ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 28 ಜುಲೈ 2021, 19:45 IST
ಅಕ್ಷರ ಗಾತ್ರ

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಭಾಗ– 32

426.ಇವುಗಳಲ್ಲಿ ಯಾವುದು ಪಳೆಯುಳಿಕೆ ಇಂಧನವಲ್ಲ?

ಎ)ಪೆಟ್ರೋಲಿಯಂ

ಬಿ)ನೈಸರ್ಗಿಕ ಅನಿಲ

ಸಿ)ಎಲ್‌ಪಿಜಿ

ಡಿ)ಕಲ್ಲಿದ್ದಲು

427.ಸಿಗರೇಟ್ ಲೈಟರ್‌ನಲ್ಲಿ ಬಳಸುವ ಅನಿಲ ಯಾವುದು?

ಎ)ಬ್ಯೂಟೇನ್

ಬಿ) ಪ್ರೊಪೇನ್

ಸಿ)ಮಿಥೇನ್

ಡಿ)ಈಥೇನ್

428.ಕರ್ನಾಟಕದ ಕುದುರೆಮುಖವು ಯಾವುದಕ್ಕೆ ಪ್ರಸಿದ್ಧವಾಗಿದೆ?

ಎ)ತಾಮ್ರದ ಅದಿರು

ಬಿ)ಕಬ್ಬಿಣದ ಅದಿರು

ಸಿ)ಅಲ್ಯೂಮಿನಿಯಂ ಅದಿರು

ಡಿ)ಮೇಲಿನ ಯಾವುದೂ ಅಲ್ಲ

429. ‘ಹಸಿರು ಕರೆನ್ಸಿ’ ಎಂದು ಕರೆಯಲ್ಪಡುವುದು ಯಾವುದು?

ಎ)ಬಂಗಾರ

ಬಿ)ಟೀ

ಸಿ)ಕಾಫಿ

ಡಿ)ಭತ್ತ

430.ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ

ಎ) ಜೆಮ್‌ಶೆಡ್‌ಪುರ (ಜಾರ್ಖಂಡ್)

ಬಿ)ಬುರ್ನಾಪುರ(ಪಶ್ಚಿಮ ಬಂಗಾಳ)

ಸಿ)ರೂರ್ಕೆಲಾ(ಒಡಿಶಾ)

ಡಿ)ಭಿಲಾಯಿ(ಛತ್ತೀಸ್‌ಗಡ)

431.ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ?

ಎ)ಕೋಲ್ಕತ್ತಾ

ಬಿ)ದೆಹಲಿ

ಸಿ)ಮುಂಬೈ

ಡಿ)ದಾವಣಗೆರೆ

432.ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು?

ಎ)ಸಿರಸ್ ಮೋಡಗಳು

ಬಿ)ಸ್ಟ್ರಾಟಸ್ ಮೋಡಗಳು

ಸಿ)ಕ್ಯುಮುಲಸ್ ಮೋಡಗಳು

ಡಿ)ನಿಂಬೋ ಸ್ಟ್ರಾಟಸ್ ಮೋಡಗಳು

433.ದೇಹದ ಯಾವ ಅಂಗ ಇನ್ಸುಲಿನ್ ಅನ್ನು ಸ್ರವಿಸುತ್ತದೆ?

ಎ)ಯಕೃತ್ತು

ಬಿ)ಮೂತ್ರಪಿಂಡ

ಸಿ)ಹೊಟ್ಟೆ

ಡಿ)ಮೇದೋಜೀರಕ ಗ್ರಂಥಿ

434. 43ವಿದ್ಯಾರ್ಥಿಗಳಿರುವ ತರಗತಿಯಲ್ಲಿ ವಿಜಯ್ ಎಂಬ ವಿದ್ಯಾರ್ಥಿ14ನೇ ಶ್ರೇಣಿ ಪಡೆದರೆ,ಕೆಳಹಂತದಿಂದ ಆತನ ಶ್ರೇಣಿ ಯಾವುದು?

ಎ) 30 ಬಿ) 28

ಸಿ) 29 ಡಿ) 31

435.ಈ ಕೆಳಗಿನವುಗಳಲ್ಲಿ ಯಾವ ಚಿತ್ರ
₹ 2,000 ನೋಟಿನಲ್ಲಿ ಕಂಡುಬರುತ್ತದೆ?

ಎ)ಕೆಂಪುಕೋಟೆ

ಬಿ)ತಾಜ್‌ಮಹಲ್

ಸಿ)ಮಂಗಳಯಾನ

ಡಿ)ಚಂದ್ರಯಾನ

436.‌ಮಹಾತ್ಮ ಗಾಂಧೀಜಿಯವರು ದಂಡಿಯಾತ್ರೆಯನ್ನು ಪ್ರಾರಂಭಿಸಿದ ವರ್ಷ

ಎ) 1922

ಬಿ) 1924

ಸಿ) 1928

ಡಿ) 1930

437 ರಾಜಾ ತೋಡರಮಲ್ಲ ಯಾವ ರಾಜನ ಆಸ್ಥಾನದಲ್ಲಿ ಕಂದಾಯ ಮಂತ್ರಿಯಾಗಿದ್ದನು?

ಎ)ಔರಂಗಜೇಬ್

ಬಿ)ಶಹಜಹಾನ್

ಸಿ)ಅಕ್ಬರ್

ಡಿ)ಜಹಾಂಗೀರ್

438. ‘ಪ್ಲಾಸಿ ಕದನ’ ಯಾವ ವರ್ಷದಲ್ಲಿ ನಡೆಯಿತು?

ಎ) 1745

ಬಿ) 1749

ಸಿ) 1758

ಡಿ) 1757

439. ‘ಭಾರತದ ನಾಗರಿಕ ಸೇವೆಯ ಪಿತಾಮಹ’ ಎಂದು ಯಾರನ್ನು ಕರೆಯುತ್ತಾರೆ?

ಎ)ಲಾರ್ಡ್ ವೆಲ್ಲೆಸ್ಲಿ

ಬಿ)ಲಾರ್ಡ್ ಕಾರ್ನ್‌ ವಾಲಿಸ್

ಸಿ)ಲಾರ್ಡ್ ವಿಲಿಯಂ ಬೆಂಟಿಂಕ್

ಡಿ)ಲಾರ್ಡ್ ಕ್ಯಾನಿಂಗ್

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT