ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೇಮಕಾತಿ: ಆರ್‌ಆರ್‌ಬಿ ಮುಖ್ಯ ಪರೀಕ್ಷೆ ಮಾರ್ಗದರ್ಶಿ

Last Updated 22 ಜೂನ್ 2022, 19:30 IST
ಅಕ್ಷರ ಗಾತ್ರ

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌(ಆರ್‌ಆರ್‌ಬಿ) ನೇಮಕಾತಿಗಾಗಿ ನಡೆಯುವ ಮುಖ್ಯಪರೀಕ್ಷೆಯ ವಿಷಯಗಳು, ಅಂಕಗಳು ಮತ್ತು ಪಠ್ಯಕ್ರಮ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಗ್ರಾಮೀಣ ಬ್ಯಾಂಕ್‌ನ ಆಫೀಸರ್‌ ಸ್ಕೇಲ್‌1 ಹುದ್ದೆಗಾಗಿ ನಡೆಸುವ ಮುಖ್ಯ ಪರೀಕ್ಷೆಯಲ್ಲಿ200 ಅಂಕಗಳಿಗಾಗಿ 200 ಪ್ರಶ್ನೆಗಳು ಇರುತ್ತವೆ. ರೀಸನಿಂಗ್ ವಿಷಯದಲ್ಲಿ 50 ಅಂಕಗಳಿಗಾಗಿ 40 ಪ್ರಶ್ನೆಗಳು, ನ್ಯೂಮರಿಕಲ್ ಎಬಿಲಿಟಿ – 40 ಅಂಕಗಳಿಗೆ 40 ಪ್ರಶ್ನೆಗಳು, ಜನರಲ್ ಅವೇರ್‌ನೆಸ್‌ನ 40 ಅಂಕಗಳ 40 ಪ್ರಶ್ನೆಗಳು, ಇಂಗ್ಲಿಷ್‌/ಹಿಂದಿ ಭಾಷೆ ವಿಷಯದಲ್ಲಿ 40 ಅಂಕಗಳ 40 ಪ್ರಶ್ನೆಗಳಿರುತ್ತವೆ. ಜೊತೆಗೆ, ಕಂಪ್ಯೂಟರ್ ಜ್ಞಾನ ಪತ್ರಿಕೆಯ 20 ಅಂಕಗಳ 40 ಪ್ರಶ್ನೆಗಳಿರುತ್ತವೆ.

ಆಫಿಸರ್ ಸ್ಕೇಲ್ 2 ಮತ್ತು ಸ್ಕೇಲ್ 3 ಹುದ್ದೆಗಳಿಗಾಗಿ ನಡೆಯುವ ಮುಖ್ಯ ಪರೀಕ್ಷೆಯಲ್ಲಿ 200 ಅಂಕಗಳಿಗಾಗಿ 200 ಪ್ರಶ್ನೆಗಳು ಇರುತ್ತವೆ. ಸ್ಕೇಲ್ 1ರ ಪಠ್ಯಕ್ರಮದಲ್ಲಿರುವ ರೀಸನಿಂಗ್, ಭಾಷಾ ಪತ್ರಿಕೆ ಹಾಗೂ ಕಂಪ್ಯೂಟರ್‌ ಜ್ಞಾನದ ಪತ್ರಿಕೆಗಳ ಜೊತೆಗೆ, ಗುಣಾತ್ಮಕ ಪರಿಮಾಣ ಮತ್ತು ಮಾಹಿತಿ ವ್ಯಾಖ್ಯಾನ(Quantitative Aptitude and Data Interpretation) ವಿಷಯದ 50 ಅಂಕಗಳ 40 ಪ್ರಶ್ನೆಗಳು, ಹಣಕಾಸು ಅರಿವಿಗೆ ಸಂಬಂಧಿಸಿದಂತೆ 40 ಅಂಕಗಳ 40 ಪ್ರಶ್ನೆಗಳಿರುತ್ತವೆ. ಹಾಗೆಯೇ ನ್ಯೂಮರಿಕಲ್ ಎಬಿಲಿಟಿಯಲ್ಲಿ ಡೇಟಾ ಇಂಟರ್‌ಪ್ರಿಟೇಷನ್‌ಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ಆಫಿಸರ್ ಸ್ಕೇಲ್ 2 ಸ್ಪೆಷಲಿಸ್ಟ್ ಕೇಡರ್ ಮುಖ್ಯ ಪರೀಕ್ಷೆಯಲ್ಲಿ 240 ಅಂಕಗಳಿಗಾಗಿ 200 ಪ್ರಶ್ನೆಗಳು ಇರುತ್ತವೆ. ಸ್ಕೇಲ್‌2 ಮತ್ತು 3ನಲ್ಲಿರುವ ವಿಷಯಗಳೇ ಇರುತ್ತವೆ. ಅದರ ಜೊತೆಗೆ ವೃತ್ತಿಪರ ಜ್ಞಾನ(ಪ್ರೊಪೆಷನಲ್ ನಾಲ್ಡೆಡ್ಜ್) ಎಂಬ ವಿಷಯದ 40 ಅಂಕಗಳ 40 ಪ್ರಶ್ನೆಗಳನ್ನು ಸೇರಿಸಿರುತ್ತಾರೆ.

ಪಠ್ಯ ಕ್ರಮ

ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (ನ್ಯೂಮರಿಕಲ್ ಎಬಿಲಿಟಿ) ಪಠ್ಯಕ್ರಮದಲ್ಲಿ ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮವೇ ಇರುತ್ತದೆ. ಕಳೆದ ವಾರದ ಸಂಚಿಕೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಉಳಿದಂತೆ ಭಾಷೆ, ಕಂಪ್ಯೂಟರ್‌ ಜ್ಞಾನ, ಜನರಲ್ ಅವೇರ್‌ನೆಸ್‌, ಫೈನಾನ್ಸ್ ಅವೇರ್‌ನೆಸ್‌ ವಿಷಯಗಳ ಪ್ರಶ್ನೆಗಳಿರುತ್ತವೆ.

ಇಂಗ್ಲಿಷ್ ಭಾಷೆ

ಕಾಂಪ್ರೆಹೆನ್ಷನ್‌ ಇಂಗ್ಲಿಷ್‌, ವಾಖ್ಯಗಳನ್ನು ಸರಿಯಾಗಿ ಜೋಡಿಸುವುದು (Rearran- gement of Sentences), ತಪ್ಪುಗಳ ಪತ್ತೆ(Error Detection), ಪದಪುಂಜ (Idioms), ವಿರುದ್ಧಾರ್ಥಕ ಪದಗಳು (Antonyms), ಬಿಟ್ಟ ಸ್ಥಳ ತುಂಬಿ ( Fill in the blanks), ಅದಲು ಬದಲು ಪದಗಳು (Jumbled Words), ನುಡಿಗಟ್ಟು (Phrase Substitution), ಸಮಾನಾರ್ಥಕ ಪದಗಳು (Synonyms)

ಕಂಪ್ಯೂಟರ್ ಜ್ಞಾನ

ಕಂಪ್ಯೂಟರ್ ಬೇಸಿಕ್, ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಮೂಲ ಅಂಶಗಳು, ಕಂಪ್ಯೂಟರ್ ಸಂಕ್ಷೇಪಣೆಗಳು(Computer Abbrevations),ನೆಟ್‌ವರ್ಕ್‌, ಎಂಎಸ್‌ ಆಫೀಸ್, ಡೇಟಾ ಬೇಸ್, ಕಂಪ್ಯೂಟರ್ ಇತಿಹಾಸ, ಕಂಪ್ಯೂಟರ್ ಲ್ಯಾಂಗ್ವೇಜ್, ಇನ್‌ಪುಟ್ ಮತ್ತು ಔಟ್‌ಪುಟ್ ಡಿವೈಸ್

ಜನರಲ್ ಅವೇರ್‌ನೆಸ್

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳು(India and International Current Affairs) ಬ್ಯಾಂಕಿಂಗ್ ಕುರಿತು ಅರಿವು (Banking Awareness), ದೇಶಗಳು ಮತ್ತು ಕರೆನ್ಸಿಗಳು(Countries and Currencies), ದೇಶಗಳು ಮತ್ತು ನಾಣ್ಯಗಳು(Countries and Coins), ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿಧಾಮ (National Parks and Wildlife Sanctuaries), ಬ್ಯಾಂಕಿಂಗ್‌ ನೀತಿ ನಿಯಮಗಳು ಮತ್ತು ಸಂಕ್ಷೇಪಣೆಗಳು(Banking Terms and Abbreviations), ಬ್ಯಾಂಕಿಂಗ್ ಇತಿಹಾಸ,ಭಾರತೀಯ ರಿಸರ್ವ್ ಬ್ಯಾಂಕ್, ಕ್ರೀಡೆ, ಹಣಕಾಸು, ಪುಸ್ತಕ ಮತ್ತು ಲೇಖಕರು, ಕೃಷಿ, ಆರ್ಥಿಕ ನೀತಿಗಳು, ಆಯವ್ಯಯ, ಸರ್ಕಾರದ ಯೋಜನೆಗಳು, ಸರ್ಕಾದ ನೀತಿಗಳು, ಸರ್ಕಾರಿ ನೀತಿಗಳು (ಉದಾ:- ಶಿಕ್ಷಣ ನೀತಿ, ಕೃಷಿ ನೀತಿ, ಯುವ ನೀತಿ ಇತ್ಯಾದಿ)

ಫೈನಾನ್ಸ್‌ ಅವೇರ್‌ನೆಸ್‌

ವಿಶ್ವ ಹಣಕಾಸು ನೀತಿಯ ಕುರಿತು ಇತ್ತೀಚೆಗೆ ಸುದ್ದಿಯಲ್ಲಿ ಪ್ರಚಲಿತ ಘಟನೆಗಳು ಹಾಗೂ ಹಣಕಾಸು ನೀತಿಗಳು, ಆಯ–ವ್ಯಯ ಮತ್ತು ಆರ್ಥಿಕ ಸಮೀಕ್ಷೆ(Budget and Economic Survey), ಬ್ಯಾಂಕಿಂಗ್ ಮತ್ತು ಭಾರತದಲ್ಲಿ ಬ್ಯಾಂಕಿಂಗ್ ಸುಧಾರಣೆ ಕುರಿತ ಅವಲೋಕನ (Overview of Banking and Banking Reforms in India), ಬ್ಯಾಂಕ್ ಅಕೌಂಟ್ ಮತ್ತು ವಿಶೇಷ ವ್ಯಕ್ತಿಗಳು(Bank Accounts and Special Individuals), ಸಾಂಸ್ಥಿಕ ಠೇವಣಿ ಮತ್ತು ಸಾಲ (Organizations Deposits Credit), ಅನುತ್ಪಾದಕ ಆಸ್ತಿ(Non Performing Assets), ರಿಸ್ಕ್ ಮ್ಯಾನೇಜ್‌ಮೆಂಟ್‌.

(ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾಕೇಂದ್ರ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT