ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೂಪ್-ಸಿ ತಾಂತ್ರಿಕೇತರ ಹುದ್ದೆ: ಬಹು ಆಯ್ಕೆ ಪ್ರಶ್ನೆಗಳು

ಗ್ರಾಮೀಣಾಭಿವೃದ್ಧಿ
Last Updated 29 ಸೆಪ್ಟೆಂಬರ್ 2021, 20:23 IST
ಅಕ್ಷರ ಗಾತ್ರ

ಗ್ರೂಪ್ ಸಿ ವೃಂದದ ತಾಂತ್ರಿಕೇತರ ಹುದ್ದೆಗಳಾದ ಲೇಬರ್ ಇನ್‌ಸ್ಪೆಕ್ಟರ್, ಹಾಸ್ಟೆಲ್ ವಾರ್ಡನ್, ಸಾಂಖ್ಯಿಕ ನಿರೀಕ್ಷರು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕರವಸೂಲಿಗಾರರು ಈ ಮೊದಲಾದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಾಮಾನ್ಯ ಜ್ಞಾನ ವಿಭಾಗದಲ್ಲಿರುವ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್ ಸಂಸ್ಥೆಗಳು ಹಾಗೂ ಗ್ರಾಮೀಣ ಸಹಕಾರ’ ಅಲ್ಲದೇ ‘ಸ್ವಾತಂತ್ರ್ಯಾ ನಂತರ ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆ’ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್ ಸಂಸ್ಥೆಗಳು ಈ ವಿಷಯಕ್ಕೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆಗಳು

1. ಜನವರಿ 1957ರಲ್ಲಿ ಪ್ರಜಾಸತ್ತೆಯ ವಿಕೇಂದ್ರೀಕರಣಕ್ಕೆ ಪೂರಕವಾಗುವಂತೆ ಭಾರತ ಸರ್ಕಾರವು ಒಂದು ಸಮಿತಿಯನ್ನು ಸ್ಥಾಪಿಸಿ ನಂತರದಲ್ಲಿ ವರದಿಯೊಂದನ್ನು ಪಡೆಯಿತು. ಆ ವರದಿಯ ಹೆಸರೇನು?

ಎ. ಅಶೋಕ್‌ ಮೆಹ್ತಾ ವರದಿ

ಬಿ. ಬಲವಂತರಾಯ್ ಮೆಹ್ತಾ ವರದಿ

ಸಿ. ಕೊಂಡಜ್ಜಿ ಬಸಪ್ಪ ವರದಿ

ಡಿ. ಯಾವುದೂ ಅಲ್ಲ

2. 1959ರಲ್ಲಿ ……………………… ಎಂಬಲ್ಲಿ ಜರುಗಿದ ಸ್ಥಳೀಯ ಸ್ವಯಮಾಡಳಿತ ಕೇಂದ್ರೀಯ ಸಮಿತಿಯ ಸಮಾವೇಶವು ಬಲವಂತರಾಯ್ ಮೆಹ್ತಾ ವರದಿಯ ಅನ್ವಯ ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸುವ ಕರ್ತವ್ಯವು ರಾಜ್ಯ ಸರ್ಕಾರಗಳದ್ದೆಂದು ಘೋಷಿಸಿತು.

ಎ. ಬೆಂಗಳೂರು

ಬಿ. ನವದೆಹಲಿ

ಸಿ. ಚೆನೈ

ಡಿ. ಹೈದರಾಬಾದ್

3. ಮೂರು ಹಂತಗಳ (ತ್ರಿ ಟೈಯರ್ ಸಿಸ್ಟಮ್) ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಪ್ರತಿಪಾದಿಸಿದ ಮೊದಲ ವರದಿ ಯಾವುದು?

ಎ. ಅಶೋಕ್‌ ಮೆಹ್ತಾ ವರದಿ

ಬಿ. ಬಲವಂತರಾಯ್ ಮೆಹ್ತಾ ವರದಿ

ಸಿ. ಕೊಂಡಜ್ಜಿ ಬಸಪ್ಪ ವರದಿ

ಡಿ. ಯಾವುದೂ ಅಲ್ಲ

4. ಈ ಕೆಳಗಿನ ಯಾವ ಕಾಯ್ದೆ ಗ್ರಾಮ ಪಂಚಾಯತಿಗಳ ಪುನರುಜ್ಜೀವನಕ್ಕೆ ಅವಕಾಶವನ್ನು ಕಲ್ಪಿಸಿತು?

ಎ. 1919ರ ಮಾಂಟೆಗೋ ಚೆಮ್ಸ್ ಫರ್ಡ್ ಸುಧಾರಣೆ

ಬಿ. 1858ರ ಬ್ರಿಟಿಷ್ ಇಂಡಿಯಾ ಕಾಯ್ದೆ

ಸಿ. 1901ರ ವಿಶೇಷ ಶಾಸನ

ಡಿ. 1909ರ ವಿಶೇಷ ಶಾಸನ

5. ಈ ಕೆಳಗಿನ ಯಾವ ಸಮಿತಿಯ ವರದಿಯು 2 ಟೈಯರ್ ಸಿಸ್ಟಮ್ ಅಥವಾ 2 ಹಂತದ ಪಂಚಾಯತ್‌ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲು ಶಿಫಾರಸು ಮಾಡಿತ್ತು?

ಎ. ಅಶೋಕ್‌ ಮೆಹ್ತಾ ವರದಿ

ಬಿ. ಬಲವಂತರಾಯ್ ಮೆಹ್ತಾ ವರದಿ

ಸಿ. ಕೊಂಡಜ್ಜಿ ಬಸಪ್ಪ ವರದಿ

ಡಿ. ಯಾವುದೂ ಅಲ್ಲ.

6. ಕರ್ನಾಟಕದ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದಂತೆ ವರದಿ ನೀಡಿದ ಸಮಿತಿಯನ್ನು ಹೆಸರಿಸಿ

ಎ. ಹಾರನಹಳ್ಳಿ ರಾಮಸ್ವಾಮಿ ವರದಿ

ಬಿ. ಬಲವಂತರಾಯ್ ಮೆಹ್ತಾ ವರದಿ

ಸಿ. ಕೊಂಡಜ್ಜಿ ಬಸಪ್ಪ ವರದಿ

ಡಿ. ಡಾ. ನಂಜುಂಡಪ್ಪ ವರದಿ

7. ಈ ಕೆಳಗಿನ ಯಾವ ರಾಜಮನೆತನವು ಸ್ಥಳೀಯ ಆಡಳಿತಕ್ಕೆ ಹೆಸರುವಾಸಿ?

ಎ. ಕದಂಬ

ಬಿ. ಗಂಗ

ಸಿ. ರಾಷ್ಟ್ರಕೂಟ

ಡಿ. ಚೋಳ

8. ಮೈಸೂರು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪ್ರಾಯೋಗಿಕವಾಗಿ ಮೈಸೂರು ಮತ್ತು ……………… ನಗರದಲ್ಲಿ 1862ರಲ್ಲಿ ಪುರಸಭೆಗಳನ್ನು ರಚಿಸಲಾಯಿತು.

ಎ. ಚಾಮರಾಜನಗರ

ಬಿ. ಶ್ರೀರಂಗಪಟ್ಟಣ

ಸಿ. ಶಿವಮೊಗ್ಗ

ಡಿ. ಬೆಂಗಳೂರು

ಉತ್ತರ: 1. ಬಿ, 2. ಡಿ, 3. ಬಿ, 4. ಎ, 5. ಎ, 6. ಸಿ, 7. ಡಿ, 8. ಡಿ

ಸ್ವಾತಂತ್ರ್ಯಾ ನಂತರ ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೋತ್ತರಗಳು ಹೀಗಿವೆ:

1. ಸ್ವಾತಂತ್ರ್ಯಾ ನಂತರ ಭೂ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರವು ಈ ಕೆಳಗಿನ ಯಾವೆಲ್ಲಾ ಉದ್ದೇಶಗಳನ್ನು ಹೊಂದಿತ್ತು?

1. ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸುವುದು

2. ಗೇಣಿ ಪದ್ಧತಿಯ ನಿರ್ಮೂಲನೆ

3. ಕೃಷಿ ಕುಟುಂಬಗಳು ಹೊಂದಿರಬಹುದಾದ ಭೂಮಿಯ ಗರಿಷ್ಠಮಿತಿ

4. ಇನಾಮ್‌ದಾರಿ ಪದ್ಧತಿಯನ್ನು ತೆಗೆದುಹಾಕುವುದು.

ಉತ್ತರ ಸಂಕೇತಗಳು:

ಎ. 1, 2 ಮತ್ತು 3 ಮಾತ್ರ ಸರಿ

ಬಿ. 1, 2, 3 ಮತ್ತು 4 ಮಾತ್ರ ಸರಿ

ಸಿ. 1, 2 ಮತ್ತು 4 ಮಾತ್ರ ಸರಿ

ಡಿ. ಮೇಲಿನ ಯಾವುದೂ ಸರಿಯಾಗಿಲ್ಲ

2. ಭೂ ಸುಧಾರಣೆಗೆ ಸಂಬಂಧಿಸಿದಂತೆ ಬಿ.ಡಿ. ಜತ್ತಿ ಸಮಿತಿಯು ಯಾವ ವರ್ಷ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಎ. 1954

ಬಿ. 1959

ಸಿ. 1960

ಡಿ. 1957

3. ಕರ್ನಾಟಕ ಭೂ ಸುಧಾರಣಾ ಕಾನೂನು ಯಾವ ವರ್ಷ ಮೊಟ್ಟಮೊದಲು ಜಾರಿಗೆ ಬಂತು?

ಎ. 1961

ಬಿ. 1958

ಸಿ. 1966

ಡಿ. 1969

4. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ನಮ್ಮ ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲಿ ರೈತುವಾರಿ ಹಿಡುವಳಿ ವ್ಯವಸ್ಥೆಯನ್ನು ನೋಡಬಹುದು. ಅಂದರೆ ಪ್ರತಿ ಭೂ ಮಾಲೀಕನು ಸರ್ಕಾರದೊಂದಿಗೆ ನೇರವಾಗಿ ವ್ಯವಹರಿಸುವ ಪ್ರಕ್ರಿಯೆ.

2. ಭೂ ಆಡಳಿತಕ್ಕೆ ಸಂಬಂಧಿಸಿದಂತೆ ಜಿಲ್ಲೆಯೇ ಪ್ರಮುಖ ಘಟ್ಟವಾಗಿದ್ದು, ಭೂ ಕಂದಾಯ ಮತ್ತು ಹಿಡುವಳಿಯ ಆಡಳಿತಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮುಖ್ಯ ಆಡಳಿತಾಧಿಕಾರಿಯಾಗಿರುತ್ತಾರೆ.

3. ತಾಲ್ಲೂಕು ಕಚೇರಿಗಳಲ್ಲಿ ಗ್ರಾಮಗಳ ಕುರಿತು ಕಾರ್ಯನಿರ್ವಹಿಸುವ ಅಧಿಕಾರಿಯನ್ನು ಕಂದಾಯ ನಿರೀಕ್ಷಕ (ರೆವೆನ್ಯೂ ಇನ್‌ಸ್ಪೆಕ್ಟರ್) ಎಂದು ಕರೆಯುತ್ತಾರೆ. ಇವರ ಆಡಳಿತ ವ್ಯಾಪ್ತಿಯ ಪ್ರದೇಶವನ್ನು ಹೋಬಳಿ ಎಂದು ಕರೆಯುತ್ತಾರೆ.

4. ಭೂ ಆಡಳಿತಕ್ಕೆ ಸಂಬಂಧಿಸಿದಂತೆ ತಾಲ್ಲೂಕುಗಳ ಸಮೂಹವನ್ನು ಉಪವಿಭಾಗಾಧಿಕಾರಿ (ಅಸಿಸ್ಟೆಂಟ್ ಕಮಿಷನರ್) ವ್ಯಾಪ್ತಿಗೆ ಸೇರಿಸಲಾಗಿದೆ.

ಉತ್ತರ ಸಂಕೇತಗಳು:

ಎ. 1, 2 ಮತ್ತು 4 ಮಾತ್ರ ಸರಿ

ಬಿ. 1, 2, ಮತ್ತು 3 ಮಾತ್ರ ಸರಿ

ಸಿ. 2, 3 ಮತ್ತು 4 ಮಾತ್ರ ಸರಿ

ಡಿ. 1 ರಿಂದ 4ರ ತನಕ ಎಲ್ಲವೂ ಸರಿ

5. 750 ಗ್ರಾಮ ಪಂಚಾಯತಿಗಳಲ್ಲಿ ‘ಅಮೃತ ಗ್ರಾಮ ಪಂಚಾಯತಿ ಯೋಜನೆ’ ಜಾರಿಗೆ ತರುವ ಮೂಲಕ ಅವುಗಳ ಸಮಗ್ರ ಅಭಿವೃದ್ಧಿಗೆ ಗುರಿ ಹಾಕಿಕೊಳ್ಳಲಾಗಿದೆ. ಆ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಪ್ರತಿ ಗ್ರಾಮ ಪಂಚಾಯ್ತಿಗೆ ₹3 ಕೋಟಿ ಅನುದಾನ ಬಿಡುಗಡೆ, ಬರುವ ಮಾರ್ಚ್ ಹೊತ್ತಿಗೆ ಇದನ್ನು ಸದುಪಯೋಗಪಡಿಸಿಕೊಂಡರೆ ಹೆಚ್ಚುವರಿ ₹25 ಲಕ್ಷ ನೀಡಿಕೆಗೆ ಅವಕಾಶ.

2. ಶಾಲೆ/ ಅಂಗನವಾಡಿಯ ಮುರಿದ ಗೋಡೆ ದುರಸ್ತಿ, ಆಟದ ಮೈದಾನ ನಿರ್ಮಾಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ಬಳಸಿಕೊಳ್ಳಬಹುದು.

3. ಕೆರೆ, ಕಲ್ಯಾಣಿಗಳ ನಿರ್ಮಾಣಕ್ಕೆ ಅವಕಾಶ, ಉದ್ಯಾನವನಗಳ ನಿರ್ಮಾಣಕ್ಕೆ ಅವಕಾಶ, ತ್ಯಾಜ್ಯ ನೀರಿನ ನಿರ್ವಹಣೆಗೆ ಅವಕಾಶ, ಗ್ರಂಥಾಲಯಗಳ ಡಿಜಿಟಲೀಕರಣಕ್ಕೆ ಅವಕಾಶ,

4. ‘ನನ್ನ ಗ್ರಾಮ ನನ್ನ ಪರಂಪರೆ’ ಘೋಷಣೆಯಡಿ, ಸ್ವಾತಂತ್ರ್ಯದ ಹೋರಾಟಕ್ಕೆ ಕೈ ಜೋಡಿಸಿದ್ದ ಹಿರಿಯರ ಸ್ಮರಣೆಯಲ್ಲದೇ, ಗ್ರಾಮದ ವಿದ್ವಾಂಸರು, ಗ್ರಾಮದಲ್ಲಿ ಆಗಿ ಹೋದ ಹಿರಿಯರ ಸಂಸ್ಮರಣೆ ಮಾಡುವುದು

ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಉತ್ತರ ಸಂಕೇತಗಳು:

ಎ. 2, 3 ಮತ್ತು 4 ಮಾತ್ರ ಸರಿ

ಬಿ. 1 ರಿಂದ 4ರ ತನಕ ಎಲ್ಲವೂ ಸರಿ

ಸಿ. 1, 3 ಮತ್ತು 4 ಮಾತ್ರ ಸರಿ

ಡಿ. 2, ಮತ್ತು 4 ಮಾತ್ರ ಸರಿ

ಉತ್ತರ: 1. ಬಿ, 2. ಡಿ, 3. ಎ, 4. ಡಿ, 5. ಬಿ

ಮಾಹಿತಿ: Spardha Bharati UPSC ಯೂಟ್ಯೂಬ್‌ ಚಾನೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT