ಶನಿವಾರ, ಅಕ್ಟೋಬರ್ 16, 2021
29 °C
ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್ ಸಂಸ್ಥೆ, ಕರ್ನಾಟಕದ ಆರ್ಥಿಕತೆ

ಗ್ರೂಪ್‌ ಸಿ ತಾಂತ್ರಿಕೇತರ ಹುದ್ದೆ ಪ್ರಶ್ನೋತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ಲೋಕ ಸೇವಾ ಆಯೋಗವು ಕರೆದಿರುವ ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳ ಪರೀಕ್ಷೆ ತಯಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್ ಸಂಸ್ಥೆಗಳು ಹಾಗೂ ಕರ್ನಾಟಕ ಆರ್ಥಿಕತೆ ಕುರಿತಾದ ಬಹು ಆಯ್ಕೆ ಪ್ರಶ್ನೋತ್ತರಗಳು.

1. ‘ದಿ ಕರ್ನಾಟಕ ಜಿಲ್ಲಾ ಪರಿಷತ್‌, ತಾಲ್ಲೂಕು ಪಂಚಾಯತ್ ಸಮಿತಿಸ್, ಮಂಡಳ ಪಂಚಾಯತ್‌ ಆ್ಯಂಡ್ ನ್ಯಾಯ ಪಂಚಾಯತ್ಸ್ ಆ್ಯಕ್ಟ್ 1983’ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಎಷ್ಟು ಜನರಿಗೆ ಒಬ್ಬ ಜಿಲ್ಲಾ ಪರಿಷತ್ ಸದಸ್ಯ ಇರಲು ಸಾಧ್ಯವಿತ್ತು?

ಎ. 45 ಸಾವಿರ

ಬಿ. 15 ಸಾವಿರ

ಸಿ. 30 ಸಾವಿರ

ಡಿ. 25 ಸಾವಿರ

ಉತ್ತರ: ಬಿ. ( ವಿವರಣೆ- 1995ರ ತಿದ್ದುಪಡಿ ಪ್ರಕಾರ ಪ್ರಸ್ತುತ 18 ಸಾವಿರ ಜನರಿಗೆ ಒಬ್ಬ ಸದಸ್ಯನಿರಲು ಅವಕಾಶ ನೀಡಲಾಗಿದೆ)

2. ರಾಜ್ಯದಲ್ಲಿ ಈ ಸಂಸ್ಥೆಗಳ ಉತ್ತಮ ಆಡಳಿತ ಹಾಗೂ ಕಾರ್ಯನಿರ್ವಹಣೆಗಾಗಿ ಸಲಹೆಗಳನ್ನು ನೀಡುವ ಉದ್ದೇಶದಿಂದ ಪಿ. ಆರ್. ನಾಯಕ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಅದು ನೀಡಿದ ವರದಿಯನ್ನು ರಾಜ್ಯಸರ್ಕಾರ ……… ಮಾರ್ಚ್‌ನಲ್ಲಿ ಒಪ್ಪಿಕೊಂಡು ಜಾರಿಗೆ ತಂದಿತು.

ಎ. 1996

ಬಿ. 2002

ಸಿ. 1999

ಡಿ. 2017

ಉತ್ತರ: ಎ

3. ‘ದಿ ಕರ್ನಾಟಕ ಜಿಲ್ಲಾ ಪರಿಷತ್ಸ್, ತಾಲ್ಲೂಕು ಪಂಚಾಯತ್ ಸಮಿತಿಸ್, ಮಂಡಳ ಪಂಚಾಯತ್ಸ್ ಆ್ಯಂಡ್ ನ್ಯಾಯ ಪಂಚಾಯತ್ಸ್ ಆ್ಯಕ್ಟ್ 1983’ ಪ್ರಕಾರ ಎಷ್ಟು ಜನರನ್ನು ಒಬ್ಬ ಜಿಲ್ಲಾ ಪರಿಷತ್ ಸದಸ್ಯ ಪ್ರತಿನಿಧಿಸುತ್ತಿದ್ದ?

ಎ. 35 ಸಾವಿರ

ಬಿ. 15 ಸಾವಿರ

ಸಿ. 50 ಸಾವಿರ

ಡಿ. 25 ಸಾವಿರ

ಉತ್ತರ: ಎ. (ವಿವರಣೆ- ಪ್ರಸ್ತುತ 35ರಿಂದ 40 ಸಾವಿರ ಜನಸಂಖ್ಯೆಗೆ ಒಬ್ಬ ಜಿಲ್ಲಾ ಪಂಚಾಯತ್‌ ಸದಸ್ಯನಿರಲು ಅವಕಾಶವಿದೆ. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಪ್ರತಿ 35 ಸಾವಿರ ಜನರಿಗೆ ಒಬ್ಬ ಸದಸ್ಯ ಇರಲು ಅವಕಾಶವಿದೆ. ಅದೇ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಪ್ರತಿ 20 ಸಾವಿರ ಜನರಿಗೆ, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಪ್ರತಿ 18 ಸಾವಿರ ಜನರಿಗೆ ಒಬ್ಬ ಸದಸ್ಯನಿರಲು ಅವಕಾಶವಿದೆ.)

4. ‘ದಿ ಕರ್ನಾಟಕ ಜಿಲ್ಲಾ ಪರಿಷತ್ಸ್, ತಾಲ್ಲೂಕು ಪಂಚಾಯತ್ ಸಮಿತಿಸ್, ಮಂಡಳ ಪಂಚಾಯತ್ಸ್ ಆ್ಯಂಡ್ ನ್ಯಾಯ ಪಂಚಾಯತ್ಸ್ ಆ್ಯಕ್ಟ್ 1983’ ಪ್ರಕಾರ ಮಹಿಳೆಯರಿಗೆ ಎಷ್ಟು ಸ್ಥಾನಗಳನ್ನು ಮೀಸಲಾಗಿ ಇಟ್ಟಿದ್ದರು?

ಎ) ಶೇ 35

ಬಿ) ಶೇ 33

ಸಿ) ಶೇ. 22

ಡಿ) ಶೇ 25

ಉತ್ತರ: ಡಿ ( ಪ್ರಸ್ತುತ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಾಗಿ ಇಡಲಾಗಿದೆ.)

5. ರಾಜೀವ್ ಗಾಂಧಿಯವರ ಕನಸಿನ ಕೂಸಾದ 73 ಮತ್ತು 74ನೇ ತಿದ್ದುಪಡಿಯು ಭಾರತ ಸಂವಿಧಾನಕ್ಕೆ ಆದ ಬಳಿಕ ಹೊಸ ಶಾಸನವೊಂದನ್ನು ಜಾರಿಗೆ ತರುವ ಮೂಲಕ ಪಂಚಾಯಿತಿ ರಾಜ್ ವ್ಯವಸ್ಥೆಗೆ ನಾಂದಿ ಹಾಡಿದ ಮೊದಲ ರಾಜ್ಯ ಯಾವುದು?

ಎ. ಮಧ್ಯ ಪ್ರದೇಶ

ಬಿ. ಪಶ್ಚಿಮ ಬಂಗಾಳ

ಸಿ. ಕರ್ನಾಟಕ

ಡಿ. ತಮಿಳುನಾಡು

ಉತ್ತರ: ಸಿ

6) ‘ಕರ್ನಾಟಕ ಪಂಚಾಯತ್ ಆ್ಯಕ್ಟ್ 1993’ ರ ಪ್ರಕಾರ ಯಾವೆಲ್ಲಾ ಅಂಶಗಳ ಆಧಾರದ ಮೇಲೆ ಜಿಲ್ಲಾ ಪಂಚಾಯತಿ ಸದಸ್ಯನನ್ನು ಅನರ್ಹಗೊಳಿಸಬಹುದು?

1) ಜಿಲ್ಲಾ ಪಂಚಾಯತಿ ಪರವಾಗಿ ವಕೀಲನಾಗಿ ನೇಮಕಗೊಂಡರೆ ಅಥವಾ ಜಿಲ್ಲಾ ಪಂಚಾಯತಿ ವಿರುದ್ಧ ಕೇಸುಗಳಿಗಾಗಿ ವಕೀಲನಾಗಿ ನೇಮಕವಾದರೆ

2) ಜಿಲ್ಲಾ ಪಂಚಾಯತಿ ಸದಸ್ಯನ ಮನೆಯಲ್ಲಿ ಕಕ್ಕಸ್ಸು (ಸ್ಯಾನಿಟರಿ ಲ್ಯಾಟರಿನ್) ಇಲ್ಲದಿದ್ದರೆ

3) ರಾಜ್ಯ ಅಥವಾ ಕೇಂದ್ರ ಸರಕಾರದ ಲಾಭದಾಯಕ ಹುದ್ದೆಯಲ್ಲಿ ಕುಳಿತರೆ

4)ಸದಸ್ಯನೊಬ್ಬ ವೈದ್ಯ/ವಕೀಲ/ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು ತಮ್ಮ ವೃತ್ತಿಯನ್ನು ಸರಿಯಾಗಿ ನಿರ್ವಹಿಸದೇ ಆತನ ವೃತ್ತಿ ಪರವಾನಿಗೆಯನ್ನು ಸಂಬಂಧಿತ ಪ್ರಾಧಿಕಾರವು ಹಿಂದಕ್ಕೆ ಪಡೆದರೆ

ಉತ್ತರ ಸಂಕೇತಗಳು

ಎ) 3 ಮತ್ತು 4 ಬಳಸಿ ಅನರ್ಹಗೊಳಿಸಬಹುದು.

ಬಿ) 1, 3 ಮತ್ತು 4 ಬಳಸಿ ಅನರ್ಹಗೊಳಿಸಬಹುದು

ಸಿ) 1 ಮತ್ತು 4 ಬಳಸಿ ಅನರ್ಹಗೊಳಿಸಬಹುದು

ಡಿ) 1, 2, 3 ಮತ್ತು 4 ಬಳಸಿ ಅನರ್ಹಗೊಳಿಸಬಹುದು

ಉತ್ತರ: ಡಿ

7) ‘ಕರ್ನಾಟಕ ಪಂಚಾಯತ್ ಆ್ಯಕ್ಟ್ 1993’ರ ಪ್ರಕಾರ ಜಿಲ್ಲಾ ಪಂಚಾಯತಿ ಸದಸ್ಯನಾಗಲು ಇರಬೇಕಾದ ಅರ್ಹತೆಗಳೇನು?

ಎ) ತಾನು ಚುನಾವಣೆಗೆ ಸ್ಪರ್ಧಿಸುವ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು.

ಬಿ) 21 ವರ್ಷ ತುಂಬಿರಬೇಕು.

ಸಿ) ರಾಜ್ಯ ಅಥವಾ ಕೇಂದ್ರ ಸರಕಾರದ ಲಾಭದಾಯಕ ಹುದ್ದೆಯಲ್ಲಿರಬಾರದು.

ಡಿ) ಮೇಲಿನ ಎಲ್ಲವೂ

ಉತ್ತರ: ಡಿ

8) ಈ ಕೆಳಗಿನ ಅಂಶಗಳನ್ನು ಗಮನವಿಟ್ಟು ಓದಿ

1) ಜಿಲ್ಲಾ ಪಂಚಾಯತಿ ಪ್ರಥಮ ಸಭೆ ಆರಂಭವಾದ ದಿನದಿಂದ 5 ವರ್ಷಗಳವರೆಗೆ ಸದಸ್ಯರು ತಮ್ಮ ಅಧಿಕಾರವನ್ನು ಹೊಂದಿರುತ್ತಾರೆ.

2) ಒಬ್ಬನೇ ಸದಸ್ಯ 2 ಕ್ಷೇತ್ರಗಳಲ್ಲಿ ಆಯ್ಕೆಯಾದರೆ ನಿಗದಿತ ಸಮಯದಲ್ಲಿ ತನಗಿಷ್ಟವಾದ ಒಂದು ಕ್ಷೇತ್ರವನ್ನು ಉಳಿಸಿಕೊಂಡು ಮತ್ತೊಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು. ಹಾಗೆ ಮಾಡದಿದ್ದರೆ ಜಿಲ್ಲಾಧಿಕಾರಿ ಅಥವಾ ಸಂಬಂಧಿತ ಅಧಿಕಾರಿ ಲಾಟರಿ ಎತ್ತುವ ಮೂಲಕ ಒಂದು ಕ್ಷೇತ್ರಕ್ಕೆ ಮರು ಚುನಾವಣೆಯಾಗುವಂತೆ ನೋಡಿಕೊಳ್ಳುವರು.

3) ಸತತವಾಗಿ 4 ಜಿಲ್ಲಾ ಪಂಚಾಯತಿ ಸದಸ್ಯರ ಸಭೆಗಳಿಗೆ (ಮೀಟಿಂಗ್‌) ಸದಸ್ಯನೊಬ್ಬ ರಜೆಯನ್ನು ಹಾಕದೇ ಅನುಪಸ್ಥಿತ (ಗೈರು ಹಾಜರಾದರೆ)ನಾದರೆ ಅಂತಹ ಸದಸ್ಯನ ಸದಸ್ಯತ್ವ ರದ್ದಾಗುವುದು.

4) ತಾನು ಷೇರು ಮಾರುಕಟ್ಟೆಯಲ್ಲಿ ಹಾಕಿದ ಬಂಡವಾಳ ನಾಶವಾದರೆ ಜಿಲ್ಲಾ ಪಂಚಾಯತಿ ಸದಸ್ಯನೊಬ್ಬ ರಾಜಿನಾಮೆ ನೀಡಬೇಕಾಗುತ್ತದೆ

ಉತ್ತರ ಸಂಕೇತಗಳು

ಎ) 3 ಮತ್ತು 4 ತಪ್ಪಾಗಿದೆ, ಉಳಿದವು ಸರಿ.

ಬಿ) 1, 2 ಮತ್ತು 3 ಮಾತ್ರ ಸರಿಯಾಗಿವೆ

ಸಿ) 1 ಮತ್ತು 4 ತಪ್ಪು. 2 ಮತ್ತು 3 ಸರಿ.

ಡಿ) 1, 2, 3 ಮತ್ತು 4 ಎಲ್ಲವೂ ಸರಿಯಾಗಿವೆ

ಉತ್ತರ: ಬಿ

9) ಜಿಲ್ಲಾ ಪಂಚಾಯತಿಯು ಈ ಕೆಳಗಿನ ಯಾರನ್ನೆಲ್ಲಾ ಒಳಗೊಂಡಿದೆ (‘ಕರ್ನಾಟಕ ಪಂಚಾಯತ್ ಆ್ಯಕ್ಟ್ 1993’ರ ಪ್ರಕಾರ) ?

ಎ) ಎಲ್ಲಾ ಜಿಲ್ಲಾ ಪಂಚಾಯತಿ ಸದಸ್ಯರು

ಬಿ) ಆಯಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಪಂಚಾಯತಿ ಅಧ್ಯಕ್ಷರು

ಸಿ) ಆಯಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಾಸನ ಸಭೆಯ ಸದಸ್ಯರು(ಶಾಸಕರು)

ಡಿ) ಮೇಲಿನ ಎಲ್ಲರೂ

ಉತ್ತರ: ಡಿ

ಕರ್ನಾಟಕ ಆರ್ಥಿಕತೆ ಕುರಿತಾದ ಬಹು ಆಯ್ಕೆ ಪ್ರಶ್ನೋತ್ತರಗಳು

1.  ಕರ್ನಾಟಕದ ಎಕಾನಾಮಿಕ್ ಸರ್ವೆಯಲ್ಲಿ ದಾಖಲಾದ ಅಂಶಗಳನ್ನು ಆಧರಿಸಿದ ಕೆಳಗಿನ ಹೇಳಿಕೆಗಳನ್ನು ಗಮನಿಸಿ

ಎ. ಕೋವಿಡ್-19ರ ಕಾರಣಕ್ಕಾಗಿ ನಮ್ಮ ರಾಜ್ಯದಲ್ಲಿ ಪ್ರಗತಿ ಕುಂಠಿತವಾಗಿತ್ತು. ಆದರೂ 2020-21ರಲ್ಲಿ ಕೃಷಿ ಕ್ಷೇತ್ರವು ಶೇ 6.4ರಷ್ಟು ಬೆಳವಣಿಗೆ ದಾಖಲಿಸಿತ್ತು. ಆದರೆ ಕೈಗಾರಿಕಾ ಕ್ಷೇತ್ರವು ಶೇ (–) 5.1 ಮತ್ತು ಸೇವಾ ಕ್ಷೇತ್ರವು ಶೇ (-) 3.1 ದಾಖಲಿಸಿತು. ಅಂದರೆ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳು ಋಣಾತ್ಮಕ ಅಭಿವೃದ್ಧಿ ದರವನ್ನು ದಾಖಲಿಸಿದ್ದವು

ಬಿ. ಕರ್ನಾಟಕದಲ್ಲಿ 2020-21ರಲ್ಲಿ ತಲಾ ವರ
ಮಾನ (ಪರ್‌ ಕ್ಯಾಪಿಟಾ ಇನ್‌ಕಮ್) ₹ 2 ಲಕ್ಷ 26 ಸಾವಿರ ಇದೆ, 2019-20ರಕ್ಕೆ ಹೋಲಿಸಿದರೆ (₹ 2 ಲಕ್ಷ  23 ಸಾವಿರ ಇತ್ತು) ತುಸು ಹೆಚ್ಚಾಗಿದೆ.

ಮಾಹಿತಿ: Spardha Bharati UPSC ಯೂಟ್ಯೂಬ್‌ ಚಾನೆಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.