ವಡಗೇರಾ: ‘ಪ್ರತಿಯೊಬ್ಬರೂ ಸಂತರು, ಶಿವಶರಣರು ಆಗಬಹುದು. ಆದರೆ, ಅದಕ್ಕೆ ದೊಡ್ಡ ತ್ಯಾಗವನ್ನು ಮಾಡಬೇಕು. ಆದರೆ, ನಮ್ಮಲ್ಲಿ ಸ್ವಾರ್ಥ ತುಂಬಿರುವುದರಿಂದ ನಾವೆಲ್ಲರೂ ಮನುಷ್ಯರಾಗಿ ಜೀವನ ನಡೆಸುತಿದ್ದೇವೆ’ ಎಂದು ಬೀದರ್ ಕಲಬುರಗಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ ಹೇಳಿದರು.

ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿಯಲ್ಲಿ ಅವರು ಮಾತನಾಡಿದರು.

‘ಸಂತ ಸೇವಾಲಾಲ್ ಮಹಾರಾಜರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರು ಎಲ್ಲಾ ಸಮುದಾಯಕ್ಕೆ ಸಂತರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ತಳ ಸಮುದಾಯದ ಎಲ್ಲರೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂಲ ಮಂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟವನ್ನು ಸರಿಯಾಗಿ ತಿಳಿದುಕೊಂಡಾಗ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ. ಅದಕ್ಕಾಗಿ ಪಾಲಕರು ಲಿಂಗತಾರತಮ್ಯವಿಲ್ಲದೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು’ ಎಂದು ತಿಳಿಸಿದರು.

ಬಂಜಾರ ಸಮುದಾಯದ ಮುಖಂಡರಾದ ಬಸವರಾಜ ರಡ್ಡೆಪ್ಪ ರಾಠೋಡ, ಲಕ್ಷ್ಮಣನಾಯಕ, ಖೇಮು ಚವ್ಹಾಣ, ಬಸವರಾಜ ಚವ್ಹಾಣ, ಬಸವರಾಜ ಎಲ್.ರಾಠೋಡ, ರಾಜು ಚವ್ಹಾಣ, ಕಮಲಾ ನಾಯಕ ಚವ್ಹಾಣ, ಡಾಕಪ್ಪ ಚವ್ಹಾಣ, ಪಂಪಾನಾಯಕ ಚವ್ಹಾಣ, ರಮೇಶ ಚವ್ಹಾಣ, ವೆಂಕಟೇಶ ಪವಾರ, ಬಸವರಾಜ ದಳಪತಿ, ಗೋವಿಂದ ಕಾರಬಾರಿ, ಗ್ರಾ.ಪಂ ಮಾಜಿ ಸದಸ್ಯರಾದ ಶಿವಪ್ಪ ಡಿ., ಶರಣು ಕುರಿ, ಅಜ್ಮೀರ ಬಾಷಾ, ನಾಗಪ್ಪ ಹಡಪದ, ಮಲ್ಲಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.