ಉನ್ನತ ವ್ಯಾಸಾಂಗಕ್ಕೆ ನೆರವಾಗುವ ವಿದ್ಯಾರ್ಥಿ ವೇತನಗಳ ಪಟ್ಟಿ ಇಲ್ಲಿದೆ

ಎಸ್ಬಿಐಎಫ್ ನ ಆಶಾ ಸ್ಕಾಲರ್ಷಿಪ್

ಭಾರತದ ದೊಡ್ಡ ಸ್ಕಾಲರ್ಷಿಪ್ಗಳಲ್ಲಿ ಎಸ್ಬಿಐಎಫ್ ಆಶಾ ಸ್ಕಾಲರ್ಷಿಪ್ ಒಂದಾಗಿದ್ದು, ಎಸ್ಬಿಐ ಫೌಂಡೇಷನ್ನ ಎಜುಕೇಷನ್ ವರ್ಟಿಕಲ್-ಇಂಟಿಗ್ರೇಟೆಡ್ ಲರ್ನಿಂಗ್ ಮಿಶನ್ (ಐಎಲ್ಎಂ)ನ ಅಡಿಯಲ್ಲಿ ಬರುವ ಒಂದು ಉಪಕ್ರಮವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುತ್ತದೆ.

ಅರ್ಹತೆ: ವಿದೇಶದಲ್ಲಿ ಸ್ನಾತಕೋತ್ತರ ಅಥವಾ ಅದಕ್ಕಿಂತ ಹೆಚ್ಚಿನ ಕೋರ್ಸ್ಗೆ ಸೇರಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 75 ಅಥವಾ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು ಮತ್ತು ಅವರ ಕುಟುಂಬದ ವಾರ್ಷಿಕ ಆದಾಯವು ₹ 6,00,000ದವರೆಗೆ ಇರಬೇಕು.

ಆರ್ಥಿಕ ಸಹಾಯ:₹ 20,00,000ದವರೆಗೆ ಅಥವಾ ಕೋರ್ಸ್-ಸಂಬಂಧಿತ ಖರ್ಚುಗಳ ಶೇ 50 (ಯಾವುದು ಕಡಿಮೆಯೋ ಅದು).

ಅರ್ಜಿ ಸಲ್ಲಿಸಲು ಕೊನೆ ದಿನ: 31-03-2025
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/SBIFS12

ದ ಡೂನ್ ಸ್ಕೂಲ್ ಪ್ರವೇಶಕ್ಕೆ...

ದ ಡೂನ್ ಸ್ಕೂಲ್ ಸ್ಕಾಲರ್ಷಿಪ್ ಎಕ್ಸಾಮಿನೇಷನ್ (ಡಿಎಸ್ಎಸ್ಇ), ಇದು ಡೂನ್ ಸ್ಕೂಲ್, ಡೆಹ್ರಾಡೂನ್, ಉತ್ತರಾಖಂಡ ನಡೆಸುವ ವಾರ್ಷಿಕ ಪ್ರವೇಶ ಪರೀಕ್ಷೆಯಾಗಿದೆ. ಶಾಲಾ ಶುಲ್ಕವನ್ನು ಪಾವತಿಸಲು ಅಸಮರ್ಥರಾದಂತಹ ಕುಟುಂಬಗಳ, 7 ಅಥವಾ 8ನೇ ತರಗತಿಗೆ ದಾಖಲಾಗುವಂಥ ಬಾಲಕರಿಗೆ ಈ ವಿದ್ಯಾರ್ಥಿವೇತನ ಪರೀಕ್ಷೆಯು ಲಭ್ಯವಿರುತ್ತದೆ.

ಅರ್ಹತೆ: ಭಾರತೀಯ ವಿದ್ಯಾರ್ಥಿಗಳಾಗಿರಬೇಕು. ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 30ಕ್ಕೆ 11ರಿಂದ 13 ವರ್ಷ ವಯಸ್ಸಿನವರಾಗಿರಬೇಕು. ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ವರ್ಷಕ್ಕೆ 7 ಅಥವಾ 8ನೇ ತರಗತಿಗೆ ದಾಖಲಾತಿಯನ್ನು ಪಡೆದಿರಬೇಕು.

ಆರ್ಥಿಕ ಸಹಾಯ: ವಿದ್ಯಾರ್ಥಿವೇತನದ ರೂಪದಲ್ಲಿ ಆರ್ಥಿಕ ಬೆಂಬಲದ ಸಹಿತ ಡೂನ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸುವ ಅವಕಾಶ.

ಅರ್ಜಿ ಸಲ್ಲಿಸಲು ಕೊನೆ ದಿನ: 15-04-2025

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮತ್ತು ಆಫ್ಲೈನ್ ಇ-ಮೇಲ್ ಮೂಲಕ: admissions@doonschool.com

ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/DSSE2

ವಿದೇಶದಲ್ಲಿ ಓದಲು ಜೆ.ಎನ್.ಟಾಟಾ ಎಂಡೋಮೆಂಟ್ ಲೋನ್

ವಿದೇಶದಲ್ಲಿ ಕಲಿಯಲು ಇಚ್ಛಿಸುವ ಭಾರತೀಯ ವಿದ್ಯಾರ್ಥಿಗಳಿಗೆ ಜೆ.ಎನ್.ಟಾಟಾ ಎಂಡೋಮೆಂಟ್ ‘ಲೋನ್ ಸ್ಕಾಲರ್ಷಿಪ್ ನೀಡುತ್ತಿದೆ.

ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಕಾಲೇಜು/ಸಂಸ್ಥೆಯಲ್ಲಿ ಪದವಿಯ ಕೊನೆಯ ವರ್ಷ ಕಲಿಯುತ್ತಿರಬೇಕು. ಅಭ್ಯರ್ಥಿಗಳು ವಿದೇಶದಲ್ಲಿ ಸ್ನಾತಕೋತ್ತರ/ಡಾಕ್ಟರಲ್/ಪೋಸ್ಟ್ ಡಾಕ್ಟರಲ್ ಅಧ್ಯಯನ ಮುಂದುವರಿಸಲು ಯೋಜನೆ ಹಾಕಿರಬೇಕು.

ಈ ಮೊದಲು ಈ ಸ್ಕಾಲರ್ಷಿಪ್ ಪಡೆದವರೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕ ಗಳಿಸಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45.

ಆರ್ಥಿಕ ಸಹಾಯ: ₹ 10 ಲಕ್ಷದವರೆಗೆ ಲೋನ್ ಸ್ಕಾಲರ್ಷಿಪ್

ಅರ್ಜಿ ಸಲ್ಲಿಸಲು ಕೊನೆ ದಿನ: 07-03-2025

ಹೆಚ್ಚಿನ ಮಾಹಿತಿಗೆ: Short Url:www.b4s.in/praja/JNT9⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.