ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಫಾರ್ಮಕಾಲಜಿಯಲ್ಲಿ ಎಂ.ಫಾರ್ಮ ಮಾಡಿದರೆ ಸೂಕ್ತವೆ?

Published 18 ಡಿಸೆಂಬರ್ 2023, 1:17 IST
Last Updated 18 ಡಿಸೆಂಬರ್ 2023, 1:17 IST
ಅಕ್ಷರ ಗಾತ್ರ

ನಾನು ಬಿಫಾರ್ಮ ಮುಗಿಸಿದ್ದು, ಫಾರ್ಮಕಾಲಜಿ ಮತ್ತು ಔಷಧ ನಿಯಂತ್ರಣ ವಿಷಯಗಳಲ್ಲಿ ಎಂಫಾರ್ಮ ಮಾಡಲು ಇಚ್ಛಿಸಿದ್ದೇನೆ. ಯಾವ ವಿಷಯಗಳಲ್ಲಿ ಮಾಡಿದರೆ, ಹೆಚ್ಚಿನ ಪ್ರಗತಿ  ಕಾಣಬಹುದು?

ಅಭಿಷೇಕ್ ಪಟ್ಟೆ ನಾಗರಾಜ್, ದಾವಣಗೆರೆ.

ಬಿ.ಫಾರ್ಮ ನಂತರ ಪರ್ಯಾಯ ಪ್ರವೇಶದ ಮೂಲಕ ಫಾರ್ಮ್.ಡಿ (ಡಾಕ್ಟರ್ ಇನ್ ಫಾರ್ಮಸಿ) ಕೂಡಾ ಮಾಡಬಹುದು.  ಫಾರ್ಮಕಾಲಜಿ, ಫಾರ್ಮಸ್ಯೂಟಿಕ್ಸ್, ಫಾರ್ಮಸ್ಯೂಟಿಕಲ್ ಟೆಕ್ನಾಲಜಿ, ಫಾರ್ಮಸ್ಯೂಟಿಕಲ್ ಮಾರ್ಕೆಟಿಂಗ್, ಗುಣಮಟ್ಟ ಮತ್ತು ನಿಯಂತ್ರಣ ವ್ಯವಹಾರಗಳು ಸೇರಿ ಈ ಕ್ಷೇತ್ರದ ಬಹುತೇಕ ವಿಭಾಗಗಳಿಗೆ
ಬೇಡಿಕೆಯಿದೆ. ಆದರೆ, ಜ್ಞಾನ, ಕೌಶಲಗಳಲ್ಲಿ ವ್ಯತ್ಯಾಸಗಳಿದ್ದು,  ಯಾವ ವಿಭಾಗ ಸೂಕ್ತವೆಂದು ಸ್ವಯಂ-ಮೌಲ್ಯಮಾಪನದಿಂದ ನಿರ್ಧರಿಸಿ.

ಎಂಫಾರ್ಮ/ಫಾರ್ಮ್.ಡಿ ನಂತರ ವಿಸ್ತಾರವಾಗಿ ಬೆಳೆಯುತ್ತಿರುವ ಫಾರ್ಮ ಔದ್ಯೋಗಿಕ ಕ್ಷೇತ್ರದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು, ಬಯೋಟೆಕ್ ಸಂಸ್ಥೆಗಳು, ಸೌಂದರ್ಯವರ್ಧಕ ಉತ್ಪಾದನಾ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಮುಂತಾದ ವಲಯಗಳಲ್ಲಿ ಅವಕಾಶಗಳಿವೆ. ಇದಲ್ಲದೆ, ಫಾರ್ಮ ಕ್ಷೇತ್ರದ ಯಾವುದೇ ಪದವಿಯ ನಂತರ ಔಷಧಿಗಳ ಮಾರಾಟಕ್ಕೆ ಡ್ರಗ್ ಕಂಟ್ರೋಲ್ ಇಲಾಖೆಯಿಂದ ಸಿಗುವ ಪರವಾನಗಿಯಿಂದ ಮೆಡಿಕಲ್ ಸ್ಟೋರ್ ವ್ಯವಹಾರವನ್ನು ನಡೆಸಬಹುದು. ಅನುಭವ ಮತ್ತು ನಿಬಂಧನೆಗಳ ಪ್ರಕಾರ ಔಷಧಿಗಳ ಉತ್ಪಾದನೆ ಮತ್ತು ಸಗಟು ವ್ಯಾಪಾರಕ್ಕೂ ಪರವಾನಗಿ ಪಡೆದು ಉದ್ಯಮಿಗಳಾಗಬಹುದು. ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/channel/UCH-ugIg9bBIyH5QQbn_JjIw

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT