ಕೆಂಭಾವಿ: ‘ಯಾವುದೆ ಸಮುದಾಯದ ಅಥವಾ ಸರ್ಕಾರಿ ಜಾಗವನ್ನು ಖಾಸಗಿಯವರು ಒತ್ತುವರಿ ಮಾಡಿದರೆ ಅದು ಕಾನೂನಾತ್ಮಕವಾಗಿ ತಪ್ಪು. ಅಂಥಾ ಜಾಗವನ್ನು ಮರಳಿ ಅವರ ಸುಪರ್ದಿಗೆ ವಹಿಸುವುದು ಅಧಿಕಾರಿಗಳ ಕರ್ತವ್ಯ’ ಎಂದು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ ಹೇಳಿದರು.

ಪಟ್ಟಣದ ಸರ್ವೆ ನಂ. 612ರ ಜಾಗವನ್ನು ಒತ್ತುವರಿ ಮಾಡಿಕೊಡಿದ್ದಾರೆ ಎಂದು ಆರೋಪಿಸಿ ಕಳೆದ ಮೂರು ದಿನಗಳಿಂದ ಹಾಲುಮತ ಸಮಾಜದವರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಧರಣಿ ನಿರತರನ್ನು ಮತ್ತು ಪುರಸಭೆ, ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ ನಂತರ ಸುದ್ದಿಗಾರರೋಂದಿಗೆ ಅವರು ಮಾತನಾಡಿದರು.

‘ಈ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದು ಹಲವು ದಿನಗಳಿಂದ ಈ ಬಗ್ಗೆ ಹಾಲುಮತ ಸಮಾಜ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಬೀರಪ್ಪ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಕೆಲವರು ಒತ್ತಾಯಪೂರ್ವಕವಾಗಿ ಒತ್ತುವರಿ ಮಾಡಿಕೊಂಡು ಶೆಡ್ ನಿರ್ಮಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಅವರ ಜೊತೆ ಮಾತನಾಡಿದ್ದು ಕೂಡಲೆ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸುವುದಾಗ ತಿಳಿಸಿದ್ದಾರೆ’ ಎಂದರು.

ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಮಾಳಹಳ್ಳಿ ಮಾಳಿಂಗರಾಯ ದೇವಸ್ಥಾನದ ಕೆಂಚರಾಯ ಮುತ್ಯಾ ಮಾತನಾಡಿ, ‘ನಮ್ಮ ಸಮಾಜದ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಕೆಲವರು ಅತಿಕ್ರಮಣ ಮಾಡಿ ಶೇಡ್ಗಳನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ಸಮಾಜದ ಜೊತೆ ಹೋರಾಟ ಮಾಡಲು ಮುಂದಾಗಿದ್ದು ಹೋರಾಟಕ್ಕ ಭಂಗ ತರಲು ಕೆಲವರು ವಿದ್ಯುತ್ ಕಡಿತ ಮಾಡುವುದು ಸೇರಿದಂತೆ ಹಲವು ತೊಂದರೆಗಳನ್ನು ನೀಡುತ್ತಿದ್ದಾರೆ. ಆದರೆ ನಾವು ಇದಕ್ಕೆ ಬಗ್ಗುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ’ ಎಂದರು.

‘ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹಾಲುಮತ ಸಮಾಜದವರು ಆಗಮಿಸಿ ಪಟ್ಟಣ ಬಂದ್ ಮಾಡುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಯೂಸೂಫ್, ಕಂದಾಯ ನಿರೀಕ್ಷಕ ರಾಜೆಸಾಬ ಕಂದಗಲ್, ಸಮಾಜದ ಪ್ರಮುಖರಾದ ಶರಣಪ್ಪ ಅಂಗಡಿ, ಕೆಂಚಪ್ಪ ಪೂಜಾರಿ, ಮುದಕಣ್ಣ ಅಮ್ಮಾಗೋಳ, ಮುದಿನಿಂಗಪ್ಪ ದೊಡಮನಿ, ಶರಣಪ್ಪ ಯಾಳಗಿ, ಸಿದ್ದಣ್ಣ ಗೋಡಿಹಾಳ, ಸಿದ್ದಪ್ಪ ಹೊಟ್ಟಿ, ಕೆಂಜೋಡೆಪ್ಪ ಹೊಂಬಳಕಲ್ಲ, ಸಿದ್ದಪ್ಪ ಪೂಜಾರಿ ಸಾಲಿಮನಿ, ರಾಯಣ್ಣ ಸೇರಿ ಹಲವರಿದ್ದರು.