ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ವಾರ್ತೆ: ಯುಐಡಿಎಐನಲ್ಲಿ 11 ಹುದ್ದೆಗಳು

Last Updated 16 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಯುಐಡಿಎಐನಲ್ಲಿ 11 ಹುದ್ದೆಗಳು

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳು: ಡೆಪ್ಯೂಟಿ ಡೈರೆಕ್ಟರ್‌, ಅಸಿಸ್ಟೆಂಟ್‌ ಡೈರೆಕ್ಟರ್‌
ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ.
ವಯೋಮಿತಿ: ಗರಿಷ್ಠ 56 ವರ್ಷ (ಜನವರಿ 24, 2022ಕ್ಕೆ ಅನುಗುಣವಾಗುವಂತೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆ. 24, 2022
ಅರ್ಜಿ ಸಲ್ಲಿಕೆಯ ವಿಳಾಸ: Unique Identification Authority of India (UIDAI), Aadhaar Complex, NTI Layout, Tata Nagar, Kodigehalli, Technology Centre, Bengaluru - 560092.
ಹೆಚ್ಚಿನ ಮಾಹಿತಿಗೆ: uidai.gov.in

ಕ್ಯಾಬಿನೆಟ್‌ ಸೆಕ್ರೆಟರಿಯೇಟ್ ಡೆಪ್ಯುಟಿ ಫೀಲ್ಡ್‌

ಆಫೀಸರ್‌(ಗ್ರೂಪ್‌ ಬಿ, ನಾನ್‌ ಗೆಜೆಟೆಡ್‌) ಹುದ್ದೆಗಳ ನೇಮಕಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ. 4 ಕೊನೆಯ ದಿನ.
ಅರ್ಹತೆ: ಅಭ್ಯರ್ಥಿಗಳಿಗೆ ನಿರ್ದಿಷ್ಟ ಭಾಷೆಯ ವಿಷಯದಲ್ಲಿ ಪದವಿ ಅಥವಾ ಎರಡು ವರ್ಷಗಳ ಡಿಪ್ಲೊಮಾ ಪಾಸಾಗಿರಬೇಕು. ಸ್ಥಳೀಯ ಭಾಷೆಯಲ್ಲಿ ಪ್ರವೀಣರಾಗಿರಬೇಕು. 21 ವರ್ಷದಿಂದ 30ರ ವಯೋಮಾನದವರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಅರ್ಜಿಯನ್ನು ಅಗತ್ಯವಿರುವ ಪ್ರಮಾಣಪತ್ರಗಳು ಮತ್ತು ಎರಡು ಸ್ವಯಂ-ದೃಢೀಕರಿಸಿದ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಬಣ್ಣದ ಭಾವಚಿತ್ರದೊಂದಿಗೆ ಪೋಸ್ಟ್ ಬ್ಯಾಗ್ ನಂ. 001, ಲೋಧಿ ರೋಡ್ ಹೆಡ್ ಪೋಸ್ಟ್ ಆಫೀಸ್, ನವದೆಹಲಿ-110003 ಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ https://cabsec.gov.in/ ನೋಡಿ.

ಬಿಡಿಎಯಲ್ಲಿ ಹುದ್ದೆಗಳು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹುದ್ದೆ: ಕಾನೂನು ಅಧಿಕಾರಿ (ಲೀಗಲ್‌ ಆಫೀಸರ್‌)
ವಿದ್ಯಾರ್ಹತೆ ಹಾಗೂ ವಯೋಮಿತಿ: ಬಿಡಿಎ ನೇಮಕಾತಿ ನಿಯಮಗಳ ಅನ್ವಯ ವಿದ್ಯಾರ್ಹತೆ ಹಾಗೂ ವಯೋಮಿತಿ ನಿಗದಿ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ವಿಳಾಸ: Commissioner, Bangalore Development Authority, Bengaluru, Karnataka
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಫೆಬ್ರುವರಿ 25, 2022
ಹೆಚ್ಚಿನ ಮಾಹಿತಿಗೆ: eng.bdabangalore.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT