ಬೆಂಗಳೂರು: ಕೇಂದ್ರ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಎರಡು ಜೂನಿಯರ್ ರಿಸರ್ಚ್ ಫೆಲೊಶಿಪ್ (ಜೆಆರ್‌ಎಫ್)ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರಿನ ಡಿಆರ್‌ಡಿಒ ಕಚೇರಿಗೆ ಈ ಜೆಆರ್‌ಎಫ್‌ಗಳನ್ನು ನಿಯೋಜನೆ ಮಾಡಲಾಗುವುದು.
ಬಿ.ಇ, ಬಿ.ಟೆಕ್ ಅಥವಾ ಎಂ.ಇ, ಎಂ.ಟೆಕ್ ಪಡೆದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು.
ಜೆಆರ್‌ಎಫ್‌ಗೆ ನೇಮಕವಾದವರಿಗೆ ಮಾಸಿಕ ₹ 46,990 ವೇತನ ನೀಡಲಾಗುವುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 28 ವರ್ಷದ ವಯಸ್ಸಿನ ಒಳಗೆ ಇರಬೇಕು. ಒಬಿಸಿ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಅರ್ಜಿಯನ್ನು ಅಕ್ಟೋಬರ್ 10ರ ಒಳಗೆ ಸಲ್ಲಿಸಬೇಕು.
ವೆಬ್‌ಸೈಟ್: https://www.drdo.gov.in/careers