ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿನಮನ | ರಾಜಾ ವೆಂಕಟಪ್ಪ ನಾಯಕ ಸಭ್ಯ ರಾಜಕಾರಣಿ

Published 28 ಫೆಬ್ರುವರಿ 2024, 14:14 IST
Last Updated 28 ಫೆಬ್ರುವರಿ 2024, 14:14 IST
ಅಕ್ಷರ ಗಾತ್ರ

ನಾರಾಯಣಪುರ: ಇಲ್ಲಿನ ಗ್ರಂಥಾಲಯದಲ್ಲಿ ಬುಧವಾರ ಸ್ಥಳೀಯ ಪತ್ರಕರ್ತರಿಂದ ಶಾಸಕ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದೇ ವೇಳೆ ಮುಖಂಡ ಚಿದಂಬರ ದೇಸಾಯಿ ಮಾತನಾಡಿ, ‘ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಓರ್ವ ಧೀಮಂತ ನಾಯಕರಾಗಿದ್ದರು. ಅಂತಹ ಮೇರು ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡ ನಾವು ಅನಾಥರಂತಾಗಿದ್ದೇವೆ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ’ ಎಂದರು.

ಪತ್ರಕರ್ತ ಚಂದ್ರಶೇಖರ ನಾಯ್ಡು ಮಾತನಾಡಿ, ರಾಜಾ ವೆಂಕಟಪ್ಪನಾಯಕ ಅವರು ಸಭ್ಯ ಹಾಗೂ ಮಾಧ್ಯಮಸ್ನೇಹಿ ರಾಜಕಾರಣಿಯಾಗಿದ್ದರ ಎಂದರು.

ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.

ಪ್ರಮುಖರಾದ ನಾರಾಯಣರಾವ್ ಕುಲಕರ್ಣಿ, ಹಣಮೇಶ ಕುಲಕರ್ಣಿ, ಯಮನಪ್ಪ ಜಂಜಿನಗಡ್ಡಿ, ಅಂಬ್ರೇಶ್ ನಾಯಕ, ಬಸವರಾಜ ನಡುವಿನಮನಿ, ಸುರೇಶ ನಾಯಕ, ತಿಮ್ಮಣ್ಣ ಮಿಂಚೇರಿ, ಮನೋಹರ ಪೊನ್ನಸ್ವಾಮಿ, ಬಸವರಾಜ ಯರಕಿಹಾಳ, ಗ್ರಾ.ಪಂ. ಸದಸ್ಯರಾದ ಅಮರೇಶ ಅಮರಾವತಗಿ, ಯಂಕೂಬ ಕೂಚಬಾಳ, ವರದಿಗಾರರಾದ ಬಸವರಾಜ ಶಾರದಳ್ಳಿ, ಶಾಂತಿನಾಥ ಒಣಕುದರಿ, ವಿಜಯ ಪಾಟೀಲ್, ರಾಹುಲ್, ನಿಜಾಮುದ್ದೀನ್‌, ಸಂತೋಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವೀರೇಶ ಕಂಬಳಿ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT