ಆಳ-ಆಗಲ: ವಕೀಲರ ರಕ್ಷಣಾ ಕಾಯ್ದೆಗೆ ಆಗ್ರಹ; ಸರಿಯೆಷ್ಟು, ತಪ್ಪೆಷ್ಟು?
ವಕೀಲ ವೃತ್ತಿಯು ವರ್ಷದ 365 ದಿನವೂ ದೈಹಿಕ ಹಾಗೂ ಮಾನಸಿಕ ಶ್ರಮವನ್ನು ಬೇಡುವ ವೃತ್ತಿ. ವಕೀಲನಾದವನು ಕೆಲವೊಮ್ಮೆ ಬಿಡಿಗಾಸೂ ಇಲ್ಲದ ಬಡವನಿಂದ ಹಿಡಿದು, ಅವನಂತಹ 100 ಜನರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಸಾಮರ್ಥ್ಯವುಳ್ಳ ಧನಿಕನನ್ನೂ ಹಾಗೂ ಸಮಾಜವು ಅಪರಾಧಿ ಎಂದು ನೋಡುವ ವ್ಯಕ್ತಿಯನ್ನೂ ರಕ್ಷಿಸಲು ಸೆಣೆಸಾಡುವ ಒಂದು ಪವಿತ್ರ ವೃತ್ತಿ. ಕೆಲವೊಮ್ಮೆ ತನ್ನ ಕಕ್ಷಿದಾರನನ್ನು ರಕ್ಷಿಸುವ ಭರದಲ್ಲಿ ತಾನೇ ಇತರರ ಕೋಪಕ್ಕೆ ಗುರಿಯಾಗುವ ಪ್ರಸಂಗಗಳೂ ಉಂಟು. ವಕೀಲರಾದವರು ತಮ್ಮ ವೃತ್ತಿಯ ಮೂಲಕ ದೇಶದಲ್ಲಿ ನ್ಯಾಯದಾನದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ವಕೀಲರ ಮೇಲೆ ಇತ್ತೀಚೆಗೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಕೀಲರು ತಮ್ಮ ರಕ್ಷಣೆಗಾಗಿ ಕಾನೂನಿನ ಕದ ತಟ್ಟುವಂತಹ ಪರಿಸ್ಥಿತಿ ಎದುರಾಗಿದೆ.Last Updated 15 ಡಿಸೆಂಬರ್ 2022, 19:30 IST