ಬುಧವಾರ, ನವೆಂಬರ್ 13, 2019
23 °C

ಪರಿಸರ ಸ್ವಚ್ಚತೆಯಲ್ಲಿ ನಾಗರಿಕರ ಪಾತ್ರ ಮುಖ್ಯ

Published:
Updated:
Prajavani

ಯಾದಗಿರಿ: ಪ್ರಸಕ್ತ ದಿನಗಳಲ್ಲಿ ನಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ನಾವೂ ವಾಸಿಸುವ ಪರಿಸರ ಸ್ವಚ್ಛತೆಗೆ ಒತ್ತು ನೀಡಬೇಕು. ಇದರಲ್ಲಿ ನಾಗರಿಕರ ಸಹಕಾರ ಕೂಡ ಮುಖ್ಯವಾಗಿದೆ ಎಂದು ವೈದ್ಯ ಡಾ.ಸಿ.ಎಂ ಪಾಟೀಲ ಹೇಳಿದರು.

ನಗರದ ಬಸವಯೋಗ ಟ್ರಸ್ಟ್‌ ವತಿಯಿಂದ ಮಾತಾ ಮಾಣಿಕೇಶ್ವರಿ ನಗರದ ಉದ್ಯಾನವನ ಹಾಗೂ ಪ್ರಮುಖ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಬೆಳವಣಿಗೆಯಲ್ಲಿ ಪರಿಸರದ ಸಹಕಾರ ಬಹಳ ಮುಖ್ಯವಾಗಿದೆ. ಪರಿಸರ ಸ್ವಚ್ಛತೆ ಹಾಗೂ ರಕ್ಷಣೆ ಮಾಡುವುದು ನಮ್ಮೆಲ್ಲರ ಜಾವಬ್ದಾರಿಯಾಗಿದೆ. ಇದರಿಂದ ಆರೋಗ್ಯಕರ ವಾತವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಟ್ರಸ್ಟ್‌ನ ಮುಖ್ಯಸ್ಥ, ಯೋಗಗುರು ಸೋಮನಾಥರೆಡ್ಡಿ ಯಲ್ಹೇರಿ ಮಾತನಾಡಿ, ನಾವು ದಿನಾಲೂ ಜನರಿಗೆ ಉಚಿತ ಯೋಗ ಅಭ್ಯಾಸ ಮಾಡಿಸುವ ಜೊತೆಗೆ ಶುದ್ಧ ವಾತಾವರಣ ನಿರ್ಮಾಣ ಮಾಡಲು ಸಮಾನ ಮನಸ್ಕರ ತಂಡದೊಂದಿಗೆ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಲಲಿತಾ ಅನಪುರ ಮಾತನಾಡಿ, ಯೋಗ ತಂಡವು ನಗರದಲ್ಲಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸ್ವಯಂ ಕಾರ್ಯದಲ್ಲಿ ತೊಡಗಿರುವುದು ಇತರರಿಗೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಹೇಬಗೌಡ ಯಡ್ಡಳ್ಳಿ, ಡಾ.ವೀರಭದ್ರಪ್ಪ ಯಲ್ಹೇರಿ, ಶಂಕರರೆಡ್ಡಿ ಗುಂಜನೂರ, ಪಿಎಸ್‍ಐ ಪ್ರಕಾಶ, ಯಾಮರೆಡ್ಡಿ ಮುಂಡಾಸ, ಸುರೇಶ, ಜ್ಯೋತಿ, ಮಲ್ಲಿಕಾರ್ಜುನರೆಡ್ಡಿ ಬಿಳ್ಹಾರ, ಎಂ.ವೆಂಕಟೇಶ, ರಾಮ ಮೋಹನ, ಶಾಂತಯ್ಯ ಹಿರೇಮಠ ಸೇರಿದಂತೆ ಇತರರು ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)