ಯಾದಗಿರಿ: ಇಲ್ಲಿನ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಯಿಮ್ಸ್) ಖಾಲಿ ಇರುವ ಹುದ್ದೆಗಳ ಪೈಕಿ 110 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.

2021ರಲ್ಲಿ 300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆಯಾಗಿ ಲೋಕಾರ್ಪಣೆಗೊಂಡ ಬಳಿಕ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಾಗಿ ಸ್ವಾಯತ್ತ ಸಂಸ್ಥೆಯ ಸ್ಥಾನಮಾನ ಗಳಿಸಿತು. ‘ಯಿಮ್ಸ್’ನಲ್ಲಿ ಪ್ರಸ್ತುತ ನಿತ್ಯ 600ಕ್ಕೂ ಹೆಚ್ಚು ಹೊರ ರೋಗಿಗಳು ಭೇಟಿ ಕೊಡುತ್ತಿದ್ದಾರೆ. ಆಸ್ಪತ್ರೆಯ ಸೇವೆಯ ವಿಸ್ತರಣೆಯಾದಂತೆ ಚಿಕಿತ್ಸೆ ಹಾಗೂ ರೋಗಿಗಳ ಆರೈಕೆಗೆ ಅಗತ್ಯವಾದ ಮಾನವ ಸಂಪನ್ಮೂಲವೂ ವೃದ್ಧಿಯಾಗುತ್ತಿದೆ.

ಸಂಸ್ಥೆಗೆ ಅಗತ್ಯವಾದ ಬೋಧಕೇತರ ಹುದ್ದೆಗಳ ನೇಮಕಕ್ಕೆ ಅನುಮತಿ ನೀಡುವಂತೆ ತಿಂಗಳುಗಳ ಹಿಂದೆಯೇ ‘ಯಿಮ್ಸ್’ ಆಡಳಿತ ಮಂಡಳಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ‘ಯಿಮ್ಸ್’ಗೆ ಅಗತ್ಯ ಇರುವ 110 ಬೋಧಕೇತರ ಹುದ್ದೆಗಳನ್ನು ಸೃಜಿಸಲು ಸರ್ಕಾರವು ತೀರ್ಮಾನಿಸಿದೆ.

ಹುದ್ದೆಗಳ ಭರ್ತಿಯಿಂದಾಗುವ ವೆಚ್ಚದ ಶೇ 50ರಷ್ಟು ಅನುದಾನವನ್ನು ಎಬಿಎಆರ್ಕೆ ನಿಧಿಯಿಂದ ಭರಿಸಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಅನುಮೋದನೆ ನೀಡಿದ ಹುದ್ದೆಗಳಲ್ಲಿ ಆಡಳಿತ ವಿಭಾಗಕ್ಕೆ 13 ಹುದ್ದೆಗಳನ್ನು ನೀಡಿದೆ. ಶರೀರ ರಚನಾ ಶಾಸ್ತ್ರ, ಜೀವ ವಿಜ್ಞಾನ, ಜೈವಿಕ ರಸಾಯನ ವಿಜ್ಞಾನ, ರೋಗವಿಜ್ಞಾನ, ಸೂಕ್ಷ್ಮಜೀವಿ ವಿಜ್ಞಾನ, ರೇಡಿಯೋಲಾಜಿ, ಫಾರೆನ್ಸಿಕ್ ಮೆಡಿಸನ್, ಬ್ಲಡ್ ಬ್ಯಾಂಕ್, ಜನರಲ್ ಸರ್ಜರಿ, ಒಬಿಜಿ ಸೇರಿ ಇತರೆ ವಿಭಾಗಕ್ಕೆ 13ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿ ಹಾಗೂ ಹೊರ ರೋಗಿಗಳ ವಿಭಾಗದಲ್ಲಿ ಕಾರ್ಯನಿರ್ವಹಿಸಲು 21ಕ್ಕೂ ಹೆಚ್ಚು ಸ್ಟಾಫ್ ನರ್ಸ್ಗಳಿಗೆ ಮಂಜೂರು ಮಾಡಲಾಗಿದೆ.

ಐಸಿಯು, ಸಿಸಿಯು, ಮೆಡಿಕಲ್ ವಾರ್ಡ್, ಸರ್ಜಿಕಲ್ ವಾರ್ಡ್, ಮಕ್ಕಳ ವಾರ್ಡ್, ಹೆರಿಗೆ ವಾರ್ಡ್, ಆಪರೇಷನ್ ಥಿಯೇಟರ್, ಕಣ್ಣಿನ ಚಿಕಿತ್ಸೆಯ ವಿಶೇಷ ವಾರ್ಡ್ ಸೇರಿ ಇತರೆಡೆ ಕೆಲಸ ಮಾಡಲು 32 ನರ್ಸಿಂಗ್ ಆಫೀಸರ್ಗಳನ್ನು ನೇಮಕ ಸೇರಿ ಒಟ್ಟಾರೆ 110 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ ಅಸ್ತು ಎಂದಿದೆ.

ಬೋಧಕೇತರ ಸಿಬ್ಬಂದಿ ಕೊರೆತೆಯಿಂದ ರೋಗಿಗಳ ತಪಾಸಣೆ, ಚಿಕಿತ್ಸೆ, ಪ್ರಯೋಗಾಲಯದ ವಿವಿಧ ಪರೀಕ್ಷೆಗಳಲ್ಲಿ ವಿಳಂಬ ಆಗುತ್ತಿತ್ತು. ರೋಗಿಗಳ ಬೆಡ್ಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿಯೂ ಅಡ್ಡಿಯಾಗುತ್ತಿತ್ತು. ಜೊತೆಗೆ ಸಂಸ್ಥೆಯ ವಿವಿಧ ಕಟ್ಟಡಗಳಲ್ಲಿನ ಸ್ವಚ್ಛತೆ ನಿರ್ವಹಣೆಯೂ ಸವಾಲಾಗುತ್ತಿತ್ತು. ಖಾಲಿ ಇರುವ ಹುದ್ದೆಗಳ ಪೈಕಿ ಮಂಜೂರಾಗಿರುವ ಹುದ್ದೆಗಳ ಭರ್ತಿಯಿಂದ ವೈದ್ಯಕೀಯ ಸೇವೆ ಹಾಗೂ ರೋಗಿಗಳ ಆರೈಕೆಯಲ್ಲಿ ಇನ್ನಷ್ಟು ಸುಧಾರಣೆ ಕಾಣಲಿದೆ ಎನ್ನುತ್ತಾರೆ ‘ಯಿಮ್ಸ್’ ವೈದ್ಯರು.

ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳ (ಐಪಿಎಚ್ಎಸ್) ಅನ್ವಯ ಆಸ್ಪತ್ರೆಗಳಲ್ಲಿನ ಹಾಸಿಗೆ, ಒಳ ರೋಗಿಗಳ ಭೇಟಿ, ಒಳರೋಗಿಗಳ ದಾಖಲು, ರೋಗ ನಿರ್ಣಯದಲ್ಲಿನ ವಿವಿಧ ಪರೀಕ್ಷೆಗೆ ಸೌಕರ್ಯಗಳು ಸೇರಿ ಇತರೆ ಸೇವೆಗಳಿಗೆ ಹೋಲಿಸಿದರೆ ಈಗಿರುವ ಬೋಧಕೇತರ ಸಿಬ್ಬಂದಿಯ ಜತೆಗೆ ಇನ್ನಷ್ಟು ಸಿಬ್ಬಂದಿ ಅವಶ್ಯವಿದೆ.

ವೈದ್ಯಕೀಯ ಶಿಕ್ಷಣೆ ಇಲಾಖೆಯು ಈ ವರ್ಷ 110 ಹುದ್ದೆಗಳ ಭರ್ತಿಗೆ ಅನುಮೋದನೆ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿಸುವುದಾಗಿ ಭರವಸೆ ನೀಡಿದೆ. ಜೊತೆಗೆ ಈಗ ಅನುಮೋದನೆ ಕೊಟ್ಟಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಿಕೊಳ್ಳುವಂತೆಯೂ ಹೇಳಿದೆ ಎಂದು ‘ಯಿಮ್ಸ್’ನ ವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದರು.

ಅನುಮೋದನೆ ಕೊಟ್ಟಿರುವ ಹುದ್ದೆಗಳನ್ನು ಶೀಘ್ರವೇ ಏಜೆನ್ಸಿಯ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ಸಂಸ್ಥೆಯ ಆರೋಗ್ಯ ಸೇವೆಗಳನ್ನು ಹೆಚ್ಚಿಸಲಾಗುವುದು
ಡಾ. ಸಂದೀಪ್ ಹರಸಂಗಿ ‘ಯಿಮ್ಸ್’ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.