ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಇಬ್ಬರು ಉರ್ದು ಸಾಹಿತಿ ಹೆಸರು ಸೇರ್ಪಡೆ: ಸಂತಸ

Last Updated 19 ಫೆಬ್ರುವರಿ 2020, 11:49 IST
ಅಕ್ಷರ ಗಾತ್ರ

ಯಾದಗಿರಿ: ಉರ್ದು ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನ ಇದೆ. 'ಹಮದ್ ಕಾ ಆಲಿಮಿ ಇಂಟೆಕಾಬ್' ಎಂಬ ಹೆಸರಾಂತ ಕೃತಿಯಲ್ಲಿ ಯಾದಗಿರಿಯ ಇಬ್ಬರು ಕವಿಗಳ ಹೆಸರು ಉಲ್ಲೇಖಗೊಂಡಿದೆ.

ಕಲ್ಕತ್ತಾದ ಪ್ರಸಿದ್ಧ ಕವಿ ಫ್ರಾಗ್ ರೋಹ್ವಿಅವರು 'ಹಮದ್ ಕಾ ಆಲಿಮಿ ಇಂಟೆಕಾಬ್' ಎಂಬ ಪುಸ್ತಕ ಬರೆದಿದ್ದು, ಈ ಪುಸ್ತಕವು ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ, ಸೌದಿ ಅರಬ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾಮತ್ತು ಇತರ ದೇಶಗಳ ಉರ್ದು ಕವಿಗಳ ಹೆಸರನ್ನು ಸಹ ಒಳಗೊಂಡಿದೆ. ಜೊತೆಗೆನಗರದ ಇಬ್ಬರು ಕವಿಗಳಾದ ಜಿಲಾನಿ ಶಾಹಿದ್ ಮತ್ತು ದಿವಂಗತ ಸಬೀರ್ ಫಕ್ರುದ್ದೀನ್ ಹೆಸರನ್ನು ಸೇರಿಸುವುದು ಉರ್ದು ಪ್ರೇಮಿ ಮತ್ತು ನಾಗರಿಕರಿಗೆ ಹೆಮ್ಮೆ ಮತ್ತು ಸಂತೋಷದ ವಿಷಯವಾಗಿದೆ.

ಹೆಸರಾಂತ ಉರ್ದು ಕವಿಗಳಾದ ಇಕ್ಬಾಲ್, ಇಬ್ರಾಹಿಂ, ಬಶೀರ್ ಬಾದರ್, ಮೊಹ್ಸಿನ್ ನಖ್ವಿ , ಮೊಮಿನ್ ಖಾನ್ ಅವರ ಬರಹಗಳೂ ಸೇರಿವೆ.ಈ ಪುಸ್ತಕವನ್ನು ಪಶ್ಚಿಮ ಬಂಗಾಳ ಉರ್ದು ಅಕಾಡೆಮಿಯಿಂದ ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT