ಗುರುವಾರ , ಮೇ 19, 2022
22 °C

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಗ– 4

41. ಕರ್ನಾಟಕದ ‘ಸೈಕ್ಲಿಂಗ್-ಕ್ಯಾಪಿಟಲ್’ ಎಂದೇ ಹೆಸರಾದ ಊರು

ಎ) ಕಲಬುರ್ಗಿ

ಬಿ) ಬೀದರ್

ಸಿ) ವಿಜಯಪುರ

ಡಿ) ಹಾಸನ

42. ಈ ಕೆಳಗಿನವುಗಳಲ್ಲಿ ಅತ್ಯಂತ ನೀಳವಾದ (ಉದ್ದದ) ತರಂಗ ಯಾವುದು?

ಎ) ರೇಡಿಯೊ ತರಂಗ

ಬಿ) ಎಕ್ಸ್-ರೇ

ಸಿ) ಬೆಳಕು ತರಂಗ

ಡಿ) ಧ್ವನಿತರಂಗ

43. ಕೃಷ್ಣದೇವರಾಯನ ಕೃತಿ ‘ಅಮುಕ್ತಮಾಲ್ಯದ’ ಏನನ್ನು ವಿವರಿಸುತ್ತದೆ?

ಎ) ಪ್ರೇಮಕಥೆ

ಬಿ) ಧಾರ್ಮಿಕ ವಿಚಾರಗಳು

ಸಿ) ರಾಜ್ಯಾಡಳಿತ

ಡಿ) ಮೌಲ್ಯ ಶಿಕ್ಷಣ

44. ಲೋಕಸಭಾ ಸದಸ್ಯನಾಗಲು ಒಬ್ಬ ವ್ಯಕ್ತಿಗೆ ಕನಿಷ್ಠ ವಯೋಮಿತಿ ಎಷ್ಟು?

ಎ) 25 ವರ್ಷದವನಾಗಿರಬೇಕು

ಬಿ) 40 ವರ್ಷದವನಾಗಿರಬೇಕು

ಸಿ) 50 ವರ್ಷದವನಾಗಿರಬೇಕು

ಡಿ) ಯಾವುದೇ ವಯಸ್ಸಿನ ಮಿತಿ ಇಲ್ಲ

45. ಜಗತ್ತಿನ ಪ್ರಥಮ ‘ಲಿಖಿತ ಸಂವಿಧಾನ’ ಹೊಂದಿದ ದೇಶ ಯಾವುದು?

ಎ) ಅಮೆರಿಕ

ಬಿ) ಜರ್ಮನಿ

ಸಿ) ಭಾರತ

ಡಿ) ಇಟಲಿ

46. ‘ಮೂಲಭೂತ ಹಕ್ಕುಗಳ ರಕ್ಷಕ’ ಎಂದು ಯಾವುದನ್ನು ಕರೆಯಲಾಗುತ್ತದೆ?

ಎ) ಸುಪ್ರೀಂ ಕೋರ್ಟ್

ಬಿ) ಕೇಂದ್ರ ಸರ್ಕಾರ

ಸಿ) ರಾಜ್ಯ ಸರ್ಕಾರ

ಡಿ) ಮಾನವ ಹಕ್ಕು ಆಯೋಗ

47. ‘ಅನುಭವ ಮಂಟಪ’ದ ಶೂನ್ಯಪೀಠದ ಅಧ್ಯಕ್ಷ ಯಾರಾಗಿದ್ದರು?

ಎ) ಆಯ್ದಕ್ಕಿ ಮಾರಯ್ಯ

ಬಿ) ಅಲ್ಲಮಪ್ರಭು

ಸಿ) ಬಸವಣ್ಣ

ಡಿ) ಚನ್ನಬಸವಣ್ಣ

48. 1 ರಿಂದ 100 ರವರೆಗಿನ ಸಂಖ್ಯೆಗಳ ಸಂಕಲನ ಮಾಡಿದಾಗ ಬರುವ ಮೊತ್ತ ಎಷ್ಟು?

ಎ) 5050

ಬಿ) 5060

ಸಿ) 5030

ಡಿ) 5020

49. ₹ 5,000 ಗಳಿಗೆ ವಾರ್ಷಿಕ ಶೇ 5 ರ ಬಡ್ಡಿ ದರದಂತೆ, 4 ವರ್ಷಗಳಿಗೆ ಆಗುವ ಸರಳ ಬಡ್ಡಿ ಎಷ್ಟು?

ಎ) 5,000 →

ಬಿ) 500

ಸಿ) 1,000

ಡಿ) 250

50. ಒಬ್ಬ ವ್ಯಕ್ತಿ ಒಂದು ವಸ್ತುವನ್ನು ₹ 800ಕ್ಕೆ ಕೊಂಡು ಅದೇ ವಸ್ತುವನ್ನು ಶೇ 20 ರಷ್ಟು ಲಾಭಕ್ಕೆ ಮಾರುತ್ತಾನೆ. ಹಾಗಾದರೆ ಅವನು ಮಾರಿದ ಬೆಲೆ ಎಷ್ಟು?

ಎ) ₹ 860 →→ಬಿ) ₹ 980

ಸಿ) ₹ 1,000→ಡಿ) ₹ 960

51. A ಯು B ನ ಸಹೋದರ, C ಯು A ನ ತಾಯಿ, D ಯು C ನ ತಂದೆ, E ಯು B ನ ಮಗ ಹಾಗಾದರೆ, D ಯು B ಗೆ ಏನಾಗುತ್ತಾರೆ?

ಎ) ಮಾವ

ಬಿ) ಸಹೋದರ

ಸಿ) ತಾತ

ಡಿ) ಚಿಕ್ಕಪ್ಪ

52. ಸಂಖ್ಯೆಯನ್ನು ಪೂರ್ಣಗೊಳಿಸಿರಿ. 1432, 2543, 3654, 4765,

ಎ) 3654 →ಬಿ) 4775

ಸಿ) 5766 →ಡಿ) 5876

53. ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದು ಯಾವ ಊರನ್ನು ಕರೆಯುತ್ತಾರೆ?

ಎ) ಬೆಂಗಳೂರು

ಬಿ) ಚಿತ್ರದುರ್ಗ

ಸಿ) ತುಮಕೂರು

ಡಿ) ದಾವಣಗೆರೆ

54. 1907 ರಲ್ಲಿ ನಿರ್ಮಿಸಿದ ಕರ್ನಾಟಕದ ಮೊಟ್ಟಮೊದಲ ದೊಡ್ಡ ಜಲಾಶಯ ಯಾವುದು?

ಎ) ಕೃಷ್ಣರಾಜ ಸಾಗರ

ಬಿ) ತುಂಗಭದ್ರಾ ಜಲಾಶಯ

ಸಿ) ವಾಣಿವಿಲಾಸ ಸಾಗರ

ಡಿ) ಹಾರಂಗಿ ಜಲಾಶಯ

55. ಕರ್ನಾಟಕದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಯಾವುದು?

ಎ) ಮಂಡ್ಯ

ಬಿ) ವಿಜಯಪುರ

ಸಿ) ಬೆಳಗಾವಿ

ಡಿ) ಬಾಗಲಕೋಟೆ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು