ಶುಕ್ರವಾರ, ಜನವರಿ 21, 2022
30 °C

ಡಿಆರ್‌ಡಿಒ ರಕ್ಷಣಾ ಪ್ರಯೋಗಾಲಯ ವಿದ್ಯಾರ್ಥಿ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಆರ್‌ಡಿಒ ರಕ್ಷಣಾ ಪ್ರಯೋಗಾಲಯ ಜೂನಿಯರ್‌ ಸಂಶೋಧನಾ ಫೆಲೋಶಿಪ್ (ಮೆಕ್ಯಾನಿಕಲ್‌) 2021

ವಿವರ: ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ: ಸಂದರ್ಶನದ ವೇಳೆಗೆ 28 ವರ್ಷ ತುಂಬುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮೆಕ್ಯಾನಿಕಲ್‌ನಲ್ಲಿ ಬಿ.ಇ/ಬಿ.ಟೆಕ್‌ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿರಬೇಕು. ನೆಟ್‌, ಗೇಟ್‌ ಮುಗಿಸಿರಬೇಕು ಅಥವಾ ಪ್ರಥಮ ಶ್ರೇಣಿಯಲ್ಲಿ ಎಂ.ಇ/ಎಂ/ಟೆಕ್‌ನಲ್ಲಿ ಉತ್ತೀರ್ಣರಾಗಿರಬೇಕು.

ಆರ್ಥಿಕ ಸಹಾಯ: ಪ್ರತಿ ತಿಂಗಳು ₹31 ಸಾವಿರ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9 ಡಿಸೆಂಬರ್‌, 2021

ಅರ್ಜಿ ಸಲ್ಲಿಕೆ ವಿಧಾನ: ಸಂದರ್ಶನ, ರಕ್ಷಣಾ ಪ್ರಯೋಗಾಲಯ, ರತಾನಡಾ ಅರಮನೆ, ಜೋಧಪುರ– 342011 (ರಾಜಸ್ಥಾನ)

ಹೆಚ್ಚಿನ ಮಾಹಿತಿಗೆ: www.b4s.in/praja/LJM7

ಕೋಟಕ್‌ ಕನ್ಯಾ ಸ್ಕಾಲರ್‌ಶಿಪ್‌ 2021

ವಿವರ: ಕಾರ್ಪೊರೆಟ್‌ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಕೋಟಕ್‌ ಮಹೀಂದ್ರ ಸಂಸ್ಥೆಯು ಪಿಯುಸಿ ಮುಗಿಸಿದ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹತೆ: ಮೊದಲ ವರ್ಷದ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ. ಎಂಜಿನಿಯರಿಂಗ್‌, ಮೆಡಿಕಲ್‌, ಡಿಸೈನಿಂಗ್‌ ಮುಂತಾದ ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರಬೇಕು. 12ನೇ ತರಗತಿಯಲ್ಲಿ ಶೇ 75ರಷ್ಟು ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು ₹3 ಲಕ್ಷವನ್ನು ಮೀರಬಾರದು.

ಆರ್ಥಕ ಸಹಾಯ: ವರ್ಷಕ್ಕೆ ₹1 ಲಕ್ಷ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31 ಡಿಸೆಂಬರ್‌, 2021

ಅರ್ಜಿ ಸಲ್ಲಿಸುವ ವಿಧಾನ:
ಆನ್‌ಲೈನ್‌ ಅರ್ಜಿಗಳು ಮಾತ್ರ

ಹೆಚ್ಚಿನ ಮಾಹಿತಿಗೆ:
www.b4s.in/praja/KKGS1

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು