ನಾಳೆಯಿಂದ ಶ್ರಾವಣ ಸಂಭ್ರಮ

7

ನಾಳೆಯಿಂದ ಶ್ರಾವಣ ಸಂಭ್ರಮ

Published:
Updated:

ಯಾದಗಿರಿ: ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಆಗಸ್ಟ್ 13ರಿಂದ ಮೂರು ದಿನ ಶ್ರಾವಣ ಸಂಭ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ತಿಳಿಸಿದ್ದಾರೆ.

ಆಗಸ್ಟ್‌ 13ರಂದು ನಗರದ ಸರ್ವಜ್ಞ ಕಾಲೇಜಿನಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಸಮಾರಂಭದ ಮೊದಲ ಮಾಲಿಕೆಯನ್ನು ಖಾಸಾ ಮಠದ ಪೂಜ್ಯ ಶಾಂತವೀರ ಮುರಗರಾಜೇಂದ್ರ ಸ್ವಾಮೀಜಿ ಉದ್ಘಾಟಿಸುವರು. ಸಾಹಿತಿ ಮಂಜುನಾಥ ಜುನಗುಂಡ ಉಪನ್ಯಾಸ ನೀಡುವರು. ಪಾಂಶುಪಾಲ ಗಂಗಾಧರ ಬಡಿಗೇರ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಸಾಹಿತಿ ಅಯ್ಯಣ್ಣ ಹುಂಡೆಕರ್, ಅಲ್ಲಮಪ್ರಭು ಅಕಾಡೆಮಿ ಅಧ್ಯಕ್ಷ ಸೋಮಶೇಖರ ಮಣ್ಣೂರ ಭಾಗವಹಿಸುವರು.

ಆಗಸ್ಟ್‌ 20ರಂದು ಶಹಾಪುರ ಪಟ್ಟಣದ ದೇಶಮುಖ ಕಾಲೇಜಿನಲ್ಲಿ ಆಯೋಜಿಸಿರುವ ಮಾಲಿಕೆ ಎರಡನ್ನು ಬ್ಲಾಕ್ ಕಾಂಗ್ರೆಸ್‌ ಅದ್ಯಕ್ಷ ಚಂದ್ರಶೇಖರ ಆರಬೋಳ ಉದ್ಘಾಟಿಸುವರು. ವೀರಶೈವ ಮಹಾಸಭಾ ಅದ್ಯಕ್ಷ ಬಸವರಾಜೇಂದ್ರ ದೇಶಮುಖ ಅಧ್ಯಕ್ಷತೆ ವಹಿಸುವರು. ಕತೇಗಾರ ಸಿದ್ದರಾಮ ಹೊನ್ಕಲ್ ಉಪನ್ಯಾಸ ನೀಡುವರು. ಶರಣ ಪರಿಷತ್ತಿನ ಅಧ್ಯಕ್ಷ ಲಿಂಗಣ್ಣ ಪಡಶೇಟ್ಟಿ ಬಸನಗೌಡ ಸುಬೇದಾರ ಭಾಗವಹಿಸುವರು.

ಆಗಸ್ಟ್‌27ರಂದು ಬೆಳಿಗ್ಗೆ10.30ಕ್ಕೆ ಕ್ಕೆ ರಂಗಂಪೇಟೆಯ ಬಸವೇಶ್ವರ ಕಾಲೇಜಿನಲ್ಲಿ ಆಯೋಜಿಸಿರುವ ಮಾಲಿಕೆ ಮೂರನ್ನು ತಾಲೂಕ ವೀರಶೈವ ಸಮಿತಿ ಕಾರ್ಯದರ್ಶಿ ವೀರಪ್ಪ ಅವಂಟಿ ಉದ್ಘಾಟಿಸುವರು. ಸಾಹಿತಿ ಶರಣಗೌಡ ಪಾಟೀಲ್ ಉಪನ್ಯಾಸ ನೀಡುವರು. ವೀರಶೈವ ಸಮಿತಿ ಉಪಾಧ್ಯಕ್ಷ ವರಾಜಪ್ಪ ಗೋಲಗೇರಿ, ಎಸ್.ಎಂ.ಕನಕರಡ್ಡಿ , ಸುಗೂರೇಶ ವಾರದ ಭಾಗವಹಿಸುವರು. ಕಾಲೇಜಿನ ಪ್ರಾಚಾರ್ಯ ವೀರೇಶ ಹಳಿಮನಿ ಅಧ್ಯಕ್ಷತೆ ವಹಿಸುವರು ಎಂದು ಕನ್ನೆಳ್ಳಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !