ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KPSC- ಪರೀಕ್ಷೆ ಎದುರಿಸಿ, ‘ಮಾದರಿ’ ಅರಿಯಿರಿ: ಕೆಪಿಎಸ್‌ಸಿ ಅಣಕು ಪರೀಕ್ಷೆ

Last Updated 29 ಡಿಸೆಂಬರ್ 2022, 0:00 IST
ಅಕ್ಷರ ಗಾತ್ರ

ಕರ್ನಾಟಕ ಲೋಕಸೇವಾ ಆಯೋಗವು ಸಿಬಿಆರ್‌ಟಿ(Computer Based recruitment Test) ಮಾದರಿ ಯಲ್ಲಿಯೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿದೆ. ಪರೀಕ್ಷೆ ಹೇಗೆ ನಡೆಯುತ್ತದೆ? ಇದರಿಂದ ಆಗುವ ಸಮಸ್ಯೆಗಳೇನು? ಎಂಬುದು ಸೇರಿದಂತೆ ಪರೀಕ್ಷೆಯ ಸಾಧ್ಯಾಸಾಧ್ಯತೆಗಳ ಪರಿಶೀಲನೆಗಾಗಿ ಅಣಕು ಪರೀಕ್ಷೆ (Mock Test) ನಡೆಸಲು ನಿರ್ಧರಿಸಿದೆ.

ಈ ಅಣಕು ಪರೀಕ್ಷೆಯು ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 2023ರ ಜನವರಿ 7ರಂದು ನಡೆಯಲಿದೆ. ಮುಂದೆ ಕೆಪಿಎಸ್‌ಸಿ ನಡೆಸುವ ಸಿಬಿಆರ್‌ಟಿ ಹೇಗಿರಬಹುದು ಎಂಬುದನ್ನು ತಿಳಿಯುವ ಕುತೂಹಲವಿರುವ ಅಭ್ಯರ್ಥಿಗಳು ಅಣಕು ಪರೀಕ್ಷೆಗೆ ಹಾಜರಾಗಬಹುದು. ಇದು ಪ್ರಾಯೋಗಿಕ ಪರೀಕ್ಷೆ. ಹಾಗಾಗಿ, ಸೀಮಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೆಪಿಎಸ್‌ಸಿ ತಿಳಿಸಿದೆ.

ಅರ್ಜಿ ಸಲ್ಲಿಸುವಾಗ ಪರೀಕ್ಷಾ ಕೇಂದ್ರವನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಇಂತಿಷ್ಟೇ ಅಭ್ಯರ್ಥಿಗಳು ಮಾತ್ರ ಭಾಗವಹಿಸಲು ಅವಕಾಶವಿರುವುದರಿಂದ, ಅರ್ಜಿ ಸ್ವೀಕೃತಗೊಂಡ ಬಳಿಕ ಸದರಿ ಕೇಂದ್ರಕ್ಕೆ ಸ್ವೀಕೃತ ಕಾರ್ಯವನ್ನು ಸ್ಥಗಿತಗೊಳಿಸಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆಯ ವಿವರಗಳು

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ (ಡಿಸೆಂಬರ್ 23) ಆರಂಭವಾಗಿದೆ. ಡಿಸೆಂಬರ್ 31, ಅರ್ಜಿ ಸಲ್ಲಿಸಲು ಕೊನೆ ದಿನ. ಅರ್ಜಿಯ ಶುಲ್ಕ ₹100

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಗಳನ್ನು ಆನ್‌ಲೈನ್(ಅರ್ಜಿ ಸಲ್ಲಿಕೆಗೆ ಲಿಂಕ್– https://kpsc.kar.nic.in)ಮೂಲಕ ಸಲ್ಲಿಸಬೇಕು. ಅರ್ಜಿ ಭರ್ತಿ ಮಾಡಿ, ಭಾವಚಿತ್ರ ಮತ್ತು ಸಹಿಯನ್ನು ಮಾತ್ರ ಅಪ್ಲೋಡ್ ಮಾಡಬೇಕು. ಒಟ್ಟು ಐದು ಹಂತಗಳಲ್ಲಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ನಡೆಯಲಿದೆ. ಅದು ಹೀಗಿದೆ;

lಹೆಸರು, ಜನ್ಮದಿನಾಂಕ, ಮೀಸಲಾತಿಗಳು, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಭರ್ತಿ ಮಾಡಬೇಕು.

lತಂದೆ, ತಾಯಿ, ಗಂಡ/ಹೆಂಡತಿ ಹೆಸರು, ವಿಳಾಸ ಹಾಗೂ ಪರೀಕ್ಷಾ ಕೇಂದ್ರದ ಹೆಸರು ನಮೂದಿಸಬೇಕು.

lವಿದ್ಯಾರ್ಹತೆಯ ಕುರಿತು ಮಾಹಿತಿಯನ್ನು ಭರ್ತಿ ಮಾಡಬೇಕು.

lಭಾವಚಿತ್ರ ಮತ್ತು ಸಹಿ ಅಪ್ಲೋಡ್ ಮಾಡಬೇಕು,

lಅರ್ಜಿ ಶುಲ್ಕ ಪಾವತಿ

ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ₹100 ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲಿ ಎಂಬ ಉದ್ದೇಶದಿಂದ ಶುಲ್ಕ ನಿಗದಿಪಡಿಸಲಾಗಿದೆ. ಹಾಗೆಯೇ, ಯಾವ ವರ್ಗಕ್ಕೂ ಶುಲ್ಕದಲ್ಲಿ ವಿನಾಯಿತಿ ನೀಡಿಲ್ಲ. ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ ಅಥವಾ ಅದನ್ನು ಆಯೋಗವು ನಡೆಸುವ ಇತರೆ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಶುಲ್ಕ ಸಂದಾಯ ಮಾಡದಿದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಮತ್ತು ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ.

ವಿದ್ಯಾರ್ಹತೆ: ಕನಿಷ್ಠ ದ್ವಿತೀಯ ಪಿಯುಸಿ/ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರು ಈ ಅಣಕು ಪರೀಕ್ಷೆ ಬರೆಯಬಹುದು.

ವಯೋಮಿತಿ: ಕನಿಷ್ಠ 18 ವರ್ಷಗಳು ಗರಿಷ್ಠ 40 ವರ್ಷಗಳು.

ಪರೀಕ್ಷೆ ಹೇಗಿರುತ್ತದೆ?

ಸಿಬಿಆರ್‌ಟಿ–ಇದು ಆನ್‌ಲೈನ್ ಪರೀಕ್ಷೆ. ಎರಡು ಗಂಟೆಗಳ ಅವಧಿಯ ಪರೀಕ್ಷೆ. ಕನ್ನಡ ಮತ್ತು ಆಂಗ್ಲಭಾಷೆ ಎರಡರಲ್ಲೂ ಪ್ರಶ್ನೆ ಪತ್ರಿಕೆಗಳಿರುತ್ತವೆ. ಪ್ರಶ್ನೆಗಳು ವಸ್ತುನಿಷ್ಠ (Objective type or multiple choice) ಮಾದರಿಯಲ್ಲಿರುತ್ತವೆ.

ಪ್ರತಿ ಪ್ರಶ್ನೆ ಪತ್ರಿಕೆಯು 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಪ್ರತಿ ಪ್ರಶ್ನೆಗೆ 2 (ಎರಡು) ಅಂಕ. ಪ್ರತಿ ಪ್ರಶ್ನೆಗೆ 4 (ನಾಲ್ಕು) ಆಯ್ಕೆಗಳಿರುತ್ತವೆ. ಅಭ್ಯರ್ಥಿಯು ತಪ್ಪು ಉತ್ತರ ನೀಡಿದಲ್ಲಿ ಆ ಪ್ರಶ್ನೆಗೆ ನಿಗದಿಪಡಿಸಲಾದ ಅಂಕಗಳಲ್ಲಿ 1/4 ರಷ್ಟು ಅಂಕಗಳನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಕಳೆಯಲಾಗುತ್ತದೆ. ಪ್ರಶ್ನೆಗೆ ಉತ್ತರಿಸದೆ ಖಾಲಿಬಿಟ್ಟಲ್ಲಿ/ ಉತ್ತರ ನೀಡದಿದ್ದಲ್ಲಿ ಆ ಪ್ರಶ್ನೆಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ.

ಸಿಬಿಆರ್‌ಟಿ – ಅಣಕು ಪರೀಕ್ಷೆಯಾಗಿದ್ದು, ಇದೊಂದು ಪ್ರಾಯೋಗಿಕ ಪ್ರಯತ್ನ. ಈ ಹಿನ್ನೆಲೆಯಲ್ಲಿ, ಪರೀಕ್ಷೆ ಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಆಯೋಗ ನಡೆಸುವ ಯಾವುದೇ ಪರೀಕ್ಷೆ/ ನೇಮಕಾತಿಗಳಲ್ಲಿ, ಪರಿಗಣಿಸಲಾಗುವುದಿಲ್ಲ ಹಾಗೂ ಸದರಿ ಪರೀಕ್ಷೆಯ ಫಲಿತಾಂಶಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ.

ಮಾಕ್‌ಟೆಸ್ಟ್‌ ಅಧಿಸೂಚನೆ ಮತ್ತು ವಿವರಕ್ಕಾಗಿ ಈ ಲಿಂಕ್‌ ನೋಡಿ:https://kpsc.kar.nic.in/MOCK%20EXAM%20NOTIFICATION.pdf

ಪರೀಕ್ಷೆಯ ಪಠ್ಯಕ್ರಮ

ಪತ್ರಿಕೆ 1 : ಜನರಲ್ ಸ್ಟಡೀಸ್‌(ಸಾಮಾನ್ಯ ಅಧ್ಯಯನ)

lಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ‘ಸಾಮಾನ್ಯ ಜ್ಞಾನ’ ವಿಷಯ (General Knowledge of Topics relating to Current Events)

lಸಾಮಾನ್ಯ ವಿಜ್ಞಾನ (General Science)

lಭೂಗೋಳ(Geography)

lಸಮಾಜ ವಿಜ್ಞಾನ(Social Sciences)

lಭಾರತೀಯ ಸಮಾಜ ಮತ್ತು ಅದರ ಚಲನಶೀಲತೆ(Indian Society and its Dynamics).

lಭಾರತೀಯ ಇತಿಹಾಸ(Indian History)

lಭಾರತೀಯ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ(Indian Constitution and Public Administration)

lಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯ(10ನೇ ತರಗತಿ ಹಂತ) (Practical Knowledge and Mental Ability (SSLC Level)).

lಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ (Social and Cultural History of Karnataka)

lಸ್ವಾತಂತ್ರ್ಯಾ ನಂತರ ಕರ್ನಾಟಕದಲ್ಲಿ ನಡೆದ ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆ (Land Reforms and Social Changes in Karnataka after Independence).

lಕರ್ನಾಟಕದ ಆರ್ಥಿಕತೆ; ಶಕ್ತಿ ಮತ್ತು ದೌರ್ಬಲ್ಯ; ಪ್ರಸ್ತುತದ ಪರಿಸ್ಥಿತಿ (Karnataka's Economy; Its Strength and Weakness; Present Status)

lಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಘಗಳು(Rural Development, Panchayat Raj Institutions and Rural Co-operatives)

lಕರ್ನಾಟಕದಲ್ಲಿ ಪರಿಣಾಮಕಾರಿ ಆಡಳಿತ ಅನುಷ್ಠಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ (Role of Science and Technology for effective administration of Karnataka)

lಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ಪ್ರಕರಣಗಳು(Environmental Problems and the Development Issues of Karnataka)

→(ಲೇಖಕರು : ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ→ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT