ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನಿತ್ಯ ಬಯಲು ಮದ್ಯದಂಗಡಿ!

ನವನಗರ ಸೆಕ್ಟರ್‌ 4ರ ವಾರದ ಸಂತೆ ಮೈದಾನ; ವ್ಯಾಪಾರಿಗಳ ಗೋಳು
Last Updated 26 ಸೆಪ್ಟೆಂಬರ್ 2016, 6:19 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ನವನಗರ ಸೆಕ್ಟರ್ 4ರಲ್ಲಿರುವ ಭಾನುವಾರದ ಸಂತೆ ಮೈದಾನ ನಿತ್ಯ ಸಂಜೆಯಾಗುತ್ತಿದ್ದಂ ತೆಯೇ ‘ಬಯಲು ಮದ್ಯದಂಗಡಿ’ ಯಾಗಿ ಬದಲಾಗುತ್ತದೆ.

ಸೂರ್ಯ ನೆತ್ತಿಯಿಂದ ಸರಿದು ಪಡುವಣಕ್ಕೆ ಜಾರುತ್ತಿದ್ದಂತೆಯೇ ಇಡೀ ಸಂತೆ ಮೈದಾನದಲ್ಲಿ ನಶಾ ಲೋಕ ತೆರೆದುಕೊಳ್ಳುತ್ತದೆ. ತರಕಾರಿ ಇಟ್ಟು ವ್ಯಾಪಾರ ಮಾಡಲು ನಿರ್ಮಿಸಿರುವ ಪುಟ್ಟ ಗೂಡಂಗಡಿಗಳು, ಪ್ಲಾಟ್‌ ಫಾರಂನ ಕಟ್ಟೆಗಳ ಮೇಲೆ ಸಂಜೆಯಾಗು ತ್ತಲೇ ಗುಂಪು–ಗುಂಪಾಗಿ ಕುಳಿತು ಕೊಳ್ಳುವ ಮದ್ಯಪ್ರಿಯರು ‘ಪಾನ ಗೋಷ್ಠಿ’ ಶುರುವಿಟ್ಟುಕೊಳ್ಳು ತ್ತಾರೆ. ಕೆಲವೊಮ್ಮೆ ನಡು ಮಧ್ಯಾಹ್ನವೇ ಸಂತೆ ಮೈದಾನ ಬಿಸಿಯೇರಿರುತ್ತದೆ.

ನವನಗರ ಮುಖ್ಯ ರಸ್ತೆಯ ವೈನ್‌ಶಾಪ್ ಹಾಗೂ ಇದೇ ಸೆಕ್ಟರ್‌ನಲ್ಲಿ ರುವ ಎಂಆರ್‌ಪಿ ಮಳಿಗೆಯಲ್ಲಿ ಮದ್ಯ ಖರೀದಿಸಿ ತರುವ ಗುಂಡು ಪ್ರಿಯರು ಸಾರ್ವಜನಿಕ ಸ್ಥಳದಲ್ಲಿಯೇ ರಾಜಾ ರೋಷವಾಗಿ ಕುಡಿತ ಶುರುವಿಟ್ಟುಕೊಳ್ಳು ತ್ತಾರೆ.

ವ್ಯಾಪಾರಕ್ಕೆ ತೊಂದರೆ; ಪಾನಗೋಷ್ಠಿ ನಡೆಸುವವ ರಲ್ಲಿ ಕೆಲವರು ನಿಶೆ ಹೆಚ್ಚುತ್ತಿ ದ್ದಂತೆಯೇ ಅಲ್ಲಿಯೇ ಬಾಟಲಿ ಒಡೆದು ಚೂರು ಗಳನ್ನು ಹರಡಿದರೆ ಇನ್ನೂ ಕೆಲವರು ಗೋಷ್ಠಿ ಮುಗಿಸಿ ಬಾಟಲಿ, ಸ್ಯಾಚೆ ಹಾಗೂ ಗ್ಲಾಸ್‌ಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಜೊತೆಗೆ ಮದ್ಯದ ಜೊತೆ ನಂಚಿಕೆಗೆ ತಂದ ಕುರ ಕಲು, ಖಾದ್ಯ ಎಲ್ಲವೂ ಅಲ್ಲಿ ಬೆಳಿಗ್ಗೆ ವೇಳೆಗೆ ಕಸದ ಗುಪ್ಪೆಯನ್ನು ಸೃಷ್ಟಿಸಿ ರುತ್ತದೆ.

ಇದು ಸಂತೆಯ ವ್ಯಾಪಾ ರಸ್ಥರ ತೊಂದರೆ ಹೆಚ್ಚಿಸಿದೆ. ಅಲ್ಲಿನ ಬಾಟಲಿ, ಕಸ ಸಹ ನೀಯವಾಗದ ಕಾರಣ ಮಾರುಕಟ್ಟೆಯ ಗೂಡಂಗಡಿಗಳ ಸಹವಾಸವೇ ಬೇಡ ಎಂದು ರಸ್ತೆಯಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಾರೆ. ಇದೀಗ ಮಳೆ ಸುರಿಯುತ್ತಿದ್ದು, ಮಳೆಯಿಂದ ರಕ್ಷಣೆಗೆ ಪುಟ್ಟ ಗೂಡುಗಳು, ಪ್ಲಾಟ್‌ಫಾರಂ, ಕಟ್ಟೆ ಇದ್ದರೂ ಅಲ್ಲಿ ಕುಳಿತುಕೊಳ್ಳಲು ಸಾಧ್ಯ ವಾಗದೇ ವ್ಯಾಪಾರಿಗಳು ಕೆಸರಿನಲ್ಲಿಯೇ ಕುಳಿತು ಹಣ್ಣು–ತರಕಾರಿ ಮಾರಾಟ ಮಾಡಬೇಕಿದೆ.

ಓಡಾಡಲೂ ತೊಂದರೆ; ಸಂಜೆ ಯಾಗುತ್ತಲೇ ಸಂತೆ ಮೈದಾನವೂ ನಿರ್ಜನವಾಗಲಿದೆ. ಕೆಲವರು ಕುಡಿದು ಗದ್ದಲಕ್ಕೆ ಇಳಿಯುವುದರಿಂದ ಆ ಭಾಗ ದಲ್ಲಿ ಓಡಾಟಕ್ಕೂ ಹೆದರಿಕೆಯಾಗುತ್ತದೆ ಎಂದು ಸೆಕ್ಟರ್ 4ರ ವಾಣಿಜ್ಯ ಮಳಿಗೆಯೊಂದರಲ್ಲಿ ಕೆಲಸ ಮಾಡುವ ಮಹಾಂತೇಶ ಕರಡಗಿ ಹೇಳುತ್ತಾರೆ.

ಕಸದ ಬುಟ್ಟಿ ಇಡಲಿ; ಅಲ್ಲಿ ಅಷ್ಟಾಗಿ ಜನವಸತಿ ಇಲ್ಲ ಆದರೆ ಅದು ವಾಣಿಜ್ಯ ಪ್ರದೇಶ ಆದರೆ ಹೆಚ್ಚಿನ ಮಳಿಗೆಗಳು ಖಾಲಿ ಬಿದ್ದು, ಜನರ ಓಡಾಟವೂ ಅಷ್ಟ ಕ್ಕಷ್ಟೇ ಇದೆ. ಆದರೆ ಕುಡಿದ ಅಮಲಿನಲ್ಲಿ ಹೊಡೆದಾಡಿ ಏನಾದರೂ ಹೆಚ್ಚು ಕಮ್ಮಿ ಯಾದರೆ ಮಾತ್ರ ತೊಂದರೆಯಾಗಲಿದೆ ಎನ್ನುತ್ತಾರೆ ವರ್ತಕ ಪ್ರಕಾಶ ಮುದೇ ನೂರ. ಬೇಕಿದ್ದರೆ ಗದ್ದಲ ಮಾಡದೇ ಪಾನಗೋಷ್ಠಿ ಮುಗಿಸಲಿ. ಬಾಟಲಿ ಗಳನ್ನು ಒಡೆದು ಹಾಕದೇ ಅಲ್ಲಿನ ಕಸದ ಬುಟ್ಟಿಯಲ್ಲಿ ಹಾಕಲಿ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿ ಡಿಎ) ಕಸದ ಬುಟ್ಟಿಗಳ ವ್ಯವಸ್ಥೆ  ಮಾಡಲಿ ಎಂದು ಮುದೇನೂರ ಆಗ್ರಹಿಸುತ್ತಾರೆ.

***
ಪ್ರತಿ ಭಾನುವಾರ ಸಂತೆಗೆ ವ್ಯಾಪಾರಕ್ಕೆ ಬಂದರೆ ಒಡೆದ ಮದ್ಯದ ಬಾಟಲಿ ಚೂರುಗಳನ್ನೇ ಎಲ್ಲೆಲ್ಲೂ ಕಾಣುತ್ತೇವೆ. ಹಾಗಾಗಿ ಬಿಟಿಡಿಎ ಕಟ್ಟಡಗಳ ಉಸಾ ಬರಿಯೇ ಬೇಡ ಎಂದು ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತೇವೆ
-ಇಸ್ಮಾಯಿಲ್ ಘನಿ ಬೇಪಾರಿ, ತರಕಾರಿ ವ್ಯಾಪಾರಿ

***
ಕುಡಿದು ರಸ್ತೆಯಲ್ಲಿ ಬಾಟಲಿ ಒಡೆಯು ವುದು ನಮಗೆ ತಲೆನೋವಾಗಿ ಪರಿಣಮಿ ಸಿದೆ. ಈಗಾಗಲೇ ಹಲವು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಕ್ರಮಕ್ಕೆ ಆಗ್ರಹಿಸಿ ಎರಡು ಬಾರಿ ನವನಗರ ಪೊಲೀಸರಿಗೆ ಪತ್ರ ಬರೆಯಲಾಗಿದೆ.
-ಎ.ಡಿ.ಮೊಕಾಶಿ, ಬಿಟಿಡಿಎ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT