ಬೆಂಗಳೂರು: ಭುವನೇಶ್ವರದ ಕೆಐಐಟಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ 2025ರಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಶೇಕಡ 92.5ರಷ್ಟು ವಿದ್ಯಾರ್ಥಿಗಳು ಉದ್ಯೋಗಾವಕಾಶಗಳನ್ನು ಪಡೆದುಕೊಂಡಿದ್ದಾರೆ.

757 ಕಂಪನಿಗಳು ನಡೆಸಿದ ಸಂದರ್ಶನದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 4,621 ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆದುಕೊಂಡಿದ್ದಾರೆ.

ಕೆಐಐಟಿ ಸ್ಕೂಲ್ ಆಫ್ ಟೆಕ್ನಾಲಜಿ (ಕೆಎಸ್ಒಟಿ) ನೇತೃತ್ವದಲ್ಲಿ ಆಯೋಜಿಸಿದ್ದ ಸಂದರ್ಶನದಲ್ಲಿ 451 ಕಂಪನಿಗಳು 3,800 ಉದ್ಯೋಗಾವಕಾಶಗಳನ್ನು ನೀಡಿದ್ದವು. ಇದರಲ್ಲಿ, ವಾರ್ಷಿಕ ತಲಾ ₹8.5 ಲಕ್ಷ ವೇತನ ನೀಡುವ ಭರವಸೆ ನೀಡಿವೆ. 59 ಕಂಪನಿಗಳು ವಾರ್ಷಿಕ ತಲಾ ₹10 ಲಕ್ಷ ವೇತನದ ಪ್ಯಾಕೇಜ್ ನೀಡಿವೆ. ವರ್ಲ್ಡ್ ಲೀಡರ್ ಇನ್ ಆರ್ಟಿಫಿಶಿಯಲ್ ಕಂಪ್ಯೂಟಿಂಗ್ (ಎನ್ವಿಐಡಿಐಎ) ಕಂಪನಿಯು ವಾರ್ಷಿಕ ₹36.28 ಲಕ್ಷ ವೇತನ ನೀಡುವ ಭರವಸೆ ನೀಡಿದೆ.

ಕೆಐಐಟಿ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ (ಕೆಎಸ್ಒಎಂ) 161 ಕಂಪನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ 401 ಎಂಬಿಎ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಬಂದಿದ್ದು, ಕೆಐಐಟಿ ಸ್ಕೂಲ್ ಆಫ್ ರೂರಲ್ ಮ್ಯಾನೇಜ್ಮೆಂಟ್ನಲ್ಲಿ ಶೇ 100ರಷ್ಟು ವಿದ್ಯಾರ್ಥಿಗಳು ಉದ್ಯೋಗದ ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.