಪತಿ ಎನ್.ಶೆಟ್ಟಿ, ಪ್ರಾಂಶುಪಾಲರಾದ ಲಕ್ಷ್ಮಿ ಬಿ. ಶೆಟ್ಟಿ ಹಾಗೂ ಉಪನ್ಯಾಸಕ ಗುರುರಾಜ ಕುಲಕರ್ಣಿ, ರಾಜಶೇಖರ್ ದೇಸಾಯಿಮಠ, ರಾಜೇಶ್‌ಗೌಡ, ಶಿವಕುಮಾರ್, ಡಾ. ಹಳ್ಳೆಪ್ಪ ಲಿಂಗದಳ್ಳಿ, ಕಾಳಪ್ಪ ಪತ್ತಾರ್, ಛರಿಸ್ಮಾ, ನಾಗರಾಜ ಹರ್ಷ ವ್ಯಕ್ತಪಡಿಸಿದ್ದಾರೆ.

ಮಹಾತ್ಮಗಾಂಧಿ ಪಿಯು ಕಾಲೇಜು: ಯಾದಗಿರಿ ನಗರದ ಮಹಾತ್ಮಗಾಂಧಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಶಿಫಾ ರುಖಿಯಾ 513 ಅಂಕ ಪಡೆದಿದ್ದಾರೆ. 1 ಡಿಸ್ಟಿಂಕ್ಷನ್, 13 ಪ್ರಥಮ ಶ್ರೇಣಿ, 11 ದ್ವೀತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಅಧ್ಯಕ್ಷ ನಾಶಿರ ಅಹ್ಮದ್ ಹಾಗೂ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಅಭಿನಂದಿಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.