ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಸಾಮಾನ್ಯ ಅಧ್ಯಯನ

Last Updated 12 ಜುಲೈ 2022, 11:42 IST
ಅಕ್ಷರ ಗಾತ್ರ

51) ವೇಲೆನ್ಸಿ ಎಲೆಕ್ಟ್ರಾನ್‌ಗಳು ಎಂದರೆ -

ಎ) ಪರಮಾಣುವಿನ ಮೊದಲ ಕವಚದ ಎಲೆಕ್ಟ್ರಾನ್‌ಗಳು
ಬಿ) ಪರಮಾಣುವಿನ ಎರಡನೇ ಕವಚದ ಎಲೆಕ್ಟ್ರಾನ್‌ಗಳು
ಸಿ) ಪರಮಾಣುವಿನ ಅತ್ಯಂತ ಹೊರ ಕವಚದ ಎಲೆಕ್ಟ್ರಾನ್‌ಗಳು
ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಸಿ)

ವಿವರಣೆ: ಪರಮಾಣುವಿನ ಅತ್ಯಂತ ಹೊರ ಕವಚದಲ್ಲಿರುವ ಎಲೆಕ್ಟ್ರಾನ್‌ಗಳನ್ನು ವೇಲೆನ್ಸಿ ಎಲೆಕ್ಟ್ರಾನ್‌ಗಳು ಎಂದು ಕರೆಯುವರು. ಪರಮಾಣುವಿನ ಅತ್ಯಂತ ಹೊರ ಕವಚವು ಗರಿಷ್ಠ 8 ಎಲೆಕ್ಟ್ರಾನ್‌ಗಳನ್ನು ಹೊಂದಬಹುದು.

52) ಗಾಂಧೀಜಿಯವರು ಈ ಕೆಳಗಿನ ಯಾವ ಸತ್ಯಾಗ್ರಹದಲ್ಲಿ ನೀಲಿ ಬೆಳೆಗಾರರ ಪರವಾಗಿ ಭಾಗವಹಿಸಿದರು?
ಎ) ಚಂಪಾರಣ್ ಸತ್ಯಾಗ್ರಹ
ಬಿ) ಅಹಮದಾಬಾದ್ ಗಿರಣಿ ಮುಷ್ಕರ
ಸಿ) ಬೇಡರ ಸತ್ಯಾಗ್ರಹ ಡಿ) ಖಿಲಾಫತ್ ಚಳವಳಿ
ಉತ್ತರ: (ಎ)
ವಿವರಣೆ: ತಮ್ಮ ಒಟ್ಟು ಭೂಮಿಯ 3/20 ಭಾಗದಲ್ಲಿ ‘ನೀಲಿ’ಯನ್ನು ಬೆಳೆಯಲೇಬೇಕೆಂಬ ಒತ್ತಡದಲ್ಲಿದ್ದ ಚಂಪಾರಣ್ಯದ ರೈತರ ಪರವಾಗಿ 1917 ರಲ್ಲಿ ಗಾಂಧೀಜಿಯವರು ಚಂಪಾರಣ್ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಇದು ಅವರ ಮೊದಲ ಸತ್ಯಾಗ್ರಹ ಚಳುವಳಿಯಾಗಿತ್ತು.

53) ಗಾಂಧೀಜಿಯವರು ಆಫ್ರಿಕಾದಿಂದ ಭಾರತಕ್ಕೆ ಬಂದ ವರ್ಷ ಯಾವುದು?
ಎ) 1915 ಬಿ) 1916 ಸಿ) 1917 ಡಿ) 1918
ಉತ್ತರ: (ಎ)
ವಿವರಣೆ: ಭಾರತದ ಇತಿಹಾಸದಲ್ಲಿ 1919 ರಿಂದ 1947 ರ ವರೆಗಿನ ಕಾಲವನ್ನು ‘ಗಾಂಧೀ ಯುಗ’ ಎಂದು ಕರೆಯುತ್ತಾರೆ. ಮಹಾತ್ಮ ಗಾಂಧೀಜಿಯವರು ಆಫ್ರಿಕಾದಲ್ಲಿ ಅಲ್ಲಿಯ ಸರ್ಕಾರದ ವರ್ಣ ಭೇದ ನೀತಿಯ ವಿರುದ್ಧ ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗದ ಮೂಲಕ ಯಶಸ್ಸನ್ನು ಗಳಿಸಿ 1915 ರಲ್ಲಿ ಭಾರತಕ್ಕೆ ಬಂದರು.

54) ‘ಭಾರತೀಯ ನಾಗರೀಕ ಸೇವೆಗಳ ಪರೀಕ್ಷೆ’ಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಯಾರು?
ಎ) ದಾದಾಬಾಯಿ ನವರೋಜಿ
ಬಿ) ಸುರೇಂದ್ರನಾಥ ಬ್ಯಾನರ್ಜಿ ಸಿ) ಸತ್ಯೇಂದ್ರನಾಥ್ ಟ್ಯಾಗೋರ್ ಡಿ) ಸುಭಾಷ್ ಚಂದ್ರ ಬೋಸ್
ಉತ್ತರ: (ಸಿ)
ವಿವರಣೆ: ಸತ್ಯೇಂದ್ರನಾಥ್ ಟ್ಯಾಗೋರ್ ‘ಭಾರತೀಯ ನಾಗರೀಕ ಸೇವೆಗಳ’ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯರಾಗಿದ್ದಾರೆ. ಇವರು ರವೀಂದ್ರನಾಥ್ ಟ್ಯಾಗೋರ್‌ರವರ ಎರಡನೇ ಅಣ್ಣ. ಸುರೇಂದ್ರನಾಥ್ ಬ್ಯಾನರ್ಜಿಯವರು ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆ ಉತ್ತೀರ್ಣರಾದವರಲ್ಲಿ ಎರಡನೆಯವರಾಗಿದ್ದಾರೆ.

55) ಮಹಾತ್ಮ ಗಾಂಧೀಜಿಯವರು ಭಾರತಕ್ಕೆ ಬಂದಾಗ ಆಶ್ರಮವನ್ನು ಯಾವ ನದಿಯ ದಂಡೆಯ ಮೇಲೆ ನಿರ್ಮಿಸಿದರು.?
ಎ) ನರ್ಮದಾ ಬಿ) ಸಬರಮತಿ ಸಿ) ಲೂಸಿ ಡಿ) ತಪತಿ
ಉತ್ತರ: (ಬಿ)
ವಿವರಣೆ: ಭಾರತಕ್ಕೆ ಬಂದಾಗ ಗುಜರಾತಿನ ಅಹಮದಾಬಾದ್‌ನಲ್ಲಿ ಸಬರಮತಿ ನದಿಯ ದಂಡೆಯ ಮೇಲೆ ‘ಸಬರಮತಿ’ ಆಶ್ರಮವನ್ನು ಸ್ಥಾಪಿಸಿ ‘ಸತ್ಯಾಗ್ರಹ’ ಎಂಬ ಹೆಸರನ್ನು ಇಟ್ಟರು. ನಂತರ ತಮ್ಮ ‘ರಾಜಕೀಯ ಗುರು’ ಗೋಖಲೆಯನ್ನು ಭೇಟಿ ಮಾಡಿ ಅವರ ಸಲಹೆಯಂತೆ ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ಧುಮುಕಿದರು.

56) ‘ಖಿಲಾಫತ್ ಚಳುವಳಿ’ಯ ನೇತಾರರು ಯಾರು?
ಎ) ಮೌಲಾನ ಅಜಾದ್ ಮತ್ತು ಹಕೀಂ ಅಜ್ಮಲ್ ಖಾನ್ ಬಿ) ರಹಮತ್ ಅಲಿ
ಸಿ) ಶೌಕತ್ ಅಲಿ ಡಿ) ಮೇಲಿನ ಎಲ್ಲರೂ

ಉತ್ತರ: (ಡಿ)
ವಿವರಣೆ: ಖಲೀಫನಿಗಾದ ಅಪಮಾನದಿಂದ ಬ್ರಿಟಿಷರ ವಿರುದ್ಧ ಜಗತ್ತಿನಾದ್ಯಾಂತ ಮುಸ್ಲಿಮರು ಕೋಪಗೊಂಡಿದ್ದರು. ಈ ಸಮಿತಿಯನ್ನು ರಚಿಸಿ, ದೇಶದಾದ್ಯಂತ ಈ ಚಳವಳಿಗೆ ಕರೆ ನೀಡಿದರು. ಈ ಸಮಿತಿಯನ್ನು ಹಿಂದು-ಮುಸ್ಲಿಂ ಸ್ನೇಹವನ್ನು ಗಾಢಗೊಳಿಸುತ್ತದೆ ಎಂದು ಗಾಂಧೀಜಿ ಮತ್ತು ತಿಲಕ್‌ರವರು ನಂಬಿದರು.

57) ಯುಗಾಂತರ ಪತ್ರಿಕೆಯನ್ನು ಯಾರು ಆರಂಭಿಸಿದರು?

ಎ) ಮೇಡಂ ಕಾಮಾ ಬಿ) ಬರೀಂದ್ರ ಕುಮಾರ್ ಘೋಷ್
ಸಿ) ಸಚಿಂದ್ರನಾಥ್ ಸನ್ಯಾಲ್ ಡಿ) ಬ್ರಹ್ಮೋ ಉಪಾಧ್ಯಾಯ

ಉತ್ತರ: (ಬಿ)
ವಿವರಣೆ: ಯುಗಾಂತರ ಪತ್ರಿಕೆಯನ್ನು ಬರೀಂದ್ರ ಕುಮಾರ್ ಘೋಷ್‌ರವರು 1906ರಲ್ಲಿ ಆರಂಭಿಸಿದರು. ಮೇಡಂ ಕಾಮಾರವರು ವಂದೇ ಮಾತರಂ ಪತ್ರಿಕೆಯನ್ನು 1906ರಲ್ಲಿ, ಸಚೀಂದ್ರನಾಥ್ ಸನ್ಯಾಲ್‌ರವರು ಬಂದಿ ಜೀವನ್ ಮತ್ತು ಆತ್ಮಶಕ್ತಿ ಪತ್ರಿಕೆಗಳನ್ನು 1922ರಲ್ಲಿ ಮತ್ತು ಬ್ರಹ್ಮೋ ಉಪಾಧ್ಯಾಯರವರು ಸಂಧ್ಯಾ ಪತ್ರಿಕೆಯನ್ನು 1906ರಲ್ಲಿ ಆರಂಭಿಸಿದರು.

58) ‘ಕಾಂಗ್ರೆಸ್ ಒಂದು ಭಿಕ್ಷೆ ಬೇಡುವ ಸಂಸ್ಥೆ’ ಎಂದು ಯಾರು ಹೇಳಿದರು?
ಎ) ಸುಭಾಷ್ ಚಂದ್ರ ಬೋಸ್
ಬಿ) ಮೌಲಾನಾ ಕಲಂ ಅಜಾದ್‌ ಸಿ) ಬಿಪಿನ್ ಚಂದ್ರ ಪಾಲ್
ಡಿ) ಅರವಿಂದ್ ಘೋಷ್

ಉತ್ತರ: (ಡಿ)

ವಿವರಣೆ: ಅರವಿಂದ್ ಘೋಷ್‌ರು ಕಾಂಗ್ರೆಸ್ ಒಂದು ಭಿಕ್ಷೆ ಬೇಡುವ ಸಂಸ್ಥೆ ಎಂದು ಹೇಳಿದರು. ಅರಬಿಂದೋ ಘೋಷ್‌ರವರು ‘ಧರ್ಮ ಕರ್ಮ ಯೋಗಿನ್ ’ ಎಂಬ ಪತ್ರಿಕೆ ಆರಂಭಿಸಿದರು. ಅರಬಿಂದೋ ಘೋಷ್‌ರವರು ಇಂಗ್ಲೆಂಡ್‌ನಲ್ಲಿದ್ದಾಗ ಬಾಂಬ್ ತಯಾರಿಕೆ ಮತ್ತು ಅವುಗಳ ಉಪಯೋಗ ಕಲಿತರು. ಪುದುಚೇರಿಯಲ್ಲಿ ಅರವಿಂದ ಆಶ್ರಮವನ್ನು ಸ್ಥಾಪಿಸಿದರು.

59) ಈ ಕೆಳಗಿನ ಯಾವುದನ್ನು ‘ಜಲ ಪಾಷಾಣ’ ಎಂದು ಕರೆಯುವರು?
ಎ) ಕೆಂಪು ರಂಜಕ ಬಿ) ಬಿಳಿ ರಂಜಕ
ಸಿ) ಗಂಧಕ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: (ಬಿ)

ವಿವರಣೆ: ಬಿಳಿ ರಂಜಕವು ಗಾಳಿಗೆ ತೆರೆದಿಟ್ಟ ಕೂಡಲೆ ಹೊತ್ತಿ ಉರಿಯುತ್ತದೆ. ಆದ್ದರಿಂದ ಇದನ್ನು ಯಾವಾಗಲೂ ನೀರಿನಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ. ಬಿಳಿ ರಂಜಕ ನೀರಿನಲ್ಲಿ ಕರಗುವುದಿಲ್ಲ. ಇದು ಅತ್ಯಂತ ವಿಷಕಾರಿ. ಆದ್ದರಿಂದ ಇದನ್ನು ‘ಜಲ ಪಾಷಾಣ’ ಎನ್ನುವರು.

(ಪ್ರಶ್ನೋತ್ತರ ಸಂಯೋಜನೆ: www.iasjnana.com ಸಂಪರ್ಕಕ್ಕೆ: 9916399276)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT