ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಲಿತ ವಿದ್ಯಮಾನಗಳು: ಚೀನಾ–ಸೊಲೊಮನ್ ದ್ವೀಪಗಳ ನಡುವೆ ಒಪ್ಪಂದ

Published 2 ಆಗಸ್ಟ್ 2023, 15:37 IST
Last Updated 2 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

1. ಚೀನಾ– ಸೊಲೊಮನ್ ದ್ವೀಪಗಳ ನಡುವೆ ಒಪ್ಪಂದ

ಇತ್ತೀಚಿಗೆ ಚೀನಾ ಮತ್ತು ಸೊಲೊಮನ್ ದ್ವೀಪ ಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಈ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು  ಎರಡು ರಾಷ್ಟ್ರಗಳು ನಿರ್ಧರಿಸಿವೆ.

ದಕ್ಷಿಣ ಪೆಸಿಫಿಕ್ ಸಮುದ್ರದ ಭಾಗದಲ್ಲಿ ಚೀನಾದ ಪ್ರಭಾವ ಗಣನೀಯವಾಗಿ ಹೆಚ್ಚುತ್ತಿರುವ‌ ಕಾರಣದಿಂದ ಜಾಗತಿಕ ಮಟ್ಟದ ಸಮಸ್ಯೆಗಳು ಉದ್ಭವವಾಗಬಹುದು ಎಂದು ಅಮೆರಿಕ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ಆತಂಕ ವ್ಯಕ್ತಪಡಿಸಿ ದ್ದವು. ಈಗ ಈ ಎರಡು ರಾಷ್ಟ್ರಗಳ ನಡುವಿನ ಒಪ್ಪಂದ ಜಾಗತಿಕ ಮಟ್ಟದ ವಿದ್ಯಮಾನಗಳಲ್ಲಿ ಅದರಲ್ಲೂ ದಕ್ಷಿಣ ಪೆಸಿಫಿಕ್ ಸಮುದ್ರದ ಭಾಗಗಳಲ್ಲಿ ಆತಂಕವನ್ನುಂಟು ಮಾಡಿದೆ.

ಚೀನಾ ಮತ್ತು ಸೊಲೊಮನ್ ದ್ವೀಪಗಳ ನಡುವೆ ಪೊಲೀಸ್, ಆರ್ಥಿಕತೆ ಮತ್ತು ತಾಂತ್ರಿಕ ಸಹಕಾರದ ವಲಯಗಳಲ್ಲಿ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಎರಡು ರಾಷ್ಟ್ರಗಳು ಈ ವಲಯಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದು, ಈ ಪ್ರದೇಶದಲ್ಲಿ ಚೀನಾದ ಹಸ್ತಕ್ಷೇಪ ಮತ್ತು ಪ್ರಭಾವ ಹೆಚ್ಚಾಗಲಿದೆ.

ಸೊಲೊಮನ್ ದ್ವೀಪಗಳು ಆಸ್ಟ್ರೇಲಿಯಾದ ಈಶಾನ್ಯ ಭಾಗದಲ್ಲಿರುವ ದ್ವೀಪಗಳಾಗಿದ್ದು, ಈ ಒಪ್ಪಂದದ ನಂತರ ಚೀನಾ ಇದೇ ಪ್ರದೇಶದಲ್ಲಿ ಸಕ್ರಿಯವಾಗಲಿದೆ. ಮುಂದಿನ ದಿನಗಳಲ್ಲಿ ಅಮೆರಿಕದ ಸಹಭಾಗಿತ್ವದ ರಾಷ್ಟ್ರಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾದ ಮೇಲೆ ಇದರಿಂದ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

2019ರವರೆಗೂ ಸೊಲೊಮನ್ ದ್ವೀಪಗಳು ತೈವಾನ್ ಚಿಂತನೆಗಳಿಗೆ ಮತ್ತು ಉದ್ದೇಶಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ 2019 ರ ನಂತರ ತೈವಾನ್‌ನ ಉದ್ದೇಶಗಳಿಗೆ ವಿರುದ್ಧವಾಗಿ ಬೀಜಿಂಗ್ ಪರವಾಗಿ ನಿಲುವು ತೆಗೆದುಕೊಂಡ ಸೊಲೊಮನ್ ದ್ವೀಪಗಳು ತೈವಾನ್ ವಿಚಾರದಲ್ಲಿ ಚೀನಾದ ನಿಲುವನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿತು.

ಪ್ರಸ್ತುತ ಈ ಒಪ್ಪಂದಕ್ಕೂ ಮುಂಚಿತವಾಗಿಯೇ ಎರಡು ರಾಷ್ಟ್ರಗಳು ಗೌ‍ಪ್ಯವಾಗಿ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಮಾಹಿತಿಗಳು ಸೋರಿಕೆಯಾದವು. ನಂತರ ಸೊಲೊಮನ್ ದ್ವೀಪಗಳ ಪ್ರಧಾನಮಂತ್ರಿ ‘ಚೀನಾ ಸರ್ಕಾರಕ್ಕೆ ಯಾವುದೇ ರೀತಿಯ ಮಿಲಿಟರಿ ಸಹಕಾರವನ್ನು ಕಲ್ಪಿಸುತ್ತಿಲ್ಲ ಹಾಗೂ ಚೀನಾದ ಮಿಲಿಟರಿ ಪಡೆಗಳು ತನ್ನ ಪ್ರದೇಶದಲ್ಲಿ ವಾಸ್ತವ್ಯ ಹೂಡಲು ಯಾವುದೇ ರೀತಿಯ ಅವಕಾಶಗಳನ್ನು ಕಲ್ಪಿಸುವುದಿಲ್ಲ’ ಎನ್ನುವ ಔಪಚಾರಿಕ ಹೇಳಿಕೆ ಬಿಡುಗಡೆ ಮಾಡಿದರು. ಈ ಸ್ವರೂಪದ ಗೌಪ್ಯ ಭದ್ರತಾ ಒಪ್ಪಂದ ಜಾರಿಯಾದರೆ ಚೀನಾದ ಮಿಲಿಟರಿ ಪಡೆಗಳು ಸೊಲೊಮನ್ ದ್ವೀಪಗಳಲ್ಲಿ ನೆಲೆಯೂರುವ ಸಾಧ್ಯತೆಗಳು ಹೆಚ್ಚಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾಕ್ಕೆ ಸಮಸ್ಯೆಗಳು ಉಂಟಾಗಬಹುದು.

ತನ್ನ ವ್ಯಾಪಾರ ಸಂಬಂಧಗಳನ್ನು ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪೆಸಿಫಿಕ್ ಸಮುದ್ರದ ಅಕ್ಕಪಕ್ಕದ ಪ್ರದೇಶಗಳಲ್ಲಿ, ಏಷ್ಯಾ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ವಿಸ್ತರಿಸಲು ಮುಂದಾಗುತ್ತಿದೆ ಎನ್ನುವ ಹೇಳಿಕೆಯನ್ನು ಇತ್ತೀಚೆಗೆ ಚೀನಾದ ಅಧ್ಯಕ್ಷರು ಬಿಡುಗಡೆ ಮಾಡಿದ್ದರು.

*******

2. ಅಮೆರಿಕದ ಅಧಿಕಾರಿಗಳೊಂದಿಗೆ ದಲೈಲಾಮಾ ಭೇಟಿ

ಇತ್ತೀಚಿಗೆ ಟಿಬೆಟ್‌ನ ಧರ್ಮ ಗುರು ದಲೈಲಾಮ ಅವರು ನವದೆಹಲಿಯಲ್ಲಿ ಅಮೆರಿಕದ ಅಧಿಕಾರಿಗಳನ್ನು ಭೇಟಿಯಾದರು. ದಲೈಲಾಮಾ ಅವರ ಭೇಟಿಯ ಹಿನ್ನಲೆಯಲ್ಲಿಯೇ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿ, ‘ಇದು ತನ್ನ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಮಾಡುತ್ತಿರುವ ಹಸ್ತಕ್ಷೇಪ’ ಎಂದು ಆರೋಪ ಮಾಡಿತ್ತು.

ಅಮೆರಿಕದ ಅಧೀನ ಕಾರ್ಯದರ್ಶಿಗಳಾದ ಉಝ್ರಾ ಝೇಯಾ(Uzra Zeya) ಅವರು ಟಿಬೆಟ್ ವಿದ್ಯಮಾನಗಳ ವಿಶೇಷ ಸಮನ್ವಯ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಾರೆ. ಈ ಕಾರಣದಿಂದ ಧರ್ಮಶಾಲಾದಲ್ಲಿರುವ ಕೇಂದ್ರ ಟಿಬೆಟ್ ಆಡಳಿತ ವ್ಯವಸ್ಥೆಯ ಅಧಿಕಾರಿಗಳೊಂದಿಗೆ ಹಾಗೂ ದಲೈಲಾಮ ಅವರೊಂದಿಗೆ ಮಾತನಾಡಿರುವುದಾಗಿ ಅಮೆರಿಕ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ವಿಶೇಷ ಸೂಚನೆ: ಚೀನಾ ಸರ್ಕಾರ ಟಿಬೆಟ್ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಮುಕ್ತ ಚರ್ಚೆಯನ್ನು ನಡೆಸಲು ಇತ್ತೀಚೆಗೆ ದಲೈಲಾಮಾ ಅವರಿಗೆ ಆಹ್ವಾನವನ್ನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT