ಯಾದಗಿರಿ: ಜಿಲ್ಲೆಯ ಮುನೀರ್ ಬೊಮ್ಮನಹಳ್ಳಿ ಗ್ರಾಮದಲ್ಲಿ ಮೀಸಲಾತಿಯಿಂದಾಗಿ ಮಾವ ಗೆದ್ದರೂ ಸೋತರು, ಸೊಸೆ ಸೋತರೂ ಗೆದ್ದ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಗಿದೆ.

ಜಿಲ್ಲೆಯ ಕೆಂಭಾವಿ ಸಮೀಪದ ಯಕ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನೀರ್ ಬೊಮ್ಮನಹಳ್ಳಿ ನಾಲ್ಕು ಗ್ರಾಮ ಪಂಚಾಯಿತಿ ಸ್ಥಾನಗಳು ಮೀಸಲಿರಿಸಲಾಗಿತ್ತು.ಮತ ಎಣಿಕೆಯಲ್ಲಿ ಸಾಮಾನ್ಯ ಪುರುಷ ಕ್ಷೇತ್ರದಿಂದ ಬಸವರಾಜಪ್ಪಗೌಡ ಮಾಲಿಪಾಟೀಲ ಆಯ್ಕೆಯಾಗಿದ್ದಾರೆ. ಆದರೆ, ಸಾಮಾನ್ಯ ಮಹಿಳಾ ಕ್ಷೇತ್ರದಲ್ಲಿ ಸೋತ ಸುನೀತಾ ಸಿದ್ದನಗೌಡ ಮಾಲಿಪಾಟೀಲ ಮಾವನಿಗಿಂತಲೂಸೊಸೆ ಹೆಚ್ಚು ಮತ ಪಡೆದಿದ್ದರಿಂದ ಸೊಸೆ ಸುನೀತಾ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಘೋಷಿಸಿದ್ದಾರೆ.

ಸಾಮಾನ್ಯ ಪುರುಷ ಕ್ಷೇತ್ರ 1, ಸಾಮಾನ್ಯ ಮಹಿಳಾ ಕ್ಷೇತ್ರ 1, ಹಿಂದುಳಿದ ವರ್ಗ ಮಹಿಳಾ ಕ್ಷೇತ್ರ 1, ಪರಿಶಿಷ್ಟ ಜಾತಿ ಮಹಿಳೆ ಒಂದು ಸ್ಥಾನ ಮೀಸಲಾತಿ ನಿಗದಿಪಡಿಸಲಾಗಿತ್ತು.

ಗ್ರಾಮದಲ್ಲಿ ನಾಲ್ಕು ಕ್ಷೇತ್ರಗಳಿಗೂ ಮಹಿಳೆಯರೆ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದರೂ ಮೀಸಲಾತಿ ನಿಯಮದಂತೆ ಮಾವ ಸೋಲಬೇಕಾಯಿತು. ಇಬ್ಬರು ಜೆಡಿಎಸ್, ಇಬ್ಬರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಅಳಿಯನಿಗೆ ವಿಜಯ

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಗುರುಸಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಬಲಾದ ಗ್ರಾಮದ ವಾರ್ಡ್ ಸಂಖ್ಯೆ 4ರಲ್ಲಿ ಮಾವನ ವಿರುದ್ಧ ಅಳಿಯ ಗೆದ್ದಿದ್ದಾರೆ.

ಅಳಿಯ ಗೌತಮ 446, ಮಾವ ದೇವೆಂದ್ರಪ್ಪ ಗುಂಡಳ್ಳಿ 200 ಮತ ಗಳನ್ನು ಪಡೆದಿದ್ದಾರೆ. ಗೌತಮ 246 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

‘ಗ್ರಾಮದಲ್ಲಿ ಸಾಮೂಹಿಕ ಶೌಚಾಲಯ ಇಲ್ಲದೆ ಸಮಸ್ಯೆ ಆಗಿದೆ. ಇದನ್ನು ನಿರ್ಮಿಸಲು ಮೊದಲ ಆದ್ಯತೆ ನೀಡುತ್ತೇನೆ. ರಸ್ತೆ, ಚರಂಡಿ ನಿರ್ಮಾಣಸೇರಿದಂತೆ ವಾರ್ಡ್ನ ಅಭಿವೃದ್ಧಿಗೆಸಂಕಲ್ಪ ತೊಟ್ಟಿದ್ದೇನೆ’ ಎನ್ನುತ್ತಾರೆ ಗೌತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.