ಗುರುವಾರ , ಆಗಸ್ಟ್ 5, 2021
21 °C

‘ಸೋಂಕು ನಿಯಂತ್ರಣಕ್ಕೆ ಸ್ವಯಂ ದಿಗ್ಬಂಧನ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರತಿಯೊ‌ಬ್ಬರೂ ಸ್ವಯಂ ಪ್ರೇರಿತರಾಗಿ ಸ್ವಯಂ ದಿಗ್ಬಂಧನ ಹಾಕಿಕೊಳ್ಳುವ ಅಗತ್ಯವಿದೆ ಎಂದು ಶಾಸಕ ರಾಜೂಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ಬಿಜೆಪಿ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕೊರೊನಾ ನಿಯಂತ್ರಣ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾ ತಡೆಗೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಎಲ್ಲರೂ ಸರ್ಕಾರದ ಆದೇಶವನ್ನು ಪಾಲಿಸಿದಲ್ಲಿ ಶೀಘ್ರದಲ್ಲಿಯೇ ಕೊರೊನಾವನ್ನು ಜಯಿಸಬಹುದಾಗಿದೆ ಎಂದರು.

ಸರ್ಕಾರ ರಾಜ್ಯದಲ್ಲಿ 537 ಆಸ್ಪತ್ರೆಗಳನ್ನು ಐಸೋಲೆಷನ್ ಚಿಕಿತ್ಸಾ ಕೇಂದ್ರಗಳಾಗಿ ಪರಿವರ್ತನೆ ಮಾಡಿ, ಕೊರೊನಾ ವಾರ್ ರೂಂಗಳನ್ನು ಸ್ಥಾಪನೆ ಮಾಡಿದೆ. ಎಲ್ಲಾ ಬಡ ಕುಟುಂಬಗಳಿಗೆ ಎರಡು ತಿಂಗಳಿಗೆ ಸಾಕಾಗುವಷ್ಟು ಮುಂಗಡ ಪಡಿತರ ನೀಡಿದೆ. ಇಲ್ಲಿವರೆಗೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಿದೆ ಎಂದು ತಿಳಿಸಿದರು.

ಹುಣಸಗಿ ಜಿ.ಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮೇಲಪ್ಪ ಗುಳಗಿ, ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಪಾಟೀಲ, ಎಪಿಎಂಸಿ ಉಪಾಧ್ಯಕ್ಷ ದುರ್ಗಪ್ಪ ಗೋಗಿಕರ್ ಮಾತನಾಡಿದರು.

ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಮಲಗಲದಿನ್ನಿ, ತಿಪ್ಪಣ್ಣ ಚಂದಾ, ಮಲ್ಲಿಕಾರ್ಜುನ ಸ್ವಾಮಿ ಹೀರೆಮಠ, ಬಸಣ್ಣ ದೇಸಾಯಿ, ನಾನಗೌಡ.ಎಸ್.ಪಾಟೀಲ, ಸಂಗಣ್ಣ ವೈಲಿ, ಬಸನಗೌಡ ಅಳ್ಳಿಕೋಟೆ, ಸಂಗನಗೌಡ ಪಾಟೀಲ ವಜ್ಜಲ, ಸಿದ್ದನಗೌಡ ಕರಿಭಾವಿ, ಕೃಷ್ಣಾ ರೆಡ್ಡಿ ಮುದನೂರು, ತಾಲ್ಲೂಕು ಪಂಚಾಯಿತಿ ಸದಸ್ಯ ಭೀಮರಾಯ ದೊಡ್ಡಮನಿ, ಸೋಮಣ್ಣ ಮೇಟಿ, ಮುರಿಗೆಣ್ಣ ದೇಸಾಯಿ, ಗೌಡಪ್ಪ ಬಾಲಗೌಡ್ರ, ವಿನೋದ ದೊರೆ, ಆನಂದ ಬಾರಿಗಿಡದ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು