ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸರದಲ್ಲಿ ಉದ್ಯೋಗ ಗಳಿಸಲು, ಯಶಸ್ಸು ಸಾಧಿಸಲು ಪಿಯುಸಿ ನಂತರ ಯಾವೆಲ್ಲ ಕೋರ್ಸ್ಗಳ ಅಧ್ಯಯನ ಮಾಡಬಹುದು ಎಂದು ಮಾರುಕಟ್ಟೆ ತಜ್ಞರನ್ನು ಪ್ರಶ್ನಿಸಿದರೆ, ಅವರು ‘ಉದ್ಯಮಶೀಲತೆ’ ಮತ್ತು ‘ನವೋದ್ಯಮ’ ಎಂಬ ಪ್ರಮುಖ ಕೋರ್ಸ್ಗಳನ್ನು ಸೂಚಿಸುತ್ತಾರೆ. ದೇಶದ ಆರ್ಥಿಕ ದೃಢತೆ ಹೆಚ್ಚುವುದು ದೊಡ್ಡ ದೊಡ್ಡ ಉದ್ಯಮಗಳಿಂದ ಮಾತ್ರ ಎಂಬ ಮಾತಿಗೀಗ ಅಷ್ಟು ಜಾಗವಿಲ್ಲ. ಬದಲಿಗೆ, ಸಣ್ಣ ಬಂಡವಾಳದ ಅನೇಕ ನವೋದ್ಯಮಗಳು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳು ಯಶಸ್ಸಿನ ಹಲವು ಉದಾಹರಣೆಗಳನ್ನು ನಮ್ಮ ಮುಂದೆ ಇರಿಸಿವೆ.

ಯಾವುದೇ ಉದ್ಯಮ ಅಥವಾ ನವೋದ್ಯಮ ಸ್ಥಾಪಿಸಲು ಸರಿಯಾದ ತಿಳಿವಳಿಕೆ ಮತ್ತು ಕೌಶಲ ಎರಡೂ ಬೇಕು. ಅದಕ್ಕಾಗಿ, ವಿದ್ಯಾರ್ಥಿಯಾಗಿರುವಾಗಲೇ ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು. ಪಿಯುಸಿ ನಂತರ ಜನಪ್ರಿಯವಾಗಿರುವ ಬಿಬಿಎಂ, ಬಿಕಾಂ, ಬಿಸಿಎಗಳ ಬದಲಿಗೆ, ಸ್ವಂತ ಉದ್ದಿಮೆ ಸ್ಥಾಪಿಸಲು ಬೇಕಾದ ಕೌಶಲಗಳನ್ನು ಕಲಿಯಲು ಈ ಕೆಳಗಿನ ಕೆಲವು ವಿನೂತನ ಕೋರ್ಸ್ಗಳು ಲಭ್ಯವಿವೆ.

ಇವೆಲ್ಲವೂ ವೃತ್ತಿಪರ ಪದವಿ ಅಧ್ಯಯನ ಮಾರ್ಗಗಳಾಗಿದ್ದು, ಸ್ವತಃ ಉದ್ಯೋಗ ಮಾಡುತ್ತ ಇತರರಿಗೂ ಉದ್ಯೋಗ ಕಲ್ಪಿಸುವ ಅವಕಾಶ ಇರುತ್ತದೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ಕೆಳಗಿನ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

1. ಬಿಬಿಎ ಇನ್ ಆಂತ್ರಪ್ರನರ್ಷಿಪ್: ಇದು ಯುವ ಉದ್ಯಮಿಗಳಿಗೆ ಅತ್ಯಂತ ಜನಪ್ರಿಯ ಕೋರ್ಸ್ ಎನಿಸಿದೆ. ಸಾಮಾನ್ಯ ಬಿಬಿಎಗಿಂತ ಭಿನ್ನವಾಗಿ, ಪ್ರತಿ ವಿಷಯವನ್ನೂ ಇಲ್ಲಿ ಒಬ್ಬ ಉದ್ದಿಮೆಯ ಮಾಲೀಕನ ದೃಷ್ಟಿಕೋನದಿಂದ ಕಲಿಸಲಾಗುತ್ತದೆ.

ಪ್ರಮುಖ ಕಾಲೇಜುಗಳು: ಎನ್ಎಂಐಎಂಎಸ್ (ಮುಂಬೈ), ಕ್ರೈಸ್ಟ್ ಯೂನಿವರ್ಸಿಟಿ (ಬೆಂಗಳೂರು), ಫ್ಲೇಮ್ ಯೂನಿವರ್ಸಿಟಿ (ಪುಣೆ).

ಕಲಿಕೆಯ ವಿಷಯಗಳು: ಹೊಸ ಉದ್ದಿಮೆಯ ಹಣಕಾಸು ನಿರ್ವಹಣೆ, ಮಾರುಕಟ್ಟೆ ಸಂಶೋಧನೆ ಮತ್ತು ಕಡಿಮೆ ವೆಚ್ಚದ ಮಾರ್ಕೆಟಿಂಗ್ ಮೂಲಕ ವೇಗದ ಬೆಳವಣಿಗೆಯ ತಂತ್ರಗಳು (ಗ್ರೋತ್ ಹ್ಯಾಕಿಂಗ್).

2. ಇಂಟಿಗ್ರೇಟೆಡ್ ಐಪಿಎಂ (ಇಂಟಿಗ್ರೇಟೆಡ್ ಪ್ರೋಗ್ರ್ಯಾಂ ಇನ್ ಮ್ಯಾನೇಜ್ಮೆಂಟ್– ಬಿಬಿಎ+ಎಂಬಿಎ): ಇಂದೋರ್, ರೋಹ್ಟಕ್ ಮತ್ತು ರಾಂಚಿಯ ಐಐಎಂಗಳು 12ನೇ ತರಗತಿಯ ನಂತರ ನೇರವಾಗಿ 5 ವರ್ಷಗಳ ಮ್ಯಾನೇಜ್ಮೆಂಟ್ ಕೋರ್ಸ್ ನೀಡುತ್ತವೆ. ಇದು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಮತ್ತು ಜಾಗತಿಕ ಮಟ್ಟದ ಉದ್ಯಮದ ಜ್ಞಾನವನ್ನು ಬೆಳೆಸುತ್ತದೆ.

3. ಬಿ.ಡೆಸ್ ಇನ್ ಸ್ಟ್ರಾಟೆಜಿಕ್ ಡಿಸೈನ್ ಮ್ಯಾನೇಜ್ಮೆಂಟ್: ಆ್ಯಪಲ್ ಅಥವಾ ಏರ್ಬಿಎನ್ಬಿಯಂತಹ ಉತ್ಪನ್ನ ಆಧಾರಿತ ಕಂಪನಿಗಳನ್ನು ಕಟ್ಟಲು ಬಯಸುವವರಿಗೆ ಇದು ಸೂಕ್ತ. ಇಲ್ಲಿ ಐದು ಹಂತಗಳ ‘ಡಿಸೈನ್ ಥಿಂಕಿಂಗ್’ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದನ್ನು ಕಲಿಸಲಾಗುತ್ತದೆ.

4. ಡಿಪ್ಲೊಮಾ ಮತ್ತು ಅಲ್ಪಾವಧಿಯ ಕೋರ್ಸ್ಗಳು: ನೀವು ಬಿ.ಟೆಕ್ ಅಥವಾ ಬಿ.ಎ ಅಂತಹ ಬೇರೆ ಪದವಿ ಅಧ್ಯಯನ ಮಾಡುತ್ತಿದ್ದರೆ, ಅದರ ಜೊತೆಗೆ ಈ ಕೆಳಗಿನ ಕೋರ್ಸ್ಗಳನ್ನೂ ಮಾಡಬಹುದು.

ಡಿಪ್ಲೊಮಾ ಇನ್ ಆಂತ್ರಪ್ರನರ್ಷಿಪ್: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ - IGNOU) ಅಥವಾ ಎನ್ಎಂಐಎಂಎಸ್ ಮೂಲಕ 1 ವರ್ಷದ ಕೋರ್ಸ್ ಸೇರಬಹುದು.

ಆನ್ಲೈನ್ ಸರ್ಟಿಫಿಕೇಶನ್: ಕೋರ್ಸೆರಾ (Coursera) ಮೂಲಕ ವಾರ್ಟನ್ (Wharton) ಅಥವಾ ಅಪ್ಗ್ರಾಡ್ (UpGrad) ಸ್ಟಾರ್ಟ್ಅಪ್ ಪ್ರೋಗ್ರ್ಯಾಂಗಳಿಗೆ ದಾಖಲಾಗಬಹುದು.

ಹೆಚ್ಚಿನ ಉನ್ನತ ಸಂಸ್ಥೆಗಳು ಪ್ರವೇಶ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತವೆ.

ಉದ್ಯಮಶೀಲತೆ ಬಗೆಗಿನ ಕೋರ್ಸ್ ಕಲಿಯುವಾಗ ಕಾಲೇಜಿನ ತರಗತಿಗಿಂತ ಅಲ್ಲಿನ ‘ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್’ (ಟಿಬಿಐ) ಬಹಳ ಮುಖ್ಯ. ಇದು ಪ್ರತಿಷ್ಠಿತ ಕಾಲೇಜುಗಳ ಕ್ಯಾಂಪಸ್ನಲ್ಲಿಯೇ ಇರುತ್ತದೆ. ಪಠ್ಯಕ್ರಮದ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಸುವ ತಾಣವಿದು.

ಈ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಕಾಲೇಜಿನವರು ಕಿರು ಸಂದರ್ಶನವೊಂದನ್ನು ನಡೆಸುತ್ತಾರೆ. ಸಂದರ್ಶನದಲ್ಲಿ 12ನೇ ತರಗತಿಯ ಅಂಕಗಳಿಗಿಂತ ನಿಮ್ಮ ‘ಹಂಬಲ’ ಮತ್ತು ‘ಸೃಜನಶೀಲತೆ’ಗೆ ಹೆಚ್ಚು ಬೆಲೆ ಇರುತ್ತದೆ. ನೀವು ಶಾಲಾ ದಿನಗಳಲ್ಲಿ ಏನಾದರೂ ಸಣ್ಣ ವ್ಯಾಪಾರ ಮಾಡಿದ್ದರೆ ಅಥವಾ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರೆ ಅದನ್ನು ತಪ್ಪದೇ ಉಲ್ಲೇಖಿಸಿ; ಖಂಡಿತ ಆಯ್ಕೆಯಾಗುತ್ತೀರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.