ಬೆಂಗಳೂರು: ‘ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಕೀಲರ ಸಂಘದ ರಾಜ್ಯಮಟ್ಟದ ಸಮಾವೇಶವನ್ನು ನಗರದಲ್ಲಿ ಏಪ್ರಿಲ್ನಲ್ಲಿ ಆಯೋಜಿಸಲಾಗುವುದು’ ಎಂದು ಸಂಘದ ಸಂಘದ ಅಧ್ಯಕ್ಷ ಎಂ.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ನಡೆದ ಎರಡನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಬಾರ್ ಕೌನ್ಸಿಲ್ ಚುನಾವಣೆಗಳಲ್ಲಿ ಮೀಸಲಾತಿ ಇಲ್ಲ, ಅದಕ್ಕಾಗಿ ಹೋರಾಡಬೇಕಿದೆ. ಹಾಗೆಯೇ ಬಾರ್ ಕೌನ್ಸಿಲ್ ವಕೀಲರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿ ಗೆಲ್ಲಿಸಬೇಕು. ವಕೀಲರು ಭಿನ್ನಾಭಿಪ್ರಾಯ ಬದಿಗಿಟ್ಟು ಮಾದರಿ ಸಂಘ ಕಟ್ಟಬೇಕು. ಸ್ವಂತ ಕಚೇರಿ ಹೊಂದಲು ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

ಹೈಕೋರ್ಟ್ ವಕೀಲ ಬಾಲನ್, ‘ಹೈಕೋರ್ಟ್ಗಳಲ್ಲಿ ಮೀಸಲಾತಿ ಹೆಚ್ಚಿಸಬೇಕು. ನ್ಯಾಯಾಂಗದ ಹುದ್ದೆಗಳಲ್ಲಿ ಮೀಸಲಾತಿ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಚಲನಚಿತ್ರ ನಿರ್ದೇಶಕ ಜಡೇಶ್, ಸಂಘದ ಉಪಾಧ್ಯಕ್ಷ ಕೆ.ಪಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಂ. ಮುನಿರಾಜ್, ಖಜಾಂಚಿ ಟಿ.ಎಲ್. ನಾಗರಾಜು, ಆನೇಕಲ್ ವಕೀಲರ ಸಂಘದ ಅಧ್ಯಕ್ಷ ಫಟಾಫಟ್ ಪ್ರಕಾಶ್, ವಕೀಲರಾದ ಲೋಕನಾಥ್ ಜ್ಯೋತಿ ಮಳಲಿ, ಟಿ. ಮಂಜುಳಾ, ಮೋಹನ್ ಕುಮಾರ್, ಚಿಕ್ಕವೆಂಕಟಯ್ಯ, ನಾಗರಾಜ್, ಪ್ರವೀಣ ಮುಗುಳಿ, ಕೆ.ವೆಂಕಟೇಶ್, ಹೊಸಕೋಟೆ ಕೃಷ್ಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.