ಯಾದಗಿರಿ: ‘ದೀನ, ದಲಿತರ ಜತೆ ದಿವಂಗತ ವಿಶ್ವನಾಥರೆಡ್ಡಿ ಮುದ್ನಾಳ ಊಟ ಮಾಡುತ್ತಿದ್ದರು. ಅದೇ ರೀತಿ ಅವರ ಪುತ್ರ ದಿವಂಗತ ವೆಂಕಟರೆಡ್ಡಿ ಮುದ್ನಾಳ ಮುಂದುವರಿಸಿದ್ದರು. ಹೆಸರು ಉಳಿಸುವಂತ ಕೆಲಸ ಮಾಡಬೇಕು ಎನ್ನಲು ಮುದ್ನಾಳ ಕುಟುಂಬ ಸಾಕ್ಷಿಯಾಗಿದೆ’ ಎಂದು ಮುಖಂಡ ಸಿದ್ದನಗೌಡ ಕಾಡಂನೋರ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳರ ನುಡಿನಮನ ಸಭೆಯಲ್ಲಿ ಮಾತನಾಡಿ, ಪಕ್ಷದಲ್ಲಿ ಎಲ್ಲರಿಗೂ ಗೌರವ ಕೊಡುತ್ತಿದ್ದರು. ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಒತ್ತು ನೀಡಿದ್ದರು ಎಂದು ಹೇಳಿದರು.

ರಾಜ್ಯ ಬಿಜೆಪಿ ನಾಯಕಿ ಲಲಿತಾ ಅನಪುರ ಮಾತನಾಡಿ, ದಿವಂಗತ ವೆಂಕಟರೆಡ್ಡಿ ಮುದ್ನಾಳ ಮರೆಯಲಾದ ಮಾಣಿಕ್ಯ. ತಂದೆಗೆ ಸಮಾನ, ಆತ್ಮೀಯವಾಗಿ ಮಾತನಾಡುತ್ತಿದ್ದರು. ಕಿರಿಯರನ್ನು ಹಿರಿಯರಿಗೆ ಪರಿಚಯ ಮಾಡಿಸುತ್ತಿದ್ದರು ಎಂದರು.

ಮುಖಂಡ ಅಡೆವೆಪ್ಪ ಜಾಕಾ ಸಾಹುಕಾರ ಮಾತನಾಡಿ, ನೊಂದವರಿಗೆ ಸದಾ ನ್ಯಾಯ ಒದಗಿಸುವ ತವಕ ಹೊಂದಿದ್ದ ಅವರು, ಎಲ್ಲ ವರ್ಗದ ಹಿತ ಕಾಪಾಡುವ ಮೂಲಕ ಸರಳತೆಯ ನಾಯಕ ಎನಿಸಿಕೊಂಡಿದ್ದರು. ಬೈದು ಬುದ್ದಿ ಹೇಳಿ ಕೆಲಸ ಮಾಡಿಸುತ್ತಿದ್ದಾರೆ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ದೊಡ್ಡ ಶಕ್ತಿ ಕಳೆದುಕೊಂಡಿದ್ದೇವೆ. ಧೀಮಂತ ನಾಯಕ. ನೇರನುಡಿ ವ್ಯಕ್ತಿತ್ವದ ವ್ಯಕ್ತಿಯ ಕಳೆದುಕೊಂಡಿದ್ದೇವೆ ಎಂದರು.

ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ತಂದೆಯವರು ಆಸ್ಪತ್ರೆಯಲ್ಲಿ ಇದ್ದಾಗ
ಮೂರು ತಿಂಗಳು ಜತೆಗೆ ಇದ್ದೆ. ಆದರೆ, ಕೊನೆ ಗಳಿಗೆಯಲ್ಲಿ ಇರಲು ಆಗಲಿಲ್ಲ. ಆದರೆ, ಕಾರ್ಯಕರ್ತರು ನಮ್ಮ ಜೊತೆಗಿದ್ದರೆ ನಾವು ಅವರ ಜೊತೆಗೆ ಇರುತ್ತವೆ. ಯಾರೂ ಮುಟ್ಟಗೋಡದಂತೆ ಮಾಡುತ್ತೇವೆ ಎಂದರು.

ಮುಖಂಡ ಗುರು ಕಾಮಾ, ಜಿಲ್ಲೆಯ ಎರಡು ನಕ್ಷತ್ರಗಳು ಉದುರಿವೆ. ಕಟ್ಟೆಯಲ್ಲಿ ನ್ಯಾಯ ತೀರಿಸಿದ್ದರು. ಒಂದೇ ಬಾರಿ ಶಾಸಕರಾಗಿದ್ದರೂ ಹಲವಾರು ಜನಪ್ರಿಯ ಕೆಲಸ ಮಾಡಿದ್ದಾರೆ ಎಂದರು.

ಮುಖಂಡ ಖಂಡಪ್ಪ ದಾಸನ್, ಶಕ್ತಿ, ಸಾಮರ್ಥ್ಯ ಎಲ್ಲರಿಗೂ ಬರುವುದಿಲ್ಲ. ಯಾದಗಿರಿ ಸುಂದರ ನಗರಕ್ಕೆ ವೆಂಕಟರೆಡ್ಡಿ ಮುದ್ನಾಳ ಕೊಡುಗೆ ಇದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಮಿನರೆಡ್ಡಿ ಯಾಳಗಿ ಮಾತನಾಡಿ, ಮುದ್ನಾಳ ಶಾಸಕರಾಗಿದ್ದಾಗ ಯಾದಗಿರಿ ಮತಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಸೇರಿದಂತೆ ಹತ್ತು, ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ಸೇವೆ ಪಕ್ಷಕ್ಕೆ ಹಾಗೂ ಕ್ಷೇತ್ರಕ್ಕೆ ಇನ್ನೂ ಅವಶ್ಯಕತೆ ಇತ್ತು ಎಂದು ಹೇಳಿದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸುನಿತಾ ಚವಾಣ್ ಸೇರಿದಂತೆ ಹಲವರು ಮಾತನಾಡಿದರು.

ಮುಖಂಡರಾದ ರಾಚಣ್ಣಗೌಡ ಮುದ್ನಾಳ, ದೇವಿಂದ್ರನಾಥ ನಾದ, ಮಲ್ಲಣ್ಣಗೌಡ ಹತ್ತಿಕುಣಿ, ಮೇಲಪ್ಪ ಗುಳಗಿ, ಪರುಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಜಿಲ್ಲಾ ಖಜಾಂಚಿ ತಿರುಪತಿ ಪದರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೋನ್ನದ, ಬಸವರಾಜ ವಿಭೂತಹಳ್ಳಿ, ಅಡಿವೆಪ್ಪ ಜಾಕಾ, ಮಾರುತಿ ಕುಲಾಲ್,ಸದಾಶಿವರಡ್ಡಿ ರೊಟ್ನಡಗಿ, ವೆಂಕಟರೆಡ್ಡಿ ಅಬ್ಬೆತುಮಕೂರು, ಬಸವರಾಜ ಪಾಟೀಲ ಬಿಳ್ಹಾರ, ಲಿಂಗಪ್ಪ ಹತ್ತಿಮನಿ, ರಮೇಶ ದೊಡ್ಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ವೀಣಾ ಮೋದಿ, ಎಂ.ಕೆ.ಬೀರನೂರ, ಪರ್ವತರಡ್ಡಿ ಬೆಂಡೆಬೆಂಬಳ್ಳಿ, ರಾಮರೆಡ್ಡಿ ಅಣಬಿ, ಬಸಪ್ಪಗೌಡ ಬೆಳುಗುಂದಿ, ಗೋಪಾಲ ದಾಸನಕೇರಿ, ಎಸ್.ಪಿ.ನಾಡೇಕರ್, ಶಂಕ್ರಣ್ಣ ಸಾಹುಕಾರ ಕರಣಿಗಿ, ಚಂದ್ರಕಾಂತ ಮಡ್ಡಿ, ಆನಂದ ಗಡ್ಡಿಮನಿ, ಅಜೇಯ ಸಿನ್ನೂರ, ಶರಣಗೌಡ ಐಕೂರ, ಸಂಗು ಸಾಹು ಅನವಾರ, ನಾಗಪ್ಪ ಬೆನಕಲ್, ಲಕ್ಷ್ಮಿಪುತ್ರ ಮಾಲಿಪಾಟೀಲ, ಚಂದ್ರಕಲಾ ಮಲೆಮಠ, ಭೀಮಾಬಾಯಿ ಶೆಂಡಿಗಿ ಭಾಗವಹಿಸಿದ್ದರು.

‘ಪ್ರಬಲ ಶಕ್ತಿ ಆಗಿದ್ದ ಮುದ್ನಾಳ’

ಯಾದಗಿರಿ: ಮಾಜಿ ಶಾಸಕ ದಿ.ವೆಂಕಟರೆಡ್ಡಿ ಮುದ್ನಾಳ ಅವರು ಕೇವಲ ಒಬ್ಬ ವ್ಯಕ್ತಿಯಾಗಿ ಇರದೇ ಪ್ರಬಲ ಶಕ್ತಿ ಆಗಿದ್ದರು ಎಂದು ತಾಲ್ಲೂಕು ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್ ಹೇಳಿದರು.

ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಮುದ್ನಾಳ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ದಿ.ವೆಂಕಟರೆಡ್ಡಿ ಮುದ್ನಾಳ ಅವರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜಿಗಾಗಿ ಮತ್ತು ಜಿಲ್ಲಾ ಕೇಂದ್ರವಾಗಲು ಅವರು ಮಾಡಿದ ಹೋರಾಟ ಮರೆಯಲಾಗದು. ಅವರ ರಾಜಕೀಯ ಸಾಮಾಜಿಕ ಶೈಕ್ಷಣಿಕ ಸಾಹಿತಿಕ ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಗಾಧವಾದದು ಎಂದರು.

ಹಿರಿಯ ಮುಖಂಡ ಸಿ.ಎಂ.ಪಟ್ಟೇದಾರ್ ಮಾತನಾಡಿ ನೇರ ನುಡಿ ಧೀರ ನಡೆ ಅವರ ಸರಳ ವ್ಯಕ್ತಿತ್ವ. ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಯಾದಗಿರಿ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಜಾತ್ಯತೀತ ವ್ಯಕ್ತಿಯಾಗಿ ಬಾಳಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಧ್ಯಾಕ್ಷ ಬಸವರಾಜ ಮೋಟ್ನಳ್ಳಿ ಕಸಾಪ ಗೌರವ ಕಾರ್ಯದರ್ಶಿ ಭೀಮರಾಯ ಲಿಂಗೇರಿ ಎಸ್.ಎಸ್.ನಾಯಕ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಸೋಮಶೇಖರ್ ಮಣ್ಣೂರ ಆರ್.ಮಹಾದೇವಪ್ಪಗೌಡ ಅಬ್ಬೆತುಮಕೂರು ಚನ್ನಪ್ಪ ಸಾಹುಕಾರ ಠಾಣಗುಂದಿ ಚಂದ್ರಶೇಖರ ಅರಳಿ ಮಹೇಶ ಹಿರೇಮಠ ವೆಂಕಟೇಶ ಕಲಕಂಬ ಮಹೇಶ ಪಾಟೀಲ ಸುಭಾಷರೆಡ್ಡಿ ನೀಲಕಂಠ ಶೀಲವಂತ ರವಿಂದ್ರ ಹೊಸಮನಿ ವಿಶ್ವನಾಥ ಕಾಜಗಾರ ರಾಮಚಂದ್ರ ದಿಲ್ಲಿಕರ್ ಬಸವಂತ್ರಾಯಗೌಡ ಮಾಲಿ ಪಾಟೀಲ ದೇವಿಂದ್ರರೆಡ್ಡಿ ಯಡ್ಡಳ್ಳಿ ನಾಗೇಂದ್ರ ಜಾಜಿ ಶರಣು ಇಡ್ಲೂರ ಮಲ್ಲು ಹಳಕಟ್ಟಿ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಮುದ್ನಾಳ ಅಭಿಮಾನಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.