ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಫ್‌ಎಸ್‌ನಲ್ಲಿ ಮಧುಗಿರಿಯ ಶಶಿಕುಮಾರ್‌ಗೆ 66ನೇ ರ‍್ಯಾಂಕ್

Published 8 ಮೇ 2024, 23:26 IST
Last Updated 8 ಮೇ 2024, 23:26 IST
ಅಕ್ಷರ ಗಾತ್ರ

ಮಧುಗಿರಿ (ತುಮಕೂರು): ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು ಮಧುಗಿರಿ ತಾಲ್ಲೂಕಿನ ಸೋಂಪುರ ಗ್ರಾಮದ ಎಸ್.ಎಲ್.ಶಶಿಕುಮಾರ್ ರಾಷ್ಟ್ರಮಟ್ಟದಲ್ಲಿ 66ನೇ ರ‍್ಯಾಂಕ್‌ ಗಳಿಸಿದ್ದಾರೆ.

ಗ್ರಾಮದ ಶಿಕ್ಷಕ ಲಕ್ಷ್ಮಿರಂಗಯ್ಯ ಹಾಗೂ ಚಂದ್ರಕಾಂತಮ್ಮ ದಂಪತಿ ಪುತ್ರರಾದ ಶಶಿಕುಮಾರ್ ಪಟ್ಟಣದ ಕಾರ್ಡಿಯಲ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ತುಮಕೂರಿನ ಸರ್ವೋದಯ ಕಾಲೇಜಿನಲ್ಲಿ ಪಿಯು ಹಾಗೂ ಬೆಂಗಳೂರಿನ ಪಿಇಎಸ್ ಕಾಲೇಜಿನಿಂದ 2019ರಲ್ಲಿ ಟೆಲಿ ಕಮ್ಯುನಿಕೇಷನ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಮೂರನೇ ಪ್ರಯತ್ನದಲ್ಲಿ ಅವರು ಈ ಯಶಸ್ಸು ಕಂಡಿದ್ದಾರೆ. ಮೊದಲ ಎರಡು ಪ್ರಯತ್ನದಲ್ಲಿ ನಿರೀಕ್ಷಿತ ಅಂಕ ಬಂದಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಕೇವಲ ಮೂರು ಅಂಕಗಳಿಂದ ಅವಕಾಶ ಕೈತಪ್ಪಿತ್ತು. 

‘ಕಠಿಣ ಶ್ರಮದಿಂದ ಸತತ ಅಧ್ಯಯನ ನಡೆಸಿದರೆ ಸುಲಭವಾಗಿ ಗುರಿ ತಲುಪಬಹುದು. ಪ್ರತಿದಿನ 12 ತಾಸು ತಯಾರಿ ನಡೆಸುತ್ತಿದ್ದೆ. ತಂದೆ, ತಾಯಿ ಪಡುತ್ತಿದ್ದ ಕಷ್ಟ, ಕಾರ್ಪಣ್ಯ ಸದಾ ಕಣ್ಣ ಮುಂದೆ ಬರುತ್ತಿದ್ದವು. ಏನಾದರೂ ಸಾಧನೆ ಮಾಡಿ ಹೆತ್ತವರಿಗೆ ಮತ್ತು ಹುಟ್ಟಿದ ಊರಿಗೆ ಒಳ್ಳೆಯ ಹೆಸರು ತರಬೇಕು ಎಂದು ಪಣ ತೊಟ್ಟಿದ್ದೆ. ನನ್ನ ಶ್ರಮ ಇಂದು ಫಲ ನೀಡಿದೆ’ ಎಂದು ಶಶಿಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT