ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪರ್ಧಾವಾಣಿ: ಬಹುಆಯ್ಕೆಯ ಪ್ರಶ್ನೆಗಳು– ಆಫ್ರಿಕಾದಲ್ಲಿ ಜೈವಿಕ ವೈವಿಧ್ಯತೆ

ಆಫ್ರಿಕಾದಲ್ಲಿ ಜೈವಿಕ ವೈವಿಧ್ಯತೆ ಇರುವ ಪ್ರದೇಶಗಳನ್ನು ಸಂರಕ್ಷಿಸಲು ಐರೋಪ್ಯ ಆಯೋಗ ಕೆಳಗಿನ ಯಾವ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ?
Published 19 ಜೂನ್ 2024, 21:21 IST
Last Updated 19 ಜೂನ್ 2024, 21:21 IST
ಅಕ್ಷರ ಗಾತ್ರ

1. ಆಫ್ರಿಕಾದಲ್ಲಿ ಜೈವಿಕ ವೈವಿಧ್ಯತೆ ಇರುವ ಪ್ರದೇಶಗಳನ್ನು ಸಂರಕ್ಷಿಸಲು ಐರೋಪ್ಯ ಆಯೋಗ ಕೆಳಗಿನ ಯಾವ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ?
ಎ. ನೇಚರ್‌ಆಫ್ರಿಕಾ.
ಬಿ. ಆಫ್ರಿಕಾ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ ಪ್ರೋಗ್ರಾಮ್.
ಸಿ. ಆಫ್ರಿಕಾ-ಏಷ್ಯಾ ಪ್ರೊಟೆಕ್ಷನ್ ಆಫ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್.
ಡಿ. ಆಫ್ರಿಕಾ ಜೈವಿಕ ವೈವಿಧ್ಯತೆ ಸಂರಕ್ಷಣಾ ಕಾರ್ಯಕ್ರಮ.
ಉತ್ತರ : ಎ

2. ಭಾರತದಲ್ಲಿರುವ ಜೌಗು ಪ್ರದೇಶಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?
1. ರಾಮ್ಸರ್ ಪಟ್ಟಿಯ ಅಡಿಯಲ್ಲಿ ಭಾರತದ ಒಟ್ಟು 82 ಜೌಗು ಪ್ರದೇಶಗಳು ಸ್ಥಾನಮಾನವನ್ನು ಪಡೆದಿವೆ.
2. ಬಿಹಾರದಲ್ಲಿರುವ ಎರಡು ಜೌಗು ಪ್ರದೇಶಗಳಿಗೆ ಈ ಸ್ಥಾನಮಾನವನ್ನು ಕಲ್ಪಿಸಿದ ನಂತರ ಒಟ್ಟು ಸಂಖ್ಯೆ 82 ಕ್ಕೆ ಹೆಚ್ಚಳವಾಯಿತು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ
ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.
ಉತ್ತರ : ಸಿ

3. ಕೆಳಗಿನ ಯಾವ ಕಾಯ್ದೆಯ ಅನ್ವಯ ರಾಷ್ಟ್ರೀಯ ಮಹಿಳಾ ಆಯೋಗವನ್ನು ಸ್ಥಾಪಿಸಲಾಯಿತು ?
ಎ. ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ-1988.
ಬಿ. ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ-1990.
ಸಿ. ಸಿಎಂ ಮಹಿಳಾ ಆಯೋಗ ಕಾಯ್ದೆ-1991.
ಡಿ. ರಾಷ್ಟ್ರೀಯ ಮಹಿಳಾ ಹಕ್ಕುಗಳ ಕಾಯ್ದೆ-1990.
ಉತ್ತರ : ಬಿ

4 ಕೆಳಗಿನ ಯಾವ ಕಾಯ್ದೆಗಳು ಮಹಿಳಾ ಹಕ್ಕುಗಳನ್ನು ಸಂರಕ್ಷಿಸುವ ಕಾನೂನಾತ್ಮಕ ಕಾಯ್ದೆಗಳಾಗಿವೆ ?
1. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ-2013.
2. ಗಣಿಗಾರಿಕೆ ಕಾಯ್ದೆ-1952.
3. ಕಾರ್ಖಾನೆ ಕಾಯ್ದೆ-1948.
4. ಕನಿಷ್ಠ ವೇತನ ಕಾಯ್ದೆ-1948.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 1, 2 ಮತ್ತು 4
ಸಿ. 1, 2, 3 ಮತ್ತು 4 ಡಿ. 3 ಮತ್ತು 4
ಉತ್ತರ : ಸಿ

5 ಕೆಳಗಿನ ಯಾವ ಯುದ್ಧದಲ್ಲಿ ಸರ್ಬಿಯಾ ಕೊಸೋವೋ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿತ್ತು?
ಎ. ಕೊಸೋವೋ ಯುದ್ಧ - 1389.
ಬಿ. ಕೊಸೋವೋ ಯುದ್ಧ - 1789.
ಸಿ. ಸರ್ಬಿಯಾ ಯುದ್ಧ - 1254.
ಡಿ. ಎರಡನೇ ಮಹಾಯುದ್ಧ - 1939.
ಉತ್ತರ : ಎ

6. ಕೊಸೋವೋ ಪ್ರದೇಶದ ಜನಸಂಖ್ಯೆಯ ಸ್ವರೂಪಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?
1. ಈ ಪ್ರದೇಶದಲ್ಲಿ ಅಲ್ಬೇನಿಯ ಮೂಲದ ಮುಸಲ್ಮಾನರು ಹೆಚ್ಚಾಗಿ ವಾಸಿಸುತ್ತಿದ್ದಾರೆ.
2. ಈ ಪ್ರದೇಶದಲ್ಲಿ ಕಜಕಸ್ತಾನ ಮೂಲದ ಮುಸಲ್ಮಾನರು ಹೆಚ್ಚಾಗಿ ವಾಸಿಸುತ್ತಿದ್ದಾರೆ.
3. ಈ ಪ್ರದೇಶದಲ್ಲಿ ಅಲ್ಬೇನಿಯ ಮತ್ತು ಕಜಕಸ್ತಾನ ಮೂಲದ ಮುಸಲ್ಮಾನರು ಹೆಚ್ಚಾಗಿ ವಾಸಿಸುತ್ತಿದ್ದಾರೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1, 2 ಮತ್ತು 3 ಬಿ. 1 ಮಾತ್ರ
ಸಿ. 2 ಮಾತ್ರ ಡಿ. 3 ಮಾತ್ರ
ಉತ್ತರ : ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT