ಸೈದಾಪುರ: ಗ್ರಾಮದಲ್ಲಿರುವ ಹಜರತ್ ಶಾ ಖಾಜಾ ಬಂದೇನವಾಜ್ ದರ್ಗಾ ಹಿಂದೂ-ಮುಸ್ಲಿಂ ಸಮುದಾಯದವರ ಶ್ರದ್ಧಾ-ಭಕ್ತಿಯ ಕೇಂದ್ರ ಹಾಗೂ ಭಾವೈಕ್ಯದ ಪ್ರತೀಕವಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ಪಟ್ಟಣದ ಜಾಮೀಯಾ ಮಸೀದಿಯಿಂದ ಬುಧವಾರ ಸಂಜೆ ನಡೆದ ಗಂಧ ಮೆರವಣಿಗೆ ಹಜರತ್ ಶಾ ಖಾಜಾ ಬಂದೇನವಾಜ್ ದರ್ಗಾಕ್ಕೆ ತಲುಪಿತು. ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದ ನಂತರ ಹಫೀಜ್ ಶೇಖ್ ಸೈದಾಪುರ, ಇಬ್ರಾಹಿಂ ಶೇಖ್ ರಾಂಪುರ, ಇಸಾಖ್ ಶೇಕ್ ಬಾಲಚೇಡ, ನಬೀಚಾಂದ್ ಸೈದಾಪುರ ಅವರು ಗದ್ದುಗೆಗೆ ಗಂಧ ಧರಿಸುವ ಮೂಲಕ ಉರುಸ್ಗೆ ಚಾಲನೆ ನೀಡಿದರು.

ಗ್ರಾಮದಿಂದ ಹೊರಟ ಜ್ಯೋತಿ ಗುರುವಾರ ಬೆಳಿಗ್ಗೆ ದರ್ಗಾ ತಲುಪಿತು. ಸಂಜೆ ಕೈಕುಸ್ತಿ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಆಗಮಿಸಿದ್ದರು.

ಗ್ರಾಮ ಪಂಚಾಯಿತಿಯಿಂದ ಉರುಸ್ಗೆ ಸಕಲ ಸಿದ್ಧತೆ: ಬಂದೇನವಾಜ್ ಉರುಸ್ ಹಿನ್ನಲೆಯಲ್ಲಿ ಗ್ರಾಮಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಒದಗಿಸಿಕೊಟ್ಟಿದೆ. ಬೀದಿಗಳಲ್ಲಿ ದೀಪದ ವ್ಯವಸ್ಥೆ ಮಾಡಲಾಗದೆ. ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬ್ಲೀಚಿಂಗ್ ಫೌಡರ್, ಭಕ್ತರು ತಂಗಲು ಜಂಗಲ್ ಕಟಿಂಗ್ ಸೇರಿದಂತೆ ದರ್ಗಾದಲ್ಲಿ ಕೂಡ ಹಲವು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ರಡ್ಡೆಪ್ಪ ಸೈದಾಪುರ ತಿಳಿಸಿದರು.

ಬಂದೇನವಾಜ್ ಉರುಸ್ ಹಿಂದೂ-ಮುಸ್ಲಿಂರ ಭಾವೈಕ್ಯದ ಯಾತ್ರಾಸ್ಥಳವಾಗಿದೆ. ಜಾತ್ರೆಗೆ ವಿವಿಧ ಪ್ರದೇಶಗಳಿಂದ ನೂರಾರು ಭಕ್ತರು ಆಗಮಿಸುತ್ತಾರೆ
ಹಫೀಜ್ ಶೇಖ್ ಸೈದಾಪುರ ಕಾರ್ಯದರ್ಶಿ ಜಾಮಿಯಾ ಮಸೀದಿ ಸೈದಾಪುರ

ಖಾಜಾ ಬಂದೇನವಾಜ್ ಜಾತ್ರೆ ಎಲ್ಲ ಜಾತಿ ಮತ ಧರ್ಮಗಳನ್ನು ಮೀರಿದ್ದು. ಇಲ್ಲಿ ಎಲ್ಲರು ಒಟ್ಟಾಗಿ ಸೇರಿಕೊಂಡು ಶ್ರದ್ಧೆ-ಭಕ್ತಿಯಿಂದ ಉರುಸ್ ಆಚರಣೆ ಮಾಡುವುದೇ ವಿಶೇಷ
ಬಸವರಾಜ ನಾಯಕ ಸೈದಾಪುರ

ಬಂದೇನವಾಜ್ ಜಾತ್ರೆ ಕುಟುಂಬಸ್ಥರನ್ನು ಒಗ್ಗೂಡಿಸುವ ಕೇಂದ್ರಬಿಂದು. ಗೆಳೆಯರು ಎಲ್ಲರು ಸೇರಿಕೊಂಡು ಉರುಸ್ ಆಚರಣೆ ಮಾಡುವಾಗ ಚಿಕ್ಕ ವಯಸ್ಸಿನ ಹಳೆಯ ನೆನಪುಗಳನ್ನು ಮರುಕಳಿಸುತ್ತದೆ
ಮಾಳಪ್ಪ ಅರಿಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.