ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿವಿಧ ಇಲಾಖೆಗಳಲ್ಲಿ 1324 ಕಿರಿಯ ಎಂಜಿನಿಯರ್‌ ಹುದ್ದೆಗಳು

Published 9 ಆಗಸ್ಟ್ 2023, 22:47 IST
Last Updated 9 ಆಗಸ್ಟ್ 2023, 22:47 IST
ಅಕ್ಷರ ಗಾತ್ರ

ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ), ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 1324 ಜ್ಯೂನಿಯರ್ ಎಂಜಿನಿಯರ್ (ಸಿವಿಲ್‌, ಮೆಕ್ಯಾನಿಕಲ್, ಎಲೆಕ್ಟ್ರಿಕಲ್‌) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಕುರಿತು ಜುಲೈ 26 ರಂದು ಅಧಿಸೂಚನೆ ಹೊರಡಿಸಿದೆ.

ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆ ದಿನ ಆಗಸ್ಟ್‌ 16, 2023. ಸ್ಪರ್ಧಾತ್ಮಕ ಪರೀಕ್ಷೆಯು ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ನಿಖರ ದಿನಾಂಕಕ್ಕಾಗಿ ಎಸ್‌ಎಸ್‌ಸಿ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣದ ಜೊತೆಗೆ, ಅನುಭವನ್ನು ಹೊಂದಿರಬೇಕು. ಜೂನಿಯರ್ ಎಂಜಿನಿಯರ್‌ ಸಿವಿಲ್‌, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಿಕಲ್ ಮೆಕಾನಿಕಲ್‌ ಎಂಜನಿಯರ್‌ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಡಿಪ್ಲೊಮಾ ಎಂಜಿನಿಯರಿಂಗ್ ಕೋರ್ಸ್‌ಗಳಿಂದ ಬಿ.ಇ ಎಂಜಿನಿಯರಿಂಗ್ ಓದಿದ ಹಾಗೂ ಹುದ್ದೆಗಳಿಗೆ ತಕ್ಕಂತೆ 2 ರಿಂದ 3 ವರ್ಷಗಳವರೆಗೆ ಅನುಭವವಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಕುರಿತ ವಿಸ್ತೃತ ಮಾಹಿತಿಗಾಗಿ ಅಧಿಸೂಚನೆಯ 2ನೇ ಪ್ಯಾರಾ ನೋಡಬಹುದು.

ಎಲ್ಲ ಹುದ್ದೆಗಳಿಗೆ ವಯೋಮಿತಿ ಕನಿಷ್ಠ 30 ವರ್ಷಗಳಿಂದ ಗರಿಷ್ಠ 32 ವರ್ಷಗಳು. ಅರ್ಜಿ ಶುಲ್ಕ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹100. ಮಹಿಳೆ/SC/ST/EXS ವರ್ಗದ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.‌

ಪರೀಕ್ಷೆ ವಿವರ : ಸ್ಪರ್ಧಾತ್ಮಕ ಪರೀಕ್ಷೆ ಕಂಪ್ಯೂಟರ್ ಆಧಾರಿತವಾಗಿದೆ. ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ.

ಪತ್ರಿಕೆಗಳು ;ಪರೀಕ್ಷಾ ವಿಧಾನ; ವಿಷಯಗಳು; ಪ್ರಶ್ನೆಗಳು/ಅಂಕಗಳು;ಅವಧಿ

ಪೇಪರ್ 1; ಕಂಪ್ಯೂಟರ್ ಆಧಾರಿತ ಪರೀಕ್ಷೆ;(i) ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ ;50/50; 2 ಗಂಟೆಗಳು(ಅಂಧತ್ವ, ಅಂಗವೈಕಲ್ಯವಿರುವಂತಹವರಿಗೆ 2 ಗಂಟೆಗಳು ಮತ್ತು 40 ನಿಮಿಷಗಳು)

(ii) ಸಾಮಾನ್ಯ ಅರಿವು;50/50

(iii) ಭಾಗ-ಎ: ಸಾಮಾನ್ಯ ಎಂಜಿನಿಯರಿಂಗ್ (ಸಿವಿಲ್ & ನಿರ್ಮಾಣ);100/100

ಅಥವಾ

ಭಾಗ-ಬಿ: ಸಾಮಾನ್ಯ ಎಂಜಿನಿಯರಿಂಗ್ (ಎಲೆಕ್ಟ್ರಿಕಲ್)

ಅಥವಾ

ಭಾಗ-ಸಿ: ಸಾಮಾನ್ಯ ಎಂಜಿನಿಯರಿಂಗ್ (ಮೆಕ್ಯಾನಿಕಲ್).

ಪೇಪರ್-II; ಕಂಪ್ಯೂಟರ್ ಆಧಾರಿತ ಪರೀಕ್ಷೆ; ಭಾಗ-ಎ: ಸಾಮಾನ್ಯ ಎಂಜಿನಿಯರಿಂಗ್ (ಸಿವಿಲ್ & ನಿರ್ಮಾಣ) ;100/300;2 ಗಂಟೆಗಳು(ಅಂಧತ್ವ, ಅಂಗವೈಕಲ್ಯವಿರುವಂತಹವರಿಗೆ 2 ಗಂಟೆಗಳು ಮತ್ತು 40 ನಿಮಿಷಗಳು)

ಅಥವಾ

ಭಾಗ-ಬಿ : ಸಾಮಾನ್ಯ ಎಂಜಿನಿಯರಿಂಗ್ (ಎಲೆಕ್ಟ್ರಿಕಲ್)

ಅಥವಾ

ಭಾಗ-ಸಿ: ಸಾಮಾನ್ಯ ಎಂಜಿನಿಯರಿಂಗ್ (ಮೆಕ್ಯಾನಿಕಲ್).

ಗಮನಿಸಿ: ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಂಡಿರುವ ಹುದ್ದೆಗಳಿಗೆ ಅನುಸಾರವಾಗಿ ಪತ್ರಿಕೆ 1 ಮತ್ತು 2ರಲ್ಲಿರುವ ಜನರಲ್ ಎಂಜಿನಿಯರಿಂಗ್ ವಿಭಾಗದ (ಭಾಗ ಎ, ಬಿ ಅಥವಾ ಸಿ) ಪ್ರಶ್ನೆಗಳಿಗೆ ಉತ್ತರಿಸಬೇಕು. ಅಂದರೆ, ಸಿವಿಲ್ ವಿಭಾಗದಲ್ಲಿ ಜ್ಯೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿರುವವರು ಪತ್ರಿಕೆ 1 ಮತ್ತು ಪತ್ರಿಕೆ 2 ರ ಭಾಗ ಎ(ಸಿವಿಲ್ ಮತ್ತು ನಿರ್ಮಾಣ) , ಎಲೆಕ್ಟ್ರಿಕಲ್‌ ವಿಭಾಗಕ್ಕೆ ಅರ್ಜಿ ಸಲ್ಲಿಸಿರುವವರು ಭಾಗ ಬಿ(ಎಲೆಕ್ಟ್ರಿಕಲ್‌) ಮತ್ತು ಮೆಕಾನಿಕಲ್ ಎಂಜಿನಿಯರ್ ವಿಭಾಗಕ್ಕೆ ಅರ್ಜಿ ಸಲ್ಲಿಸಿರುವವರು ಭಾಗ ಸಿ(ಮೆಕ್ಯಾನಿಕಲ್) ಪ್ರಶ್ನೆಗಳಿಗೆ ಉತ್ತರಿಸಬೇಕು.

ಪತ್ರಿಕೆ 1 ಮತ್ತು ಪತ್ರಿಕೆ 2 ರಲ್ಲಿ ವಸ್ತು ನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುತ್ತವೆ. ತಪ್ಪು ಉತ್ತರಗಳಿಗೆ ಅಂಕ ಕಳೆಯಲಾಗುತ್ತದೆ.

ಪರೀಕ್ಷಾ ಕೇಂದ್ರಗಳು: ಕರ್ನಾಟಕದಲ್ಲಿ ಬೆಂಗಳೂರು,ಬೆಳಗಾವಿ, ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಕೇರಳದಲ್ಲಿ ತಿರುವನಂತಪುರಂ, ಕೊಲ್ಲಂ, ಕೋಟ್ಟಾಯಂ, ಕೋಯಿಕ್ಕೋಡ್, ತ್ರಿಶೂರ್, ಕವರಟ್ಟಿ

ಅಧಿಸೂಚನೆ ಮತ್ತಿತರ ಮಾಹಿತಿಗಾಗಿ : https://ssc.nic.in/SSCFileServer/PortalManagement/UploadedFiles/NOTICE_JE_2023_26072023.pdf

ಅರ್ಜಿ ಸಲ್ಲಿಕೆಗಾಗಿ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಧಾನ ಕಚೇರಿಯ ಅಧಿಕೃತ ವೆಬ್‌ಸೈಟ್ https://ssc.nic.in ಗೆ ಭೇಟಿ ನೀಡಿ. ಇಲ್ಲಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವಿವರವಾದ ಸೂಚನೆಗಳಿಗಾಗಿ, ಅಧಿಸೂಚನೆಯ ಅನುಬಂಧ-I ಮತ್ತು ಅನುಬಂಧ-II ಅನ್ನು ನೋಡಿ.

ಅಭ್ಯರ್ಥಿಗಳು ನಿಯಮಿತವಾಗಿ ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ: SSC ಮುಖ್ಯ ಕಛೇರಿ ನವದೆಹಲಿಯ ವೆಬ್‌ಸೈಟ್ https://ssc.nic.in.ಮತ್ತು SSC ಕರ್ನಾಟಕ-ಕೇರಳ ಪ್ರದೇಶದ ವೆಬ್‌ಸೈಟ್‌ www.ssckkr.kar.nic.in

(ಪೂರಕ ಮಾಹಿತಿ : ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ, ಕರ್ನಾಟ–ಕೇರಳ ಪ್ರದೇಶ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT