ಬುಧವಾರ, ಜುಲೈ 6, 2022
22 °C

ಸಾಮಾನ್ಯ ಜ್ಞಾನ: ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಪಿಎಸ್‌ಸಿ ‘ಗ್ರೂಪ್-ಸಿ’ಯ ವಿವಿಧ ಹುದ್ದೆಗಳು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಆ್ಯಂಡ್‌ ಐಆರ್‌ಬಿ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

****

1) 2021-22 ಸಾಲಿನಲ್ಲಿ ಅತಿಹೆಚ್ಚು ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಿದ ರಾಜ್ಯ ಯಾವುದು?

ಎ) ಮಹಾರಾಷ್ಟ್ರ →ಬಿ) ಕರ್ನಾಟಕ
ಸಿ) ಉತ್ತರ ಪ್ರದೇಶ →ಡಿ) ಗುಜರಾತ್

ಉತ್ತರ: ಬಿ

2) ಭಾರತದ ಸಂಸತ್ತಿನಲ್ಲಿ ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದವರು ಜೆ ಎಚ್ ಪಟೇಲ್. ಇತ್ತೀಚೆಗೆ ಕೆನಡಾ ದೇಶದ ಸಂಸತ್ತಿನಲ್ಲಿ ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದವರು ಯಾರು?

ಎ) ಚಂದ್ರ ಆರ್ಯ ಬಿ) ನಾಗೇಂದ್ರ ಭಟ್
ಸಿ) ಎಂ ಆರ್ ಸತೀಶ್ ಡಿ) ನಾಗೇಂದ್ರ ಎಂ ಆರ್

ಉತ್ತರ: ಎ

3) ‘ನಮ್ಮ ಶಾಮಣ್ಣ’ , ‘ಕನ್ನಡದ ಮನಸ್ಸು’ ಈ ಕೃತಿಗಳನ್ನು ಬರೆದವರು ಯಾರು?

ಎ) ಜಿ. ಎಂ. ಪರಮೇಶ್ವರ

ಬಿ) ಡಿ. ಎಸ್. ನಾಗಭೂಷಣ

ಸಿ) ಎಂ. ಜಿ. ನಾಗೇಶ್→

ಡಿ) ವಿಶ್ವೇಶ್ವರ ಭಟ್

ಉತ್ತರ: ಬಿ

4) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ನಮ್ಮ ರಾಜ್ಯದಲ್ಲಿ ಯುವ ನೀತಿಯ ಕರಡಿನಲ್ಲಿ, ಯುವ ಬಜೆಟ್ ಮಂಡನೆ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಆನ್ ಲೈನ್ ಶಿಕ್ಷಣ ವಿಭಾಗ ಆರಂಭ, ಉದ್ಯಮ ಶೀಲತೆ ಪ್ರೋತ್ಸಾಹಿಸಲು ರಾಜ್ಯ ಉದ್ಯಮಶೀಲತಾ ಕೇಂದ್ರ ಸ್ಥಾಪನೆ ಮತ್ತಿತರ ಅಂಶಗಳಿವೆ

2) ನಮ್ಮ ರಾಜ್ಯದಲ್ಲಿ ಯುವ ನೀತಿಯನ್ನು ರೂಪಿಸಲು ಡಾ. ಬಾಲಸುಬ್ರಮಣ್ಯಂ ಅವರ ನೇತೃತ್ವದಲ್ಲಿ 14  ಸದಸ್ಯರ ತಂಡ ರಚಿಸಲಾಗಿತ್ತು.

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ)1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

5) ವಿಶ್ವ ಅತಿ ಉದ್ದದ ತೂಗು ಸೇತುವೆ ‘ಸ್ಕೈ ಬ್ರಿಡ್ಜ್‌ 721’ ಯಾವ ದೇಶದಲ್ಲಿ ನಿರ್ಮಿಸಲಾಗಿದೆ?
ಎ) ಉಕ್ರೇನ್ →ಬಿ) ಜೆಕ್ ಗಣರಾಜ್ಯ
ಸಿ) ರೊಮೆನಿಯಾ →ಡಿ) ಮಾಲ್ಡಾ

ಉತ್ತರ: ಬಿ

6) ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ರೂಟ್‌ಕೆನಾಲ್‌ನಂತಹ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತಹ ಪುಟ್ಟ (ನ್ಯಾನೊ) ರೊಬೋಟ್‌ಗಳನ್ನು ಈ ಕೆಳಗೆ ಉಲ್ಲೇಖಿಸಿರುವ ಯಾವ ಸಂಸ್ಥೆ ನಿರ್ಮಾಣ ಮಾಡಿದೆ?

ಎ) ಐಐಟಿ ಮುಂಬೈ

ಬಿ) ಅಲ್‌ಮಿನ್ ದಂತಮಹಾ ವಿದ್ಯಾಲಯ ವಿಜಯಪುರ
ಸಿ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಸಿ

7) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) 2021-22ನೇ ಸಾಲಿನಲ್ಲಿ ₹40,295 ಕೋಟಿ  ಬ್ಯಾಂಕಿಂಗ್ ವಂಚನೆ ನಡೆಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ

2) ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಅತಿಹೆಚ್ಚು ವಂಚನೆಗೆ ಒಳಗಾಗಿದೆ. 

 

ಉತ್ತರ ಸಂಕೇತಗಳು

ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ 

ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) 1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

8) ಈವೆಂಟ್ ಹಾರೈಝನ್ ಟೆಲಿಸ್ಕೋಪ್ ‘ಸಾಜಿಟೇರಿಯಸ್ ಎ’ ಎಂಬ ಕಪ್ಪುಕುಳಿಯ ಚಿತ್ರವನ್ನು ಸೆರೆಹಿಡಿದಿದೆ. ಹಾಗಾದರೆ ಅದು ಎಲ್ಲಿದೆ?

ಎ) ಆಂಡ್ರೋಮಿಡಾ ಗೆಲಾಕ್ಸಿ

ಬಿ) ವಿಗ್ರೋ ‘ಎ’ ಗೆಲಾಕ್ಸಿ
ಸಿ) ಮೆಗಾಲಿನಿಕ್ ಕ್ಲೌಡ್ ಗೆಲಾಕ್ಸಿ

ಡಿ) ಮಿಲ್ಕಿ ವೇ ಗೆಲಾಕ್ಸಿ

ಉತ್ತರ: ಡಿ

9) ವರ್ಷದ ಯಾವ ದಿನದಂದು ‘ವಿಶ್ವ ರಕ್ತದೊತ್ತಡ ದಿನ’ ಆಚರಿಸುತ್ತಾರೆ?

ಎ) ಮೇ 17 →ಬಿ) ಜೂನ್ 2

ಸಿ) ಏಪ್ರಿಲ್ 27 →ಡಿ) ಅಕ್ಟೋಬರ್ 24

ಉತ್ತರ: ಎ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು