ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ನೇ ಸ್ಥಾನಕ್ಕೆ ಜಿಗಿದ ಜಿಲ್ಲೆ

ಬಾಲಕಿಯರೇ ಮೇಲುಗೈ; ಶೇ 58.38 ಫಲಿತಾಂಶ
Last Updated 14 ಜುಲೈ 2020, 17:39 IST
ಅಕ್ಷರ ಗಾತ್ರ

ಯಾದಗಿರಿ: ಫಲಿತಾಂಶದಲ್ಲಿ ಕೊನೆಯ ಸ್ಥಾನ ಎಂಬ ಹಣೆಪಟ್ಟಿಕೊಂಡ ಜಿಲ್ಲೆ ಈಗ ಕಳೆದ ವರ್ಷಕ್ಕಿಂತ 3 ಸ್ಥಾನ ಮೇಲಕ್ಕೆ ಜಿಗಿದಿದೆ. ಈ ವರ್ಷ 28ನೇ ಸ್ಥಾನಕ್ಕೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕಿಂತ ಉತ್ತಮ ಸಾಧನೆ ಮಾಡಿದೆ.

2019ರಲ್ಲಿ ಶೇ 53.08 ರಷ್ಟು ಫಲಿತಾಂಶ ಬಂದಿತ್ತು. 2020ರಲ್ಲಿ ಶೇ 58.38 ಫಲಿತಾಂಶ ಬಂದಿದೆ. 31ನೇ ಸ್ಥಾನದಿಂದ 28ನೇ ಸ್ಥಾನಕ್ಕೆ ಜಿಗಿದಿದೆ.4,906 ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು, ಅದರಲ್ಲಿ 2,864 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

3,101 ಬಾಲಕಿಯರು‍ಪರೀಕ್ಷೆಗೆ ಹೆಸರು ನೋಂದಾಯಿಸಿ ಕೊಂಡಿದ್ದರು. 1,669 ಬಾಲಕಿಯರು ಉತ್ತೀರ್ಣರಾಗಿದ್ದಾರೆ. 53.82 ಶೇಕಡವಾರು ಫಲಿತಾಂಶ ತಂದಿದ್ದಾರೆ.4,353 ಬಾಲಕರು ಪರೀಕ್ಷೆಗೆ ನೋಂದಾಯಿಸಿ ಕೊಂಡರೆ, 1,734 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 39.83 ಫಲಿತಾಂಶ ಗಳಿಸಿದ್ದಾರೆ.

ಕಲಾ ಸಂಯೋಜನೆಯಲ್ಲಿ ಶೇ 49.44, ವಾಣಿಜ್ಯದಲ್ಲಿ 60.80, ವಿಜ್ಞಾನದಲ್ಲಿ 69.86, ನಗರ ಪ್ರದೇಶದಲ್ಲಿ 57.67, ಗ್ರಾಮಾಂತರ‍ಪ್ರದೇಶದಲ್ಲಿ 61.60 ಶೇಕಡವಾರು ಫಲಿತಾಂಶ ಬಂದಿದೆ.

553 ಖಾಸಗಿ ವಿದ್ಯಾರ್ಥಿಗಳಲ್ಲಿ115 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ20.8ರಷ್ಟು ಫಲಿತಾಂಶ ಬಂದಿದೆ.332 ನಗರ ಪ್ರದೇಶ,221 ಗ್ರಾಮಾಂತರ ಪ್ರದೇಶದ ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ.

‘ವಿದ್ಯಾರ್ಥಿಗಳಿಗೆ ಕೈ‍‍ಪಿಡಿ, ವಿಶೇಷ ಬೋಧನೆ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಉಪನ್ಯಾಸಕರು ಶ್ರಮಿಸಿದ್ದಾರೆ. ನಾನು ಕೂಡ ಹಲವಾರು ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಇಂಗ್ಲಿಷ್‌, ವಾಣಿಜ್ಯ, ವಿಜ್ಞಾನ ವಿಷಯಗಳನ್ನು ಬೋಧಿಸಿದ್ದೇನೆ. ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸಿದ್ದರಿಂದ ವಿದ್ಯಾರ್ಥಿಗಳು ಇಂಥ ಸಾಧನೆ ಮಾಡಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು ಡಿಡಿಪಿಯುಚಂದ್ರಕಾಂತ ಜೆ ಹಿಳ್ಳಿ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT