4

ಗೋಡಂಬಿ ತಿನ್ನಲು ಖರ್ಚು ಮಾಡಲ್ವೇ...?

Published:
Updated:

ಶಿರಸಿ: ‘ನಾವು ಒಂದು ಮೀಟಿಂಗ್‌ ನಡೆಸಲು ಸಾವಿರಾರು ರೂಪಾಯಿ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಹೀಗಿದ್ದಾಗ ರೈತರ ಜಾನುವಾರು ಸತ್ತರೆ ₹ 10 ಸಾವಿರ ಪರಿಹಾರ ನೀಡಲು ಸಣ್ಣತನ ತೋರಬಾರದು’ ಎಂದು ನಗುತ್ತಲೇ, ಪಶುಸಂಗೋಪನಾ ಇಲಾಖೆ ಅಧಿಕಾರಿಗೆ ತಾಕೀತು ಮಾಡಿದವರು ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್.

‘ಜಾನುವಾರು ಆಕಸ್ಮಿಕವಾಗಿ ಸಾವಿಗೀಡಾದರೆ ₹ 10 ಸಾವಿರ ಪರಿಹಾರ ನೀಡುವ ಯೋಜನೆಯನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿತ್ತು. ಈಗಲೂ ಈ ಯೋಜನೆ ಜಾರಿಯಲ್ಲಿದೆ. ರೈತರು ಜಾನುವಾರು ಖರೀದಿಗೆ ₹ 60 ಸಾವಿರದಿಂದ 70 ಸಾವಿರ ಖರ್ಚು ಮಾಡುತ್ತಾರೆ. ಅಕಸ್ಮಾತ್‌ ಅದು ಸತ್ತರೆ, ಅವರಿಗೆ ದೊಡ್ಡ ನಷ್ಟವಾಗುತ್ತದೆ. ಅವರೇನೂ ಸುಳ್ಳು ಮಾಹಿತಿ ನೀಡಿ, ಸುಮ್ಮಸುಮ್ಮನೆ ಪರಿಹಾರ ಕೇಳುವುದಿಲ್ಲ. ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಪ್ರಕರಣವನ್ನು ಪರಿಶೀಲಿಸಿ, ಉದಾರವಾಗಿ ಪರಿಹಾರದ ಹಣವನ್ನು ನೀಡಬೇಕು. ‘ನಾವು ಮೀಟಿಂಗ್‌ಗಳಲ್ಲಿ ಗೇರು ಬೀಜ (ಗೋಡಂಬಿ) ತಿನ್ನಲು ₹ 20 ಸಾವಿರ ಖರ್ಚು ಮಾಡುವುದಿಲ್ಲವೇ?’ ಎಂದು ಅವರು ಶಿರಸಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪ್ರಶ್ನಿಸಿದಾಗ, ಇಡೀ ಸಭೆಯಲ್ಲಿ ನಗು ಪ್ರತಿಧ್ವನಿಸಿತು.

 

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !