ಭಾನುವಾರ, ಜುಲೈ 3, 2022
25 °C

ಉದ್ಯೋಗ ವಾರ್ತೆ: ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಹುದ್ದೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹುದ್ದೆಗಳು

ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಕಾಯಂ ಹಾಗೂ ಗುತ್ತಿಗೆ ಆಧಾರದ ಮೇಲಿರುತ್ತವೆ. 

 ಎಕನಾಮಿಸ್ಟ್‌, ಸ್ಟ್ಯಾಟಿಸಿಷಿಯನ್‌, ರಿಸ್ಕ್‌ ಮ್ಯಾನೇಜ್‌ಮೆಂಟ್‌, ಕ್ರೆಡಿಟ್ ಅನಾಲಿಸ್ಟ್‌, ಕ್ರೆಡಿಟ್ ಆಫೀಸರ್‌, ಟೆಕ್‌ ಆಪ್ರೈಸಲ್‌, ಐಟಿ ಆಫೀಸರ್‌ ಇವು ಕಾಯಂ ಹುದ್ದೆಗಳಾಗಿರುತ್ತವೆ. 

ಒಟ್ಟು 696 ಹುದ್ದೆಗಳಿದ್ದು 594 ಕಾಯಂ ಹುದ್ದೆಗಳು ಹಾಗೂ 102 ಗುತ್ತಿಗೆ ಆಧಾರದ ಹುದ್ದೆಗಳಾಗಿವೆ. ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹಾಗೂ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಶೇ 60 ರಷ್ಟು ಅಂಕಗಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿನಾಯಿತಿ: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಶೇ 55 ಅಂಕಗಳಿಸಿರಬೇಕು. ವಯೋಮಿತಿಯಲ್ಲಿ ಎಸ್‌ಟಿ, ಎಸ್‌ಸಿ ವಿದ್ಯಾರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ಹಾಗೂ ಮಾಜಿ ಸೈನಿಕರಿಗೆ 5 ವರ್ಷ ಸಡಿಲಿಕೆ ಇದೆ.

ಏಪ್ರಿಲ್‌ 26, 2022 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಮೇ 10, 2022ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ಈ ಹುದ್ದೆಯ ಕುರಿತ ಇನ್ನಷ್ಟು ವಿವರಗಳಿಗೆ https://bankofindia.co.in/Career ವೆಬ್‌ಸೈಟ್ ನೋಡಿ.

ಭಾರತೀಯ ಸೇನೆಯಲ್ಲಿ ಹುದ್ದೆಗಳು

ಭಾರತೀಯ ಸೇನೆ ‘ಗ್ರೂಪ್‌ ಸಿ’ ಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಹುದ್ದೆಗಳು: ಸ್ಟೆನೋಗ್ರಾಫರ್‌, ಮೆಸ್‌ ವೇಯ್ಟರ್‌, ಮೆಸೆಂಜರ್, ವಾಚ್‌ಮನ್‌, ಗಾರ್ಡನರ್‌ ಹೌಸ್‌ ಕೀಪರ್‌

ಹುದ್ದೆಗಳ ಸಂಖ್ಯೆ: 19

ಸ್ಥಳ: ಅಲಹಾಬಾದ್‌, ಗುಜರಾತ್‌

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ.

ವಯೋಮಿತಿ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮೂಲಕ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 7, 2022

ಅರ್ಜಿ ಸಲ್ಲಿಕೆ ವಿಳಾಸ: ಆರ್ಮಿ ಸೆಲೆಕ್ಷನ್ ಸೆಂಟರ್, ಅಲಹಾಬಾದ್ ಪೂರ್ವ ಕಾರಿಯಪ್ಪ ರಸ್ತೆ, ಕ್ಯಾಂಟನ್, ಸಿವಿಲ್ ಲೈನ್ಸ್ ಪ್ರಯಾಗ್ ರಾಜ್, ಉತ್ತರಪ್ರದೇಶ 211 001

ಹೆಚ್ಚಿನ ಮಾಹಿತಿಗೆ: https://indianarmy.nic.in/

ಕೊಡಗಿನಲ್ಲಿ ಗ್ರಾಮ ಲೆಕ್ಕಿಗರ ಹುದ್ದೆ

ಕೊಡಗು ಜಿಲ್ಲಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಯಲ್ಲಿ ಖಾಲಿಯಿರುವ ಗ್ರಾಮ ಲೆಕ್ಕಿಗರ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು ಸಂಖ್ಯೆ: 35

ಸ್ಥಳ: ಕೊಡಗು ಜಿಲ್ಲೆಯಾದ್ಯಂತ

ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಶುಲ್ಕ: ಎಸ್‌ಸಿ, ಎಸ್‌ಸಿ ಹಾಗೂ ಪ್ರವರ್ಗ– 1 ಅಭ್ಯರ್ಥಿಗಳಿಗೆ ₹ 200, ಸಾಮಾನ್ಯ ವರ್ಗ, 2ಎ, 2ಬಿ, 3ಎ ಹಾಗೂ 3ಬಿ ಅಭ್ಯರ್ಥಿಗಳಿಗೆ ₹ 400.

ವಯೋಮಿತಿ: ಅರ್ಜಿ ಸಲ್ಲಿಕೆ ಮಾಡಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷದ ಒಳಗಿರಬೇಕು. ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ–1ರ ಅಭ್ಯರ್ಥಿಗಳಿಗೆ 40 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ. ಇತರೆ ಹಿಂದುಳಿದ ವರ್ಗಗಳಾದ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 19, 2022

ಹೆಚ್ಚಿನ ಮಾಹಿತಿಗೆ: https://kodagu-va.kar.nic.in/

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಹುದ್ದೆಗಳು

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು: ಕ್ಲರ್ಕ್‌, ಅಟೆಂಡರ್ ಹಾಗೂ ಡ್ರೈವರ್‌

ಹುದ್ದೆಗಳ ಸಂಖ್ಯೆ: 98

ಸ್ಥಳ: ಶಿವಮೊಗ್ಗ

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ.

ವಯೋಮಿತಿ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಲಿಮಿಟೆಡ್‌ ನೇಮಕಾತಿ ಅಧಿಸೂಚನೆಯ ಪ್ರಕಾರ ಮೇ 16, 2022ಕ್ಕೆ ಅನುಗುಣವಾಗುವಂತೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ. ಎಸ್‌ಟಿ, ಎಸ್‌ಸಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ವಿಳಾಸ: ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿ ನಿಯಂತ್ರಣ ಸಮಿತಿ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್‌. ಬಾಲರಾಜ್‌ ಅರಸ್ ರಸ್ತೆ, ಪಿ.ಬಿ.ಸಂ–62, ಶಿವಮೊಗ್ಗ – 577201

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 16, 2022

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು