ಮಂಗಳವಾರ, ಜನವರಿ 25, 2022
24 °C

ಯರಗೋಳ ತಪಾಸಣೆ ಕೇಂದ್ರದಲ್ಲಿ ಬಿಗಿ ಬಂದೋಬಸ್ತ್

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ಗ್ರಾಮದ ಹೊರವಲಯದ ತಪಾಸಣೆ ಕೇಂದ್ರದಲ್ಲಿ ಹೊರ ರಾಜ್ಯದಿಂದ ಆಗಮಿಸುವ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈ ತಪಾಸಣೆ ಕೇಂದ್ರದಿಂದ ಪ್ರತಿನಿತ್ಯ ಮಹಾರಾಷ್ಟ್ರ ರಾಜ್ಯದಿಂದ ನೂರಾರು ಸಂಖ್ಯೆಯ ಬೃಹತ್ ವಾಹನಗಳು ಸಂಚರಿಸುತ್ತವೆ.

ತಪಾಸಣೆ ಕೇಂದ್ರಕ್ಕೆ ಯಾದಗಿರಿ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ ಬೇಟಿ ನೀಡಿ ವಾಹನಗಳ ತಪಾಸಣೆ ಮಾಡಿದ್ದಾರೆ. ಆರೋಗ್ಯ, ಕಂದಾಯ, ಪೊಲೀಸ್ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ತಪಾಸಣೆಗೆ ಆದೇಶ ನೀಡಿದ್ದಾರೆ.

ಹೊರ ರಾಜ್ಯದಿಂದ ಬರುವ ವಾಹನ ಚಾಲಕರಿಗೆ 3 ದಿನದ ಒಳಗಡೆ ತಪಾಸಣೆ ಮಾಡಿಸಿದ ಕೋವಿಡ್ ನೆಗಟಿವ್ ವರದಿ ತೋರಿಸುವಂತೆ ಆದೇಶಿಸಲಾಗಿದೆ. ಇದರಿಂದಾಗಿ ಪೋಲಿಸ್ ಮತ್ತು ವಾಹನ ಚಾಲಕರ ನಡುವೆ ಮಾತಿನ ಚಕಮಕಿ ಸಾಮಾನ್ಯವಾಗಿ ಕಂಡುಬಂತು.

ಈ ಮಧ್ಯೆ, ಯರಗೋಳ ಚೆಕ್‌ಪೋಸ್ಟ್ ಬಳಿ ರಾಜಸ್ಥಾನದಿಂದ ಬಂದ ಗೂಡ್ಸ್ ಲಾರಿಯೊಂದನ್ನು ನಿಲ್ಲಿಸಲು ಸೂಚಿಸಿದಾಗ, ಲಾರಿ ಚಾಲಕ, ಲಾರಿ ಅತಿವೇಗದಿಂದ ಚಲಾಯಿಸಿ ಕರ್ತವ್ಯ ನಿರತ ಪೇದೆಯ ಮೇಲೆಯೇ ಹಾಯಿಸಲು ಹೋಗಿದ್ದ ಎನ್ನಲಾದ ಸುದ್ದಿಗಳು ಕೆಲಕಾಲ ಆತಂಕ ಮೂಡಿಸಿದ್ದವು.

ಈ ಕುರಿತು 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ ಯಾದಗಿರಿ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ, ಅಂತಹ ಯಾವುದೆ ಘಟನೆ ನಡೆದಿಲ್ಲ, ನಾನು ಸ್ಥಳದಲ್ಲಿಯೇ ಇದ್ದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.