ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 3 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಭಾಗ– 35

466) ಕರ್ಕಾಟಕ ಸಂಕ್ರಾಂತಿ ವೃತ್ತವು ಈ ರಾಜ್ಯದ ಮೂಲಕ ಹಾದು ಹೋಗುತ್ತದೆ

ಎ) ಬಿಹಾರ್

ಬಿ) ಮಹಾರಾಷ್ಟ್ರ

ಸಿ) ಅಸ್ಸಾಂ

ಡಿ) ಮಿಜೋರಾಂ

467) ಕಂಪ್ಯೂಟರ್‌ನ ಮುಖ್ಯ ಸಂಸ್ಕಾರಕ

ಎ) ಮೌಸ್

ಬಿ) ಮದರ್ ಬೋರ್ಡ್‌

ಸಿ) ಮಾನಿಟರ್

ಡಿ) ಸಿ.ಪಿ.ಯು

468) ಈ ಕೆಳಗಿನವುಗಳಲ್ಲಿ ಯಾವುದು ಇನ್‌ಪುಟ್ ಸಾಧನವಾಗಿದೆ?

ಎ) ಸ್ಪೀಕರ್‌

ಬಿ) ಮೌಸ್

ಸಿ) ಮಾನಿಟರ್‌

ಡಿ) ಪ್ರಿಂಟರ್

469) ‘ದಂಗಲ್’ ಹಿಂದಿ ಚಿತ್ರವನ್ನು ಯಾವ ಕ್ರೀಡಾಪಟುವಿನ ಜೀವನದ ಮೇಲೆ ನಿರ್ಮಿಸಲಾಗಿದೆ?

ಎ) ಸಾಕ್ಷಿ ಮಲಿಕ್

ಬಿ) ಕೃಷ್ಣಾ ಪೂನಿಯಾ

ಸಿ) ಜೆ.ಸಿ.ಮೇರಿಕೋಮ್

ಡಿ) ಗೀತಾ ಪೋಗಟ್

470) ಅಮಾನವೀಯ ‘ನಿರ್ಭಯಾ ಪ್ರಕರಣ’ ಎಲ್ಲಿ ನಡೆಯಿತು?

ಎ) ಬೆಂಗಳೂರು

ಬಿ) ದೆಹಲಿ

ಸಿ) ಮುಂಬೈ

ಡಿ) ಕೋಲ್ಕತ್ತ

471) ಕೋಲ್ಕತ್ತ ನಗರ ಯಾವ ನದಿಯ ದಂಡೆ ಮೇಲಿದೆ?

ಎ) ಹೂಗ್ಲಿ

ಬಿ) ಬ್ರಹ್ಮಪುತ್ರ

ಸಿ) ನರ್ಮದಾ

ಡಿ) ಸಟ್ಲೆಜ್

472) ಶಾತವಾಹನರ ರಾಜಧಾನಿ

ಎ) ಪ್ರತಿಷ್ಠಾನ

ಬಿ) ಪಾಟಲೀಪುತ್ರ

ಸಿ) ಬನವಾಸಿ

ಡಿ) ಬಾದಾಮಿ

473) ಭಾರತದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ

ಎ) ಕರ್ನಾಟಕ

ಬಿ) ಕೇರಳ

ಸಿ) ಒಡಿಶಾ

ಡಿ) ಅಸ್ಸಾಂ

474) ವಿಶ್ವದಲ್ಲೇ ಅತೀ ಹೆಚ್ಚು ಹತ್ತಿ ಬೆಳೆಯುವ ದೇಶ

ಎ) ಚೀನಾ

ಬಿ) ಅಮೆರಿಕ

ಸಿ) ಬ್ರೆಜಿಲ್

ಡಿ) ಭಾರತ

475) ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತಿದೆ?

ಎ) ಏಪ್ರಿಲ್ 22

ಬಿ) ಫೆಬ್ರುವರಿ 28

ಸಿ) ಜೂನ್ 5

ಡಿ) ಸೆಪ್ಟೆಂಬರ್ 12

476) ಭಾರತದ ಯಾವ ಮಹಿಳಾ ಕ್ರೀಡಾಪಟು ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಪಡೆದ ಖ್ಯಾತಿ ಹೊಂದಿದ್ದಾರೆ?

ಎ) ಸಾನಿಯಾ ಮಿರ್ಜಾ

ಬಿ) ಪಿ.ಟಿ.ಉಷಾ

ಸಿ) ಸೈನಾ ನೆಹ್ವಾಲ್‌

ಡಿ) ಪಿ.ವಿ.ಸಿಂಧು

477) ‘ಮಾವಿನ ಹಣ್ಣು’ ಹಾಗೂ ‘ಕ್ಯಾರೆಟ್’ ಈ ಕೆಳಗಿನ ಯಾವ ಅಂಶಗಳನ್ನು ಹೆಚ್ಚಾಗಿ ಹೊಂದಿವೆ?

ಎ) ವಿಟಮಿನ್ ಸಿ

ಬಿ) ವಿಟಮಿನ್ ಎ

ಸಿ) ಕ್ಯಾಲ್ಸಿಯಂ

ಡಿ) ಕಬ್ಬಿಣದ ಅಂಶ

478) ವಾತಾವರಣದ ಮೇಲ್ಭಾಗದಲ್ಲಿರುವ ಓಜೋನ್ ಪದರವು ನಮ್ಮನ್ನು ರಕ್ಷಿಸುವುದು ಯಾವ ಕಿರಣಗಳಿಂದ?

ಎ) ಇನ್ಫ್ರಾರೆಡ್ ಕಿರಣ

ಬಿ) ಅಲ್ಟ್ರಾವೈಲೆಟ್ ಕಿರಣ

ಸಿ) ಕಾಸ್ಮಿಕ್ ಕಿರಣ

ಡಿ) ಅಲ್ಟ್ರಾಸೋನಿಕ್ ಕಿರಣ

479) ಈ ಕೆಳಗಿನವುಗಳಲ್ಲಿ ಯಾವುದರ ಹೊರಸೂಸುವಿಕೆಯು ಜಾಗತಿಕ ತಾಪಮಾನ ಹೆಚ್ಚಲು ಮುಖ್ಯ ಕಾರಣವೆಂದು ಹೇಳಲಾಗುತ್ತದೆ?

ಎ) ಸಿ.ಎಫ್.ಸಿ.ಗಳು

ಬಿ) ಜಲಜನಕ

ಸಿ) ಸಾರಜನಕ

ಡಿ) ಅಮೋನಿಯಂ

480) ಮಾನವ ಶರೀರದ ಪ್ರತಿ ಜೀವಕೋಶಕ್ಕೂ ಆಮ್ಲಜನಕವನ್ನು ಸಾಗಿಸಿ, ತಲುಪಿಸುವುದು

ಎ) ಕೆಂಪು ರಕ್ತಕಣಗಳು

ಬಿ) ಬಿಳಿ ರಕ್ತಕಣಗಳು

ಸಿ) ಹಾರ್ಮೋನುಗಳು

ಡಿ) ಕಿಣ್ವಗಳು

ಭಾಗ 34ರ ಉತ್ತರ: 451. ಡಿ, 452. ಬಿ, 453. ಡಿ, 454. ಸಿ, 455. ಎ,456. ಎ, 457. ಬಿ, 458. ಬಿ, 459. ಎ, 460. ಬಿ, 461. ಬಿ, 462. ಬಿ, 463. ಸಿ, 464. ಬಿ, 465. ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT