ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಶ್ರೇಷ್ಠ’ ಪರೀಕ್ಷೆಯಲ್ಲಿ ಸತೀಶ ಚವಾಣ್‌ ಸಾಧನೆ

ಕೇಂದ್ರ ಪುರಸ್ಕೃತ ಎನ್‌ಟಿಎ ಶ್ರೇಷ್ಠ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 74ನೇ ರ‍್ಯಾಂಕ್
Published 26 ಜೂನ್ 2024, 15:55 IST
Last Updated 26 ಜೂನ್ 2024, 15:55 IST
ಅಕ್ಷರ ಗಾತ್ರ

ಯಾದಗಿರಿ: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ದೇಶದ ಉತ್ತಮ ಖಾಸಗಿ ವಸತಿ ಶಾಲೆಗಳಲ್ಲಿ 9 ಹಾಗೂ 11ನೇ ತರಗತಿಗೆ ಉಚಿತ ಪ್ರವೇಶ ನೀಡಲು ಎನ್‌ಟಿಎ ನಡೆಸುವ ‘ಶ್ರೇಷ್ಠ ಎನ್‌ಇಟಿಎಸ್‌’ ಪರೀಕ್ಷೆಯಲ್ಲಿ ಜಿಲ್ಲೆಯ ಸತೀಶ ಚವಾಣ್‌ ರಾಷ್ಟ್ರ ಮಟ್ಟದಲ್ಲಿ 74ನೇ ರ‍್ಯಾಂಕ್ ಪಡೆದಿದ್ದಾರೆ.

ಸಿಬಿಎಸ್‌ಸಿ ವಸತಿ ಶಾಲೆಯ 11ನೇ ತರಗತಿಗೆ ಪ್ರವೇಶ ಪಡೆದುಕೊಂಡಿದ್ದಾನೆ.

2022-23ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 167ನೇ ರ‍್ಯಾಂಕ್‌ ಮತ್ತು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಹೈದರಾಬಾದ್‌ನ ಪ್ರತಿಷ್ಠಿತ ಸಿಆರ್‌ಪಿಎಫ್ (ಸಿಬಿಎಸ್‌ಇ) ಶಾಲೆಯಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದರು.

ವಿದ್ಯಾರ್ಥಿಯ ಸಾಧನೆಗೆ ಪಾಲಕ ಶರಣಬಸಪ್ಪ ಎಂ.ಹೊಸಳ್ಳಿ, ಹೊಸಳ್ಳಿ ತಾಂಡಾದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT