ಸುರಪುರ: ಪ್ರಭು ಕಾಲೇಜು ಮೈದಾನದಲ್ಲಿನ ಸರ್ಕಾರಿ ಸರ್ವೆ ನಂಬರ 7/1ರ ಭೂಮಿಯಲ್ಲಿ ಮಹರ್ಷಿ ವಾಲ್ಮೀಕಿ ಗ್ರಂಥಾಲಯ ಮತ್ತು ರಾಜಾ ನಾಲ್ವಡಿ ವೆಂಕಟಪ್ಪನಾಯಕ ಉದ್ಯಾನ ನಿರ್ಮಾಣಕ್ಕೆ 4 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರು ತಹಶೀಲ್ದಾರ್ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ಮಾತನಾಡಿ, ‘ಸುರಪುರ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರವಾಗಿದೆ. ವಾಲ್ಮೀಕಿ ಸಮಾಜ ಅತ್ಯಂತ ದೊಡ್ಡ ಸಮುದಾಯವಾಗಿದೆ. ಆದರೆ ಇಲ್ಲಿ ಸಮುದಾಯಕ್ಕೆ ಒಂದು ಸಮುದಾಯ ಭವನವಾಗಲಿ ಅಥವಾ ಗ್ರಂಥಾಲಯವಾಗಲಿ ಇಲ್ಲ. ಹೀಗಾಗಿ ಪ್ರಭು ಕಾಲೇಜು ಮೈದಾನದಲ್ಲಿ ಭೂಮಿ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ಸದರಿ ಭೂಮಿ ಸುರಪುರ ಸಂಸ್ಥಾನಕ್ಕೆ ಸೇರಿದ್ದಾಗಿದೆ. ಈ ಭೂಮಿಯನ್ನು ಆಟದ ಮೈದಾನವನ್ನಾಗಿ ಉಪಯೋಗಿಸಿಕೊಳ್ಳಲು ಕಾಲೇಜಿನವರಿಗೆ ನೀಡಿದ್ದಾರೆ. ಸದರಿ ಜಮೀನು ಸುಮಾರು 45 ವರ್ಷಗಳಿಂದ ನಮ್ಮ ಕಬ್ಜದಲ್ಲಿದೆ. ಕಲಂ 342ರ ಪ್ರಕಾರ ಪರಿಶಿಷ್ಟ ವರ್ಗದವರ ಕಬ್ಜೆಯಲ್ಲಿರುವ ಜಮೀನನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ’ ಎಂದರು.

‘ನಿರ್ಲಕ್ಷ ವಹಿಸಿದಲ್ಲಿ ಜ. 5 ರಂದು ಸುರಪುರ ಬಂದ್ ಮಾಡಿ ಹಸನಾಪುರದ ರಾಜಾ ನಾಲ್ವಡಿವೆಂಕಟಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ’ ಎಚ್ಚರಿಸಿದರು.

ತಹಶೀಲ್ದಾರ್ ಎಚ್.ಎ. ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.

ಭೀಮುನಾಯಕ ಮಲ್ಲಿಭಾವಿ, ನಾಗರಾಜ ಪ್ಯಾಪ್ಲಿ, ರಮೇಶ ದೊರೆ ಆಲ್ದಾಳ, ಗಂಗಾಧರ ನಾಯಕ, ವೆಂಕಟೇಶ ಬೇಟೆಗಾರ, ರಂಗನಾಥ ದೊರೆ, ಸಂಜೀವ ನಾಯಕ, ಮೌನೇಶ ದಳಪತಿ, ಕನಕಾಚಲ ನಾಯಕ, ಈರಣ್ಣಗೌಡ ಪಾಟೀಲ, ವೀರಭದ್ರ ಅಂತರಗಂಗಿ, ದೇವಿಂದ್ರಪ್ಪ ಸುರಪುರ, ಶ್ರೀನಿವಾಸ ನಾಯಕ, ವಿನೋದ ಲಕ್ಷ್ಮೀಪುರ, ಅಯ್ಯಣ್ಣ ಪಾಟೀಲ, ವಾಸುದೇವ ನಾಯಕ, ದೇವು ನಾಯಕ, ಮಲ್ಲು ನಾಯಕ, ಸಕ್ರೆಪ್ಪ ನಾಯಕ, ದುರ್ಗಪ್ಪ ಗುಡಿಯಾಳ, ಮಂಜುನಾಥ ಹೆಮನೂರ, ಸಿದ್ದಪ್ಪ ಹೆಮನೂರ, ರಾಜೇಂದ್ರ ಕವಡಿಮಟ್ಟಿ, ರಂಗನಾಥ ಬಿರಾದಾರ, ಹಣಮಂತ ಮಲ್ಲಿಭಾವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.