ಹುಮನಾಬಾದ್: ’ಮರ್ಯಾದೆ ರಾಮಣ್ಣ’ ಚಲನಚಿತ್ರ ನಿರ್ಮಾಣ ಪೂರ್ವಸಿದ್ಧತೆ ಪರಿಶೀಲನೆ ಹಿನ್ನೆಲೆಯಲ್ಲಿ ತಾಲ್ಲೂಕಿನ ದುಬಲಗುಂಡಿ ಗ್ರಾಮದಿಂದ ಹುಮನಾಬಾದ್‌ಗೆ ಆಗಮಿಸುತ್ತಿದ್ದ ಚಿತ್ರತಂಡ ವಾಹನಕ್ಕೆ ಲಾರಿ ಡಿಕ್ಕಿಹೊಡೆದ ಪರಿಣಾಮ 5ಮಂದಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ದುಬಲಗುಂಡಿ ಕ್ರಾಸ್‌ಬಳಿ ಸಂಭವಿಸಿದೆ.

ತಾಲ್ಲೂಕಿನ ದುಬಲಗುಂಡಿ ಗ್ರಾಮದ ಚಂದ್ರಕಾಂತ ಫತ್ತೆಪೂರೆ ಅವರ ಆಕರ್ಷ ಮಹಲ್‌ನಲ್ಲಿ ಫೆಬ್ರುವರಿ 23ರಿಂದ ಚಲನಚಿತ್ರ ಶೂಟಿಂಗ್ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಹಾಗೂ ತಂಡದ ಸದಸ್ಯರು ಕಳೆದ ಒಂದು ವಾರದಿಂದ ಹುಮನಾಬಾದ್ ಪಟ್ಟಣದ ವಸತಿಗೃಹವೊಂದರಲ್ಲಿ ವಾಸ್ತವ್ಯ ಮಾಡಿದ್ದಾರೆ.

ಸಿದ್ಧತಾ ಪರಿಶೀಲನೆ ಸಂಬಂಧ ತಂಡದ ನಿರ್ದೇಶಕ ಹಾಗೂ ಸದಸ್ಯರು ಪ್ರತಿನಿತ್ಯ ದುಬಲಗುಂಡಿ ಗ್ರಾಮಕ್ಕೆ ಹೋಗಿ ಬರುತ್ತಿದ್ದಾರೆ. ಸೋಮವಾರ ದುಬಲಗುಂಡಿಯಿಂದ ಹುಮನಾಬಾದ್‌ಗೆ ಮರುಳುತ್ತಿದ್ದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆಯಿತು.

ನಿರ್ದೇಶಕ ಗುರುಪ್ರಸಾದ್ ಅವರ ತಲೆಗೆ ತೀವ್ರ ಗಾಯಗಳಾಗಿವೆ. ಸಹ ನಿರ್ದೇಶಕ ಪ್ರಸನ್ನ, ಸಹನಟ ಕಿರಣ, ಛಾಯಾಗ್ರಾಹಕ ಗಿರಿ, ಜೀಪ್ ಚಾಲಕ ಕಿರಣ್‌ಕುಮಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.