10ನೇ ತರಗತಿ;ವಿಜ್ಞಾನ (ಭಾಗ-2: ಜೀವಶಾಸ್ತ್ರ);ಅಧ್ಯಾಯ-8

ವಿವಿಧ ಜೀವಿಗಳು ಸಂತಾನೋತ್ಪತ್ತಿ ನಡೆಸುವ ವಿಧಾನಗಳು ಅವುಗಳ ದೇಹ ವಿನ್ಯಾಸವನ್ನು ಆಧರಿಸಿದೆ.

ಅ). ಅಲೈಂಗಿಕ ಸಂತಾನೋತ್ಪತ್ತಿ

(ಬಹುತೇಕ ಏಕಕೋಶ ಜೀವಿಗಳು)

ಆ). ಲೈಂಗಿಕ ಸಂತಾನೋತ್ಪತ್ತಿ

(ಬಹುತೇಕ ಬಹುಕೋಶ ಜೀವಿಗಳು)

ಏಕಕೋಶ ಜೀವಿಗಳ ಅಲೈಂಗಿಕ ಸಂತಾನೋತ್ಪತ್ತಿ ವಿಧಾನಗಳು ಕೆಳಗಿನಂತಿವೆ.

*ವಿದಳನ (ಫಿಶನ್)

* ತುಂಡರಿಕೆ (ಫ್ರಾಗ್ಮಂಟೇಶನ್ )

* ಪುನರುತ್ಪಾದನೆ (ರೆಪ್ಲಿಕೇಶನ್)

*ಮೊಗ್ಗುವಿಕೆ ಬಡ್ಡಿಂಗ್ )

* ಕಾಯಜ ಸಂತಾನೋತ್ಪತ್ತಿ (ವೆಜಿಟೇಬಲ್ ಪ್ರೊಪಗೇಶನ್ )

* ಬೀಜಕಗಳ ಉತ್ಪಾದನೆ (ಸ್ಪೋರ್ ಫಾರ್ಮೇಶನ್ )

* ತುಂಡರಿಕೆ– ಫ್ರಾಗ್ಮಂಟೇಶನ್ (ಉದಾ: ಸ್ಪೈರೋಗೈರಾ)

ಸರಳವಾದ ದೇಹ ರಚನೆಯನ್ನು ಹೊಂದಿರುವ ಈ ಬಹುಕೋಶೀಯ ಜೀವಿಯು ಬೆಳವಣಿಗೆ ಹೊಂದಿದ ನಂತರ ಸಣ್ಣ ಸಣ್ಣ ತುಂಡುಗಳಾಗಿ ವಿಭಜನೆ ಹೊಂದಿರುತ್ತದೆ. ಈ ತುಂಡುಗಳು ಹೊಸ ಜೀವಿಗಳಾಗಿ ಬೆಳೆಯುತ್ತವೆ.

*ಪುನರುತ್ಪಾದನೆ- ರಿಜನರೇಶನ್ (ಉದಾ:ಪ್ಲನೇರಿಯಾ)

ಈ ಜೀವಿಗಳನ್ನು ಅನೇಕ ಚೂರುಗಳಾಗಿ ತುಂಡರಿಸಬಹುದು ಮತ್ತು ಪ್ರತೀ ಚೂರೂ ಒಂದು ಸಂಪೂರ್ಣ ಜೀವಿಯಾಗಿ ಬೆಳೆಯುತ್ತದೆ. ಇದನ್ನು ಪುನರುತ್ಪಾದನೆ ಎಂದು ಕರೆಯುವರು.
(ಚಿತ್ರ 8.3)

*ಮೊಗ್ಗುವಿಕೆ- ಬಡ್ಡಿಂಗ್ (ಉದಾ: ಹೈಡ್ರಾ)

ಈ ಜೀವಿಗಳ ನಿರ್ದಿಷ್ಟ ಭಾಗದಲ್ಲಿ ಪುನರಾವರ್ತಿತ ಕೋಶ ವಿಭಜನೆಯಿಂದ ಒಂದು ಮೊಗ್ಗು ಬಾಹ್ಯವೃದ್ಧಿಯಾಗಿ ಬೆಳೆಯುತ್ತದೆ. ಈ ಮೊಗ್ಗುಗಳು ಸಣ್ಣ ಜೀವಿಗಳಾಗಿ ಬೆಳೆಯುತ್ತವೆ ಮತ್ತು ಪೂರ್ಣ ಬೆಳೆದ ನಂತರ ಮಾತೃದೇಹದಿಂದ ಬೇರ್ಪಟ್ಟು ಹೊಸ ಸ್ವತಂತ್ರ ಜೀವಿಗಳಾಗುತ್ತವೆ.
(ಚಿತ್ರ: 8.4)

*ಕಾಯಜ ಸಂತಾನೋತ್ಪತ್ತಿ –ವೆಜಿಟೇಬಲ್ ಪ್ರೊಪಗೇಶನ್ (ಉದಾ: ಬ್ರಯೋ ಫಿಲ್ಲಮ್)

ಸೂಕ್ತ ಪರಿಸ್ಥಿತಿಗಳಲ್ಲಿ ಅನೇಕ ಸಸ್ಯಗಳ ಬೇರು, ಕಾಂಡ ಮತ್ತು ಎಲೆಗಳಂತಹ ಭಾಗಗಳು ಹೊಸ ಸಸ್ಯಗಳಾಗಿ ಬೆಳೆಯುತ್ತವೆ. ಬ್ರಹೋಫಿಲ್ಲಮ್ ಎಲೆಯ ಅಂಚಿನ ಉದ್ದಕ್ಕೂ ಇರುವ ಕುಳಿಗಳಲ್ಲಿ ಉತ್ಪತ್ತಿಯಾಗುವ ಮೊಗ್ಗುಗಳು ಮಣ್ಣಿನ ಮೇಲೆ ಬಿದ್ದು ಮತ್ತೆ ಹೊಸ ಸಸ್ಯಗಳಾಗಿ ಬೆಳೆಯುತ್ತವೆ.
(ಚಿತ್ರ: 8.5)

* ಬೀಜಕಗಳ ಉತ್ಪಾದನೆ– ಸ್ಪೋರ್ ಫಾರ್ಮೇಶನ್ (ಉದಾ: ರೈಜೋಪಸ್)

ಹೈಫೆಗಳ ಮೇಲಿರುವ ಚಿಕ್ಕ ದುಂಡುಗಿನ ಸಂತಾನೋತ್ಪತ್ತಿಯಲ್ಲಿ ಭಾಗವಹಿಸುತ್ತವೆ. ಈ ದುಂಡುಗಿನ ರಚನೆಗಳೇ ಬೀಜಕದಾನಿಗಳು. ಇವುಗಳಲ್ಲಿ ವಿಶಿಷ್ಟ ಬೀಜಕಗಳಿದ್ದು, ಅವು ಅಂತಿಮವಾಗಿ ಹೊಸ ರೈಜೋಪಸ್ ಜೀವಿಗಳಾಗಿ ಬೆಳವಣಿಗೆ ಹೊಂದುತ್ತವೆ.
(ಚಿತ್ರ: 8.6)

ಈ ಮೇಲ್ಕಂಡ ಎಲ್ಲಾ ವಿಧದ ಸಂತಾನೋತ್ಪತ್ತಿಯಲ್ಲಿ ಹೊಸ ಪೀಳಿಗೆಗಳು ಒಂದೇ ಒಂದು ಜೀವಿಯಿಂದ ಸೃಷ್ಟಿಯಾಗುತ್ತವೆ.

(ಪಾಠ ಸಂಯೋಜನೆ: ಜೀವಶಾಸ್ತ್ರ ವಿಭಾಗ, ಆಕಾಶ್ ಇನ್‌ಸ್ಟಿಟ್ಯೂಟ್, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.