ಮಂಗಳವಾರ, ಜನವರಿ 25, 2022
28 °C
ಸಹಾಯಕ ಪ್ರಾಧ್ಯಾಪಕರ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ

ಸಹಾಯಕ ಪ್ರಾಧ್ಯಾಪಕರ ಹುದ್ದೆ | ಸಾಮಾನ್ಯ ಜ್ಞಾನ – ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

(ಕಳೆದ ಎರಡು ವಾರಗಳಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಗಾಗಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ‘ಸಾಮಾನ್ಯ ಜ್ಞಾನ’ ವಿಷಯ ಕುರಿತ ಮಾದರಿ ಪ್ರಶ್ನೋತ್ತರಗಳನ್ನು ನೀಡಲಾಗಿದೆ.)

ಭಾಗ– 3

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ರಾಜ್ಯ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಸಂಬಂಧಿಸಿದ ‘ಸಾಮಾನ್ಯ ಜ್ಞಾನ’ ವಿಷಯ ಕುರಿತ ಕೆಲವು ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ. 

1) ವಾಟ್ಸ್‌ಆ್ಯಪ್‌ ತರಹದ ಮತ್ತು ಅದಕ್ಕಿಂತ ಸುರಕ್ಷಿತವಾದ ಎಸಿಗ್ಮಾ(ASIGMA) ಮೊಬೈಲ್‌ ಅಪ್ಲಿಕೇಷನ್‌ ಅನ್ನು ಯಾರು ಬಳಕೆಗೆ ತರಲಿದ್ದಾರೆ?

ಎ) ಗೃಹ ಸಚಿವಾಲಯ ಬಿ) ಭಾರತೀಯ ಸೇನೆ

ಸಿ) ರಿಲಯನ್ಸ್ ಜಿಯೊ ಡಿ) ಏರ್‌ಟೆಲ್

⇒ಉತ್ತರ: ಬಿ

(ವಿವರಣೆ: ಭಾರತೀಯ ಸೇನೆಯು ವಾಟ್ಸ್‌ಆ್ಯಪ್‌ನಂತಹ ಅಥವಾ ಅದಕ್ಕಿತಂಲೂ ಸುರಕ್ಷಿತವಾದ ASIGMA  (ಆರ್ಮಿ ಸೆಕ್ಯೂರ್ ಇಂಡಿಜೀನಿಯಸ್ ಮೆಸೇಜಿಂಗ್ ಅಪ್ಲಿಕೇಶನ್) ಎಂದು ಕರೆಯಲ್ಪಡುವ ಆಂತರಿಕ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ಬಳಕೆಗೆ ತರುತ್ತಿರುವುದಾಗಿ ತಿಳಿಸಿದೆ)

***

2) ಅಗ್ಗದ ಬೆಲೆಯ ವಸ್ತುಗಳನ್ನು ರಫ್ತು ಮಾಡಿ ಭಾರತೀಯ ಉತ್ಪಾದಕರನ್ನು ಸದ್ದಿಲ್ಲದೇ ಮುಗಿಸಿಹಾಕುತ್ತಿದ್ದ ಚೀನಾ ಸರಕುಗಳ ಮೇಲೆ ಕೇಂದ್ರ ಸರ್ಕಾರ ದುಬಾರಿ ಡಂಪಿಂಗ್ ವಿರೋಧಿ ತೆರಿಗೆಗಳನ್ನು ವಿಧಿಸಿದೆ. ಪ್ರಸ್ತುತ ಎಷ್ಟು ವಸ್ತುಗಳ ಮೇಲೆ ಅಂತಹ ತೆರಿಗೆಯನ್ನು ವಿಧಿಸಲಾಗಿದೆ?

ಎ) 10  ಬಿ) 5 ಸಿ) 15 ಡಿ)3

⇒ಉತ್ತರ: ಬಿ

***

3) ‘ಶ್ರಮಿಕ್ ಸಂಜೀವಿನಿ’ ಏನಿದು?

ಎ) ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿರುವೆಡೆಗೆ ತೆರಳಿ ಅವರ ಆರೋಗ್ಯ ಪರೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡುವ ಅತ್ಯಾಧುನಿಕ ಸಂಚಾರಿ ಕ್ಲಿನಿಕ್ ಯೋಜನೆ

ಬಿ) ಗ್ರಾಮ-ಗ್ರಾಮಗಳಿಗೆ ಅತ್ಯುತ್ತಮ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ

ಸಿ) ನಗರದ ನಿವಾಸಿಗಳಿಗೆಲ್ಲ ಕೆಲಸಕ್ಕೆ ಯೋಗ್ಯ ವೇತನ ವಿತರಿಸುವ ವ್ಯವಸ್ಥೆ ಮಾಡಲು ಇರುವ ಬ್ಯಾಂಕಿಂಗ್ಸ್‌ ಸೇವೆ

ಡಿ) ಮೇಲಿನ ಯಾವುದೂ ಅಲ್ಲ

⇒ಉತ್ತರ: ಎ

***

4) ಸೂರ್ಯ, ಭೂಮಿ ಹಾಗೂ ಜೇಮ್ಸ್‌ವೆಬ್‌ ಬಾಹ್ಯಾಕಾಶ ದೂರದರ್ಶಕ ಒಂದೇ ಸರಳ ರೇಖೆಯಲ್ಲಿ ಇರಲಿವೆ. ಅಂದರೆ ಜೇಮ್ಸ್ ವೆಬ್‌ ಬಾಹ್ಯಾಕಾಶ ದೂರದರ್ಶಕ ಲ್ಯಾಂಗ್ರೆಜ್ ಪಾಯಿಂಟ್‌ನಲ್ಲಿದ್ದು ಸದಾ ಸೂರ್ಯನಿಗೆ ಬೆನ್ನು ಹಾಕಿಕೊಂಡೆ ಭೂಮಿಯ ಜತೆಜತೆಗೆ ಸೂರ್ಯನನ್ನು ಸುತ್ತಲಿದೆ. ಈ ದೂರದರ್ಶಕವು ಭೂಮಿಯಿಂದ ಎಷ್ಟು ಕಿ.ಮೀ ದೂರದಲ್ಲಿರುತ್ತದೆ?

ಎ) 5 ಲಕ್ಷ ಬಿ) 10 ಲಕ್ಷ ಸಿ) 9 ಲಕ್ಷ ಡಿ) 15 ಲಕ್ಷ
⇒ಉತ್ತರ: ಡಿ

****

5) ಹಾರ್ವರ್ಡ್‌ ಬ್ಯುಸಿನೆಸ್‌ ರಿವ್ಯೂವ್‌ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಪಟ್ಟಿಯಲ್ಲಿ ವಿಶ್ವದ ಅಗ್ರ ಐದು ನಗರಗಳಲ್ಲಿ ಬೆಂಗಳೂರು ಎಷ್ಟನೇ ಸ್ಥಾನ ಪಡೆದಿದೆ?

ಎ) 5 ಬಿ) 4 ಸಿ) 3 ಡಿ) 2

⇒ಉತ್ತರ: ಎ

ಮಾಹಿತಿ: Spardha Bharati UPSC, ಯೂಟ್ಯೂಬ್‌ ಚಾನೆಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು