ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಕೀಲರಾಗುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

Last Updated 20 ಫೆಬ್ರುವರಿ 2023, 0:30 IST
ಅಕ್ಷರ ಗಾತ್ರ

ಸರ್ಕಾರಿ ವಕೀಲರಾಗುವುದು ಹೇಗೆ?

1. ಸರ್ಕಾರಿ ವಕೀಲರಾಗುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಯಶಸ್ವೀ ವಕೀಲರಾಗಲು ಬಾರ್ ಕೌನ್ಸಿಲ್‌ ಮಾನ್ಯತೆ ಪಡೆದ ಕಾಲೇಜು/ವಿಶ್ವವಿದ್ಯಾಲಯದಿಂದಎಲ್‌ಎಲ್‌ಬಿ ಅಥವಾ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇದರ ಜೊತೆಗೆ, ವೃತ್ತಿಯ ಬಗ್ಗೆ ಸ್ವಾಭಾವಿಕ ಅಭಿರುಚಿ ಮತ್ತು ಆಸಕ್ತಿ, ಸಾಮಾನ್ಯ ಜ್ಞಾನ, ಕಾನೂನುಗಳ ಅರ್ಥೈಸುವಿಕೆ, ಉತ್ತಮ ಸಂವಹನ, ವಿಶ್ಲೇಷಾತ್ಮಕ ಕೌಶಲ ಗುಣಗಳಿರಬೇಕು. ಹಾಗೆಯೇ, ನೆನಪಿನ ಶಕ್ತಿ, ಸಮಯ ಪ್ರಜ್ಞೆ, ಸಮಯದ ನಿರ್ವಹಣೆ, ಜಾಗರೂಕತೆ ಇತ್ಯಾದಿ ವೃತ್ತಿ ಸಂಬಂಧಿತ ಕೌಶಲಗಳು ಅಗತ್ಯ.

ಪದವಿಯ ನಂತರ, ವಕೀಲಿ ವೃತ್ತಿಯ ಸೇವೆ ಸಲ್ಲಿಸಲು ಬಾರ್ ಆ್ಯಂಡ್ ಕೌನ್ಸಿಲ್‌ ಆಫ್ ಇಂಡಿಯ ಸಂಸ್ಥೆಯೊಂದಿಗೆ ನೋಂದಾಯಿಸಿಕೊಳ್ಳಬೇಕು. ದೇಶದ ಸಿವಿಲ್ ಅಥವಾ ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಕನಿಷ್ಠ ಮೂರು ವರ್ಷಗಳ ಸೇವೆ ಸಲ್ಲಿಸಿದ ನಂತರ ಸರ್ಕಾರಿ ವಕೀಲರಾಗಲು ಅರ್ಹತೆಯಿ ರುತ್ತದೆ. ಸರ್ಕಾರಿ ವಕೀಲರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಮೌಖಿಕ ಸಂದರ್ಶನವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:https://cetonline.karnataka.gov.in/kea/asstprosecutor

2. ನಾನು ಬಿಎ ಪದವಿ ಮುಗಿಸಿದ್ದೇನೆ. ನಾನು ನನ್ನ ಸಹಿಯನ್ನು ಕಾಲೇಜು ದಾಖಲಾತಿಗಳಲ್ಲಿ ಇರುವಂತೆ ಮಾಡಿದ್ದೇನೆ. ಈಗ ನನ್ನ ಸಹಿ ಮಾಡುವ ರೀತಿಯನ್ನು ಬದಲಾಯಿಸಬೇಕೆಂದುಕೊಂಡಿದ್ದೇನೆ. ಇದರಿಂದ ಏನಾದರೂ ತೊಂದರೆ ಆಗುತ್ತದೆಯೇ?

ಹೆಸರು, ಊರು ತಿಳಿಸಿಲ್ಲ.

ನಮ್ಮ ಅಭಿಪ್ರಾಯದಂತೆ ಹಿಂದಿನ ಮತ್ತು ನೂತನ ಸಹಿ ಇರುವ ಧೃಡೀಕರಿಸಿದ ಪ್ರಮಾಣ ಪತ್ರವನ್ನು ಮಾಡಬೇಕು. ಈಗಿರುವ ಕಾಲೇಜು ದಾಖಲೆಗಳಲ್ಲಿರುವ ಸಹಿಯನ್ನು ಬದಲಾವಣೆ ಮಾಡಬೇಕಿದ್ದಲ್ಲಿ ಪ್ರಮಾಣಪತ್ರದೊಂದಿಗೆ ಸಂಬಂಧಪಟ್ಟ ಕಾಲೇಜು/ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿ.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್ ಮತ್ತು ಸೂಕ್ತ ವೃತ್ತಿಯ ಆಯ್ಕೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ, ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಹಾಗೂ ವೃತ್ತಿ ಸಲಹೆಗಾರ ವಿ. ಪ್ರದೀಪ್‌ಕುಮಾರ್‌ ಉತ್ತರಿಸಲಿದ್ದಾರೆ.

ಪ್ರಶ್ನೆಗಳನ್ನು shikshana@prajavani.co.inಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT