ಜೇವರ್ಗಿ (ಗುಲ್ಬರ್ಗ ಜಿ.): ವಿಜಾಪುರದಲ್ಲಿ ಶುಕ್ರವಾರ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಹಿಂತಿರುಗುತ್ತ್ದ್ದಿದಾಗ ಸೊನ್ನ ಕ್ರಾಸ್ ಬಳಿ ಜೀಪ್- ಲಾರಿ ಡಿಕ್ಕಿಯಲ್ಲಿ ಅಸು ನೀಗಿದ 13 ಸೋದರ ಸಂಬಂಧಿಗಳ ಅಂತ್ಯಸಂಸ್ಕಾರ ಶನಿವಾರ ನಡೆಯಿತು. ಹರನೂರು ಗ್ರಾಮದ ಹೊರವಲಯದಲ್ಲಿ ಒಂದು ಬೃಹತ್ ಗುಂಡಿ ತೆಗೆದು ಎಲ್ಲ ಶವಗಳನ್ನು ಸಾಮೂಹಿಕವಾಗಿ ದಫನ್ ಮಾಡಲಾಯಿತು. ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಿದ್ದರು.