ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಟಿ: ಪುರುಷ ಅಭ್ಯರ್ಥಿಗಳ ಪಾರುಪತ್ಯ

Last Updated 22 ಡಿಸೆಂಬರ್ 2022, 21:45 IST
ಅಕ್ಷರ ಗಾತ್ರ

ಬೆಂಗಳೂರು:ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) 2022ನೇ ಸಾಲಿನ ಸಾಮಾನ್ಯ ದಾಖಲಾತಿ ಪರೀಕ್ಷೆಯ (ಸಿಎಟಿ) ಫಲಿತಾಂಶ ಪ್ರಕಟಿಸಿದ್ದು, ಪುರುಷ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.

ದೆಹಲಿ, ಮಹಾರಾಷ್ಟ್ರ, ತೆಲಂಗಾಣದ ತಲಾ ಇಬ್ಬರು, ಗುಜರಾತ್, ಹರಿಯಾಣ, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶದ ತಲಾ ಒಬ್ಬರು ಸೇರಿದಂತೆ 11 ಅಭ್ಯರ್ಥಿಗಳು 100 ಪರ್ಸಂಟೈಲ್‌ ಗಳಿಸಿದ್ದಾರೆ. 100ಪರ್ಸಂಟೈಲ್‌ ಗಳಿಸಿದ ಎಲ್ಲರೂ ಪುರುಷ ಅಭ್ಯರ್ಥಿಗಳು ಎನ್ನುವುದು ಈ ಬಾರಿಯ ಫಲಿತಾಂಶದ ವಿಶೇಷ.

ಕರ್ನಾಟಕದ ಇಬ್ಬರು ಸೇರಿದಂತೆ 22 ಅಭ್ಯರ್ಥಿಗಳು 99.99 ಪರ್ಸಂಟೈಲ್‌ ಗಳಿಸಿದ್ದಾರೆ. ಅವರಲ್ಲಿ 21 ಅಭ್ಯರ್ಥಿಗಳು ಪುರುಷರು, ಒಬ್ಬರು ಮಹಿಳೆ. 99.98 ಪರ್ಸಂಟೈಲ್‌ ಅನ್ನು 22 ಅಭ್ಯರ್ಥಿಗಳು ಗಳಿಸಿದ್ದು, ಅವರಲ್ಲಿ 19 ಪುರುಷರು ಇದ್ದಾರೆ.

2.22 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿಶೇ 35 ಮಹಿಳೆಯರು, ಶೇ 65ರಷ್ಟು ಪುರುಷರು ಇದ್ದರು. ಐಐಎಂ ಹೊರತುಪಡಿಸಿ ದೇಶದ 90ಕ್ಕೂ ಹೆಚ್ಚು ಸಂಸ್ಥೆಗಳು ಸಿಎಟಿ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿವೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು www.iimcat.ac.in ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT