ಶಹಾಪುರ: ಗೋಗಿ ಯುರೇನಿಯಂ ಗಣಿಗಾರಿಕೆ ಪ್ರದೇಶಕ್ಕೆ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷರಾದ ಆರ್.ಮಾನಸಯ್ಯ, ಬಿ.ಬಸವಲಿಂಗಪ್ಪ ಹಾಗೂ ಎಂ.ಗಂಗಾಧರ ನೇತೃತ್ವದಲ್ಲಿ ಭೇಟಿ ನೀಡಿ ಸ್ಥಳೀಯ ಶಾಸಕರ ಸಹಕಾರದಿಂದ ಯುರೇನಿಯಂ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ.

ಕೇಂದ್ರ ಪರಿಸರ ಇಲಾಖೆ ಹಾಗೂ ವ್ಯಾಪಕ ಜನವಿರೋಧವನ್ನು ಲೆಕ್ಕಿಸದೆ ತೆರೆದ ಗಣಿಗಾರಿಕೆ ನಡೆಸುತ್ತಾ ತ್ಯಾಜ್ಯ ನೀರು ಕೆರೆಗೆ ಹರಿಬಿಡುವುದು ಅದೇ ನೀರನ್ನು ಗ್ರಾಮಸ್ಥರು ಕುಡಿಯಲು ಉಪಯೋಗಿಸುವ ಬಗ್ಗೆ ಮಾಹಿತಿ ಪಡೆದಾಗ ತೀವ್ರ ಅಘಾತವನ್ನು ಸಮಿತಿ ವ್ಯಕ್ತಪಡಿಸಿತು.

ಶಾಸಕ ಶರಣಬಸಪ್ಪ ದರ್ಶನಾಪೂರ ಹಾಗೂ ಸಂಸದ ಸಣ್ಣ ಫಕೀರಪ್ಪ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಯುರೇನಿಯಂ ಕಾರ್ಪೋರೇಶನ್ ಆಫ್ ಇಂಡಿಯಾ (ಯುಸಿಐಎಲ್) ಸಹಕಾರದಿಂದ ಗಣಿಗಾರಿಕೆ ನಡೆಸಲಾಗುತ್ತಿದೆ. ಜನರನ್ನು ಕತ್ತಲೆಯಲ್ಲಿಟ್ಟು ಜೀವ ಸಂಕುಲಕ್ಕೆ ಅಪಾಯ ಒಡ್ಡುತ್ತಿದೆ. ಗೋಗಿ ಗ್ರಾಮದಲ್ಲಿ ರಾಜಕೀಯ ಆಫಿಮು ಭರಿಸಿ ಮುಗ್ದ ಜನತೆಯನ್ನು ವಂಚಿಸುತ್ತಿದ್ದಾರೆ.

ಯುರೇನಿಯಂದಿಂದ ಕೇವಲ ಗೋಗಿ ಗ್ರಾಮಸ್ಥರ ಭವಿಷ್ಯದ ಪ್ರಶ್ನೆಯಲ್ಲ ಇಡೀ ಮಾನವ ಕುಲಕ್ಕೆ ಅಪಾಯದ ಎಚ್ಚರಿಕೆ ಕರೆಗಂಟೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ರೈತ ಸಂಘದ ರಾಜ್ಯಧ್ಯಕ್ಷ ಆರ್.ಮಾನಸಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

ತಕ್ಷಣ ಯುರೇನಿಯಂ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಮುಂದಿನ ಕ್ರಮವಾಗಿ ಈಗಾಗಲೇ ತೊಂದರೆ ಅನುಭವಿಸುತ್ತಿರುವ ಜನತೆಯ ರೋಗಕ್ಕೆ ಕಾರಣವಾದ ಅಂಶವನ್ನು ಪತ್ತೆ ಹಚ್ಚಬೇಕು.ಕುಡಿಯುವ ನೀರು. ಮಣ್ಣು, ಪರಿಸರದ ಮೇಲೆ ಆದ ದುಷ್ಪರಿಣಾಮದ ಬಗ್ಗೆ ತನಿಖೆ ನಡೆಸಬೇಕು.ಗೋಗಿ ಗ್ರಾಮದಲ್ಲಿ ಯುರೇನಿಯಂ ಗಣಿಗಾರಿಕೆ ಬಗ್ಗೆ ರಹಸ್ಯವಾಗಿ ಇಡಲಾದ ಗಣಿಗಾರಿಕೆ ಕುರಿತು ರಾಜ್ಯ ಸರ್ಕಾರ ಸಾರ್ವಜನಿಕರ ಮುಂದೆ ಪ್ರಕಟಣೆ ಹೊರಡಿಸಲಿ ಎಂದು ಆಗ್ರಹಿಸಿದರು.

ಅಲ್ಲದೆ ಗೋಗಿ ಸುತ್ತಮುತ್ತಲಿನ ಗ್ರಾಮಗಳಾದ ಉಮರದೊಡ್ಡಿ, ಬಾಣತಿಹಾಳ, ದರ್ಶನಾಪೂರ, ನಾಗನಟಗಿ, ದಿಗ್ಗಿ, ಸೈದಾಪುರ ಮುಂತಾದ ಗ್ರಾಮಸ್ಥರ ಆರೋಗ್ಯದ ಉನ್ನತ ದರ್ಜೆಯ ವೈದ್ಯಕೀಯ ಪರೀಕ್ಷೆ ನಡೆಸಬೇಕೆಂದು ಹೇಳಿದರು.

ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಳಸಬೇಕೆಂದು ಆಗ್ರಹಿಸಿ ಅಕ್ಟೋಬರ ಕೊನೆ ವಾರದಲ್ಲಿ `ಅಣು ವಿರೋಧಿ ಮಾನವ ಸಮಾವೇಶ~ ಹಮ್ಮಿಕೊಳ್ಳಲಾಗುವುದೆಂದು ಅವರು ಸ್ಪಷ್ಟಪಡಿಸಿದರು.

ಸಿಪಿಐ(ಎಂ.ಎಲ್) ಜಿಲ್ಲಾ ಕಾರ್ಯದರ್ಶಿ ಶರಣಬಸವ, ಮರಿಯಪ್ಪ ಜಾಲಿಬೆಂಚಿ, ಮರಿರಾಜ್ ನಾಟೇಕರ, ಶರಣಪ್ಪ ಹೊಸ್ಮನಿ, ಚಂದ್ರಶೇಖರ, ಬಸವರಾಜ ಕರಕಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.